ಅಂಕಿತ್ ನಿರ್ವಹಣೆಗೆ ಸೆಹವಾಗ್ ಮೆಚ್ಚುಗೆ
Team Udayavani, Apr 28, 2018, 6:00 AM IST
ಹೈದರಾಬಾದ್: ಗರುವಾರ ನಡೆದ ರೋಚಕ ಸೆಣಸಾಟದಲ್ಲಿ ಪಂಜಾಬ್ ತಂಡವು ಹೈದರಾಬಾದ್‌ಗೆ ಶರಣಾಗಿರಬಹುದು. ಆದರೆ ಪಂಜಾಬ್‌ನ ಹೀರೊ ಅಂಕಿತ್ ರಜಪೂತ್ ಅವರ ಅಮೋಘ ನಿರ್ವಹಣೆಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಮತ್ತು ಮೊಹಮ್ಮದ್ ಕೈಫ್ ಮೆಚ್ಚುಗೆ ಸೂಚಿಸಿದ್ದಾರೆ.
ಅಂಕಿತ್ ಶ್ರೇಷ್ಠ ನಿರ್ವಹಣೆ
ಈ ಪಂದ್ಯದ ಫಲಿತಾಂಶವನ್ನು ನಾವು ಇಷ್ಟಪಡುವುದಲ್ಲ. ಆದರೆ ಪಂದ್ಯದ ಆರಂಭದಲ್ಲಿ ಅಂಕಿತ್ ಅವರ ನಿರ್ವಹಣೆಯನ್ನು ಗಮನಿಸಬೇಕು. ಅವರು 14 ರನ್ನಿಗೆ 5 ವಿಕೆಟ್ ಕಿತ್ತು ಹೈದರಾಬಾದ್‌ನ ಕುಸಿತಕ್ಕೆ ಕಾರಣರಾಗಿದ್ದರು. ಗೆಲುವಿಗಾಗಿ ಹೈದರಾಬಾದ್‌ಗೆ ಅಭಿನಂದನೆಗಳು. ಯುವ ಅಂಕಿತ್ ಅವರ ಶ್ರೇಷ್ಠ ನಿರ್ವಹಣೆಗೆ ಕೂಡ ಎಂದು ಸೆಹವಾಗ್ ಟ್ವೀಟ್ ಮಾಡಿದ್ದಾರೆ. ಅಂಕಿತ್ ಈ ಐಪಿಎಲ್‌ನಲ್ಲಿ ಪಂಜಾಬ್ ಪರ 5 ವಿಕೆಟ್‌ಗಳ ಗೊಂಚಲನ್ನು ಪಡೆದ ಮೊದಲ ಬೌಲರ್ ಆಗಿದ್ದಾರೆ.
ಸನ್‌ರೈಸರ್ ಯಾವುದೇ ಮೊತ್ತವನ್ನು ಸಮ ರ್ಥಿಸಿಕೊಳ್ಳಲು ಸಮರ್ಥರಾಗಿದ್ದಾರೆ. ರಶೀದ್ ಅವರ ಬೌಲಿಂಗ್ ಅತ್ಯದ್ಭುತ. ಆದರೆ ಕೌಲ್, ಸಂದೀಪ್ ಮತ್ತು ಥಂಪಿ ಕೂಡ ಉತ್ತಮ ರೀತಿಯಲ್ಲಿ ಒತ್ತಡವನ್ನು ನಿಭಾಯಿಸಿ ಪಂಜಾಬ್ ಓಟಕ್ಕೆ ಬ್ರೇಕ್ ನೀಡಿದ್ದಾರೆ. ಪಂಜಾಬ್ ವಿರುದ್ಧ ಈ ಅಲ್ಪ ಮೊತ್ತವನ್ನು ಸಮರ್ಥಿಸಿಕೊಂಡಿರುವುದು ಶ್ರೇಷ್ಠ ಪ್ರಯತ್ನ ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.
ಆರನೇ ಸ್ಥಾನ
ಅಂಕಿತ್ ಅವರ ಈ ಸಾಧನೆಯಿಂದ ಅವರು ಐಪಿಎಲ್ ಇತಿಹಾಸದಲ್ಲಿ ಶ್ರೇಷ್ಠ ಬೌಲಿಂಗ್ ನಿರ್ವಹಣೆ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ಸೊಹೈಲ್ ತನ್ವೀರ್ ಅಗ್ರಸ್ಥಾನದಲ್ಲಿದ್ದಾರೆ. ಅವರು 2008ರಲ್ಲಿ ರಾಜಸ್ಥಾನ ಪರ 14 ರನ್ನಿಗೆ 6 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು.
ರಶೀದ್ ಶ್ರೇಷ್ಠ
ರಶೀದ್ ಖಾನ್ ಅವರ ಶ್ರೇಷ್ಠ ಬೌಲಿಂಗ್‌ನಿಂದಾಗಿ ಹೈದರಾಬಾದ್ ತಂಡವು ಪಂಜಾಬ್ ವಿರುದ್ಧ ನಂಬಲಾಗದ ಗೆಲುವು ಒಲಿಸಿಕೊಂಡಿದೆ. ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 19 ರನ್ನಿಗೆ ಮೂರು ವಿಕೆಟ್ ಕಿತ್ತು ಪಂಜಾಬ್‌ನ ಪತನಕ್ಕೆ ಕಾರಣರಾಗಿದ್ದರು. ಅವರ ನಿರ್ವಹಣೆ ಬಗ್ಗೆ ಟ್ವಿಟರ್‌ನಲ್ಲಿ ಬಹಳಷ್ಟು ಮೆಚ್ಚುಗೆಯ ಮಾತುಗಳು ಬಂದಿವೆ. ರಶೀದ್ ಖಾನ್ ಸಿಂಪ್ಲಿ ಬ್ರಿಲಿಯೆಂಟ್ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.