ರಿಯೋ ಓಪನ್ ಗೆದ್ದ ಡೀಗೊ ಶಾರ್ಟ್ಸ್ ಮನ್
Team Udayavani, Feb 27, 2018, 6:40 AM IST
ರಿಯೋ ಡಿ ಜನೈರೊ: ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್ 2 ವರ್ಷಗಳ ಕಾಯುವಿಕೆಯ ಬಳಿಕ ಎಟಿಪಿ ಟೆನಿಸ್ ಪ್ರಶಸ್ತಿಯೊಂದನ್ನು ಗೆದ್ದಿದ್ದಾರೆ. ಅವರು ರಿಯೋ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ವಿಶ್ವದ 23ನೇ ರ್‍ಯಾಂಕಿಂಗ್‌ನ ಶಾರ್ಟ್ಸ್ಮನ್ ರವಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ಅವರನ್ನು 6-2, 6-3ರಿಂದ ಮಣಿಸಿದರು. ಶಾರ್ಟ್ಸ್ಮನ್ ಇದೇ ಕೂಟದ ಡಬಲ್ಸ್‌ನಲ್ಲೂ ಫೈನಲ್ ತಲುಪಿದ್ದರು. ಆದರೆ ಅಲ್ಲಿ ಪ್ರಶಸ್ತಿ ಎತ್ತಲಾಗಲಿಲ್ಲ. ವಿಪರೀತ ದಣಿದರೂ ಸಿಂಗಲ್ಸ್ ಹೋರಾಟದಲ್ಲಿ ಪಟ್ಟು ಸಡಿಲಿಸಲಿಲ್ಲ.
“ನಾನು ಬಹಳ ಸುಸ್ತಾಗಿದ್ದೆ. ಆದರೆ ತಾಳ್ಮೆಯ ಆಟವಾಡಿದೆ. 2 ವರ್ಷಗಳ ಬಳಿಕ ಟೆನಿಸ್ ಪ್ರಶಸ್ತಿಯೊಂದನ್ನು ಗೆದ್ದಿರುವುದಕ್ಕೆ ಬಹಳ ಖುಷಿಯಾಗಿದೆ. ನನ್ನ ಪಾಲಿಗೆ ಇದು ಪರಿಪೂರ್ಣ ವಾರವಾಗಿತ್ತು’ ಎಂದು ಶಾರ್ಟ್ಸ್ಮನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.