ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!
Team Udayavani, Oct 23, 2021, 12:44 PM IST
ದುಬೈ: ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 12 ಹಂತ ಇಂದಿನಿಂದ ಆರಂಭವಾಗುತ್ತಿದೆ. ಮೊದಲ ಸುತ್ತಿನಲ್ಲಿ ಗೆದ್ದ ಸ್ಕಾಟ್ಲೆಂಡ್ ತಂಡವು ಸೂಪರ್ 12 ಗೆ ಅರ್ಹತೆ ಪಡೆದಿದ್ದು, ಗ್ರೂಪ್ ಬಿ ನಲ್ಲಿ ಸ್ಥಾನ ಪಡೆದಿದೆ.
ಬಿ ಗ್ರೂಪ್ ನಲ್ಲಿ ಸ್ಕಾಟ್ಲೆಂಡ್ ತಂಡವು ಭಾರತ, ಪಾಕಿಸ್ಥಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ಥಾನ ಮತ್ತು ನಮೀಬಿಯಾ ತಂಡಗಳನ್ನು ಎದುರಿಸಲಿದೆ.
ಸ್ಕಾಟ್ಲೆಂಡ್ ಬೌಲರ್ ಮಾರ್ಕ್ ವ್ಯಾಟ್ ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ್ದಾರೆ. ಮೂರು ಪಂದ್ಯಗಳಲ್ಲಿ 5.41 ಎಕಾನಮಿಯಲ್ಲಿ ಮೂರು ವಿಕೆಟ್ ಪಡೆದಿರುವ ಎಡಗೈ ಸ್ಪಿನ್ನರ್ ಮಾರ್ಕ್ ವ್ಯಾಟ್, “ನಾನು ವಿರಾಟ್ ವಿರುದ್ಧ ಕೆಲವು ಯೋಜನೆಗಳನ್ನು ಸಿದ್ದಪಡಿಸಿದ್ದೇನೆ. ಅವುಗಳನ್ನು ಪಂದ್ಯದಲ್ಲಿ ಬಳಸುತ್ತೇನೆ. ವಿರಾಟ್ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪ್ಯಾರಿಸ್ ಒಲಂಪಿಕ್ಸ್ : ಅಮೃತ ಕ್ರೀಡಾ ದತ್ತು,ರಾಜ್ಯದ 75 ಕ್ರೀಡಾಪಟುಗಳ ಆಯ್ಕೆ
ಸ್ಕಾಟ್ಲೆಂಡ್ ಮತ್ತು ಭಾರತದ ನಡುವಿನ ಪಂದ್ಯ ನವೆಂಬರ್ 5ರಂದು ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.