ಭಾರತ “ಎ’ಗೆ 2ನೇ ಜಯ
Team Udayavani, Dec 6, 2017, 9:58 AM IST
ಹುಬ್ಬಳ್ಳಿ: ಭಾರತ ಮಹಿಳಾ “ಎ’ ತಂಡ ಬಾಂಗ್ಲಾದೇಶ ಮಹಿಳಾ “ಎ’ ತಂಡದ ವಿರುದ್ಧದ ಏಕದಿನ ಸರಣಿಯ ದ್ವಿತೀಯ ಪಂದ್ಯವನ್ನೂ ಜಯಿಸುವ ಮೂಲಕ ಗೆಲುವಿನ ಓಟವನ್ನು ಮುಂದುವರಿಸಿದೆ.
ಇಲ್ಲಿನ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಪ್ರವಾಸಿ ತಂಡವನ್ನು 5 ವಿಕೆಟ್ಗಳಿಂದ ಮಣಿಸಿತು. ಲತಾ ಮೊಂಡಲ್ (71 ರನ್) ಹಾಗೂ ರುಮಾನಾ ಅಹ್ಮದ್ (65 ರನ್) ಅವರ ಅರ್ಧ ಶತಕಗಳ ಹೊರತಾಗಿಯೂ ಬಾಂಗ್ಲಾದೇಶ ಸೋಲು ಅನುಭವಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಸಮ್ರಿನ್ ಸುಲ್ತಾನ ಹಾಗೂ ಮುರ್ಷಿದಾ ಖಾತೂನ್ರನ್ನು ಅಲ್ಪ ಮೊತ್ತದಲ್ಲೇ ಕಳೆದುಕೊಂಡಿತು. ಆದರೆ ಲತಾ ಮೊಂಡಲ್ 5 ಬೌಂಡರಿ ಒಳಗೊಂಡಂತೆ ಭರ್ಜರಿ ಅರ್ಧ ಶತಕದ ಮೂಲಕ ಇನಿಂಗ್ಸ್ ಕಟ್ಟಿದರು. 31ನೇ ಓವರ್ನಲ್ಲಿ 100 ರನ್ ಗಳಿಸಿದ ಬಾಂಗ್ಲಾ ನಿಧಾನ ಗತಿಯಲ್ಲಿ ರನ್ ಪೇರಿಸಿತು. ರುಮಾನಾ ಅಹ್ಮದ್ ತಂಡದ ಮೊತ್ತ ಹೆಚ್ಚಿಸುವಲ್ಲಿ ಮಹತ್ವದ ಕೊಡುಗೆ ನೀಡಿದರು. ವೈಯಕ್ತಿಕ ಮೊತ್ತ 47 ಆದಾಗ ಕ್ಯಾಚ್ ಡ್ರಾಪ್ ಲಾಭ ಪಡೆದ ರುಮಾನಾ ಅರ್ಧ ಶತಕ ದಾಖಲಿಸಿದರು. 4ನೇ ವಿಕೆಟ್ ಜೊತೆಯಾಟದಲ್ಲಿ ಲತಾ ಮೊಂಡಲ್ ಹಾಗೂ ರುಮಾನಾ ಅಹ್ಮದ್ 107 ರನ್ ಪೇರಿಸಿದ್ದು ವಿಶೇಷ. ಮುಂದೆ 15 ರನ್ ಪೇರಿಸುವಷ್ಟರಲ್ಲಿ ತಂಡ 3 ವಿಕೆಟ್ ಕಳೆದುಕೊಂಡಿತು. 3.90 ರನ್ರೇಟ್ ಗತಿಯಲ್ಲಿ 7 ವಿಕೆಟ್ ಕಳೆದುಕೊಂಡು 195 ರನ್ ಸಂಪಾದಿಸಿತು.
ಗೆಲುವು ತಂದ ನೀನಾ, ನೇಹಾ, ವನಿತಾ: 196 ರನ್ಗಳ ಗುರಿ ಬೆನ್ನಟ್ಟಿದ ಭಾರತ ಮಹಿಳಾ “ಎ’ ತಂಡ ನೀನಾ ಚೌಧರಿ ಅರ್ಧ ಶತಕ (56 ರನ್) ವಿ.ಆರ್.ವನಿತಾ (42 ರನ್) ಹಾಗೂ ನೇಹಾ ತನ್ವರ್ (44 ರನ್) ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಇನ್ನೂ 11 ಎಸೆತಗಳು ಬಾಕಿ ಇರುವಂತೆ ಗೆಲುವು ತನ್ನದಾಗಿಸಿಕೊಂಡಿತು.
●ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.