ಏಶ್ಯ ಕಪ್ ಹಾಕಿ: ಭಾರತ ತಂಡಕ್ಕೆ ಸವಿತಾ ನಾಯಕಿ
Team Udayavani, Jan 13, 2022, 5:40 AM IST
ಹೊಸದಿಲ್ಲಿ: ಮಸ್ಕತ್‌ನಲ್ಲಿ ನಡೆಯುವ ಏಶ್ಯ ಕಪ್ ಪಂದ್ಯಾವಳಿಗಾಗಿ ಅನುಭವಿ ಗೋಲ್‌ಕೀಪರ್ ಸವಿತಾ ಅವರನ್ನು ಭಾರತೀಯ ವನಿತಾ ಹಾಕಿ ತಂಡದ ನಾಯಕಿಯನ್ನಾಗಿ ನೇಮಿಸಲಾಗಿದೆ. ರಾಣಿ ರಾಮ್‌ಪಾಲ್ ಗಾಯಾಳಾಗಿರುವ ಕಾರಣ ಈ ಬದಲಾವಣೆ ಮಾಡಲಾಗಿದೆ.
ಈ ಪಂದ್ಯಾವಳಿ ಜ. 21ರಿಂದ 28ರ ತನಕ ಮಸ್ಕತ್‌ನ “ಸುಲ್ತಾನ್ ಕಾಬೂಸ್ ನ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಜರಗಲಿದೆ. ಹಾಲಿ ಚಾಂಪಿಯನ್ ಭಾರತ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ.
ಮೊದಲ ಲೀಗ್ ಪಂದ್ಯವನ್ನು ಜ. 23ರಂದು ಜಪಾನ್ ವಿರುದ್ಧ, ಮರುದಿನ ಸಿಂಗಾಪುರ ವಿರುದ್ಧ ಆಡಲಿದೆ. ಜ. 26ರಂದು ಸೆಮಿಫೈನಲ್ಸ್, ಜ. 28ರಂದು ಫೈನಲ್ ಹಣಾಹಣಿ ನಡೆಯಲಿದೆ. ಇಲ್ಲಿನ ಅಗ್ರ 4 ತಂಡಗಳು 2022ರ ವಿಶ್ವಕಪ್ ಹಾಕಿ ಪಂದ್ಯಾವಳಿಗೆ ಅರ್ಹತೆ ಸಂಪಾದಿಸಲಿವೆ.
ವನಿತಾ ತಂಡ: ಗೋಲ್ ಕೀಪರ್: ಸವಿತಾ (ನಾಯಕಿ), ರಜನಿ ಇಟಿಮರ್ಪು.
ಡಿಫೆಂಡರ್: ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ.
ಮಿಡ್ ಫೀಲ್ಡರ್: ನಿಶಾ, ಸುಶೀಲಾ ಚಾನು, ಮೋನಿಕಾ, ನೇಹಾ, ಸಲೀಮಾ ಟೇಟೆ, ಜ್ಯೋತಿ, ನವಜೋತ್ ಕೌರ್.
ಫಾರ್ವರ್ಡ್ಸ್: ನವನೀತ್ ಕೌರ್, ಲಾಲ್ರೆಮಿÕಯಾಮಿ, ವಂದನಾ ಕಟಾರಿಯಾ, ಮರಿಯಾನಾ ಕುಜುರ್, ಶರ್ಮಿಳಾ ದೇವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.