ಅಳುವ ಮಗು ಸಂತೈಸುತ್ತಲೇ ಹಾಕಿ ಆಡಿದ ಸಯೀದಾ!
Team Udayavani, Feb 5, 2017, 1:35 AM IST
ಧಾರವಾಡ: ಒಂದು ಕಡೆ ನಿರಂತರವಾಗಿ ಅಳುವ ಹತ್ತು ತಿಂಗಳು ಮಗುವನ್ನು ಸಂಭಾಳಿಸಬೇಕಾದ ಅನಿವಾರ್ಯತೆ, ಮತ್ತೂಂದು ಕಡೆ ಹಾಕಿ ಆಟವನ್ನೂ ಆಡಬೇಕಾದ ಒತ್ತಡ… ಸಾಮಾನ್ಯ ಜನರು ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಮಗುವನ್ನು ನೋಡಿಕೊಳ್ಳುವುದು ಸರಿಯೆಂದು ನಿರ್ಧರಿಸುವವರೇ ಜಾಸ್ತಿ. ಆದರೆ ಬೆಂಗಳೂರು
ಮೂಲದ ಹಾಕಿ ಆಟಗಾರ್ತಿ ಸಯೀದಾ ಖಾನಂ ಮಗುವನ್ನೂ ಸಂಭಾಳಿಸಿ ಹಾಕಿಯನ್ನೂ ಆಡಿ ಸೈ ಎನಿಸಿಕೊಂಡಿದ್ದಾರೆ. ಇಂತಹ ವಿಶೇಷ ಘಟನೆಗೆ ಸಾಕ್ಷಿಯಾಗಿದ್ದು ಧಾರವಾಡದಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್.
ಧಾರವಾಡ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಬಳ್ಳಾರಿ ಮತ್ತು ಹಾಸನ ತಂಡದ ನಡುವೆ ಹಾಕಿ ಪಂದ್ಯ ನಡೆಯಿತು. ಬಳ್ಳಾರಿ ಪರ ಆಡಿದ ಸಯೀದಾ ತಂಡ 2-1ರಿಂದ ಗೆಲ್ಲಲು ನೆರವಾದರು. ಸಯೀದಾರ ಕ್ರೀಡಾಸ್ಫೂರ್ತಿ
ಎದುರಾಳಿ ಹಾಸನ ಆಟಗಾರ್ತಿಯರನ್ನು ಅಚ್ಚರಿಗೆ ದೂಡಿತು.
ಮಗುವಿಗೆ ಹಾಲು ಕುಡಿಸುತ್ತಲೇ ಕಣಕ್ಕಿಳಿದರು!:
ಸಯೀದಾ 22 ವರ್ಷದ ಆಟಗಾರ್ತಿ. ಕಳೆದ ಎರಡು ವರ್ಷದ ಹಿಂದೆ ಬೆಂಗಳೂರಿನ ಮೊಹಮ್ಮದ್ ಅಕºರ್ ಜಲಾವುಲ್ಲಾರನ್ನು ವಿವಾಹವಾದರು. ಈಗ ದಂಪತಿಗೆ 10 ತಿಂಗಳು ಮಗುವಿದೆ. ರಾಜ್ಯ ಒಲಿಂಪಿಕ್ಸ್‌ನಲ್ಲಿ ಹಾಸನ ಕೂಡ ಬಲಿಷ್ಠವಾಗಿದ್ದರಿಂದ ಬಳ್ಳಾರಿ ಕೋಚ್ ಸಯೀದಾರನ್ನು ಆಡಿಸುವ ನಿರ್ಧಾರ ಮಾಡಿದರು. ಈ ರೀತಿಯ ಒಂದು
ನಿರೀಕ್ಷೆಯಿದ್ದಿದ್ದರಿಂದ ಸಯೀದಾ ಅಭ್ಯಾಸವನ್ನೂ ನಡೆಸಿದ್ದರು. ಪತಿಯೂ ಅದಕ್ಕೆ ಬೆಂಬಲವಾದರು. ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದು ಸಯೀದಾ ಬಾಟಲಿಯಲ್ಲಿ ಹಾಲು ಮಗುವಿಗೆ ಹಾಲು ಕುಡಿಸುತ್ತ ಕುಡಿಸುತ್ತಲೇ ಮಗುವನ್ನು ಬೇರೆಯವರ ಕೈಗೆ ಒಪ್ಪಿಸಿ ಕೈಯಲ್ಲಿ ಸ್ಟಿಕ್ ಹಿಡಿದು ಕಣಕ್ಕಿಳಿದಿದ್ದು. ಕಳೆದ 13 ವರ್ಷದಿಂದ ಹಾಕಿ ಆಡುತ್ತಿರುವ ಸಯೀದಾ
ತನ್ನ ಕ್ರೀಡೆಗಾಗಿ ತಮ್ಮನ್ನು ಅರ್ಪಿಸಿಕೊಂಡಿರುವ ರೀತಿಗೆ ಸಾಕ್ಷಿಯಿದು.
ಭಾರತ ತಂಡದಲ್ಲೂ ಆಡಿದ್ದಾರೆ: ವಿಶೇಷವೆಂದರೆ ಭಾರತ ಕಿರಿಯರ ತಂಡದ ಪರ ಏಷ್ಯನ್ ಗೇಮ್ಸ್‌ನಲ್ಲೂ ಆಡಿದ್ದಾರೆ. ರಾಜ್ಯದಲ್ಲೂ ದೀರ್ಘಕಾಲದಿಂದ ಹಾಕಿ ಆಡಿದ್ದಾರೆ. ತನ್ನ ತಂಡ ಬಳ್ಳಾರಿ ಚಾಂಪಿಯನ್ ಆಗುವವರೆಗೂ ತಾನು ವಿರಮಿಸುವುದಿಲ್ಲ ಎಂದು ಸಯೀದಾ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.