Semi ಸೋತ ಅಮನ್‌ ಸೆಹ್ರಾವತ್‌: ಕಂಚಿನ ಪದಕಕ್ಕಾಗಿ ಕಾದಾಡಬೇಕು


Team Udayavani, Aug 8, 2024, 11:18 PM IST

1-kusti

ಪ್ಯಾರಿಸ್‌: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಭಾರತದ ಏಕೈಕ ಪುರುಷ ಕುಸ್ತಿಪಟು ಅಮನ್‌ ಸೆಹ್ರಾವತ್‌ ಸೆಮಿಫೈನಲ್‌ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ. ಹೀಗಾಗಿ ಶುಕ್ರವಾರ ಅವರು ಕಂಚಿನ ಪದಕಕ್ಕಾಗಿ ಕಾದಾಡಲಿದ್ದಾರೆ.

ಗುರುವಾರ ನಡೆದ ಪ್ರಿ-ಕಾರ್ಟರ್‌ ಫೈನಲ್‌ ಮತ್ತು ಕ್ವಾರ್ಟರ್‌ ಫೈನಲ್‌ನಲ್ಲಿ ತಾಂತ್ರಿಕ ಮೇಲುಗೈ ಸಾಧಿಸುವ ಮೂಲಕ ಜಯ ಸಾಧಿಸಿದ್ದ ಅಮನ್‌, ಸೆಮಿಫೈನಲ್‌ನಲ್ಲಿ ಜಪಾನ್‌ನ ರೇಯ್‌ ಹೈಗುಚಿಗೆ ತಾಂತ್ರಿಕ ಮೇಲುಗೈ ಬಿಟ್ಟುಕೊಡುವ ಮೂಲಕ ಸೋಲನುಭವಿಸಿದರು.

57 ಕೆ.ಜಿ. ವಿಭಾಗದ ಕುಸ್ತಿಯ ರೆಪೆಶಾಜ್‌ ಸುತ್ತುಗಳು ಶುಕ್ರವಾರ ನಡೆಯಲಿದ್ದು, ಇಲ್ಲಿ ಗೆದ್ದುಬರುವ ಸ್ಪರ್ಧಿಯ ವಿರುದ್ಧ ಅಮನ್‌ ಸೆಣೆಸಲಿದ್ದಾರೆ. ಪ್ರಿ-ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಉತ್ತರ ಮ್ಯಾಕಡೋನಿಯಾದ ಸ್ಪರ್ಧಿ ವಿರುದ್ಧ 10-0 ಅಂತರದಿಂದ ಗೆದ್ದ ಅಮನ್‌, ಕ್ವಾರ್ಟರ್‌ ಫೈನಲ್‌ನಲ್ಲಿ ಅಲೆºàನಿಯಾದ ಝೆಲಿಮ್‌ಖಾನ್‌ ಅಬಕರೋವ್‌ ವಿರುದ್ಧ 12-0 ಅಂತರದಿಂದ ಜಯ ಸಾಧಿಸಿದರು. ಸೆಮಿಫೈನಲ್‌ನಲ್ಲಿ ಜಪಾನ್‌ ಸ್ಪರ್ಧಿ ವಿರುದ್ಧ 10-0 ಅಂತರದಿಂದ ಸೋಲನುಭವಿಸಿದರು.

3,000 ಮೀ. ಸ್ಟೀಪಲ್‌ಚೇಸ್‌ : ಅವಿನಾಶ್‌ ಸಾಬ್ಲೆಗೆ 11ನೇ ಸ್ಥಾನ
ಭಾರತದ ಅವಿನಾಶ್‌ ಸಾಬ್ಲೆ ಅವರು ಪುರುಷರ 3,000 ಮೀ. ಸ್ಟೀಪಲ್‌ಚೆಸ್‌ ಫೈನಲ್‌ನನಲ್ಲಿ 11ನೇ ಸ್ಥಾನ ಪಡೆದು ನಿರಾಶೆ ಮೂಡಿಸಿದರು. 29ರ ಹರೆಯದ ಅವರು 8:14.18 ಸೆ.ನಲ್ಲಿ ಗುರಿ ತಲುಪಿದ್ದರು. ಪ್ಯಾರಿಸ್‌ ಗೇಮ್ಸ್‌ಗಾಗಿ ಅವರು ದೀರ್ಘ‌ ಸಮಯದಿಂದ ವಿದೇಶದಲ್ಲಿ ಸಿದ್ಧತೆ ನಡೆಸುತ್ತಿದ್ದರು. ಮೊರೊಕ್ಕೋದ ಸೌಫಿಯಾನ್ಸ್‌ ಎಲ್‌ ಬಕ್ಕಾಲಿ ಚಿನ್ನ, ಅಮೆರಿಕದ ಕೆನ್ನೆತ್‌ ರೂಕ್ಸ್‌ ಬೆಳ್ಳಿ ಮತ್ತು ಕೀನ್ಯದ ಅಬ್ರಹಾಂ ಕಿಬಿವೋಟ್‌ ಕಂಚು ಪಡೆದರು.

ವಿಶ್ವದಾಖಲೆಯ ವೀರ ಇಥಿಯೋಪಿಯದ ಲಮೆಚ ಗಿರ್ಮ ಸ್ಪರ್ಧೆ ಮುಗಿಸಲು ವಿಫ‌ಲರಾದರು. ಕೊನೆ ಹಂತದಲ್ಲಿ ಅವರು ಟ್ರ್ಯಾಕ್‌ನಲ್ಲಿಯೇ ಕುಸಿದು ಬಿದ್ದರು.

ಜ್ಯೋತಿ ಯರ್ರಾಜಿ ನಿರಾಶೆ
ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಜ್ಯೋತಿ ಯರ್ರಾಜಿ ಅವರು ವನಿತೆಯರ 100 ಮೀ. ಹರ್ಡಲ್ಸ್‌ನಲ್ಲಿ ಸೆಮಿಫೈನಲಿಗೇರಲು ವಿಫ‌ಲರಾಗಿದ್ದಾರೆ. ಗುರುವಾರ ನಡೆದ ರೆಪಿಶೇಜ್‌ ಹೀಟ್‌ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದು ಹೊರಬಿದ್ದರು.

ಒಲಿಂಪಿಕ್ಸ್‌ನ 100ಮೀ. ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ವನಿತೆ ಎಂಬ ಗೌರವ ಪಡೆದ ಯರ್ರಾಜಿ ರೆಪಿಶೇಜ್‌ ಸುತ್ತಿನಲ್ಲಿ ನಿರಾಶಾದಾಯಕ ನಿರ್ವಹಣೆ ನೀಡಿದರು. ಒಟ್ಟಾರೆ 40 ಸ್ಪರ್ಧಿಗಳಲ್ಲಿ ಅವರು 16ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ಟಾಪ್ ನ್ಯೂಸ್

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

1st phase of Jharkhand assembly election today

Election: ಝಾರ್ಖಂಡ್‌ ವಿಧಾನಸಭೆಗೆ ಇಂದು 1ನೇ ಹಂತದ ಚುನಾವಣೆ

If you want an American visa, you have to wait 16 months now!

US Visa: ಅಮೆರಿಕ ವೀಸಾ ಬೇಕಿದ್ದರೆ 16 ತಿಂಗಳು ಕಾಯುವುದು ಈಗ ಅನಿವಾರ್ಯ!

PM has not read Constitution, I guarantee this: Rahul

Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್‌

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

Congress Govt.,: ಕಾಮಗಾರಿಯಲ್ಲಿ ಮುಸ್ಲಿಂ ಮೀಸಲು: ಬಿಜೆಪಿ

Congress Govt.,: ಕಾಮಗಾರಿಯಲ್ಲಿ ಮುಸ್ಲಿಂ ಮೀಸಲು: ಬಿಜೆಪಿ

Rain: ಇಂದಿನಿಂದ 3 ದಿನ ರಾಜ್ಯದ ವಿವಿಧೆಡೆ ಮಳೆ ಬೀಳುವ ಸಾಧ್ಯತೆ

Rain: ಇಂದಿನಿಂದ 3 ದಿನ ರಾಜ್ಯದ ವಿವಿಧೆಡೆ ಮಳೆ ಬೀಳುವ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli on the cover of Aussie magazine

BGT 2024: ಆಸೀಸ್‌ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ

women asian hockey champions trophy; India demolished South Korea

Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ

ATP Rankings; Sinner won year-end No.1 rank trophy

ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್‌ ಟ್ರೋಫಿ

champions trophy 2025

ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್‌ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ

Mohammed Shami finally returned to professional cricket

Shami: ಕೊನೆಗೂ ವೃತ್ತಿಪರ ಕ್ರಿಕೆಟ್‌ ಗೆ ಮರಳಿದ ಮೊಹಮ್ಮದ್‌ ಶಮಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

1st phase of Jharkhand assembly election today

Election: ಝಾರ್ಖಂಡ್‌ ವಿಧಾನಸಭೆಗೆ ಇಂದು 1ನೇ ಹಂತದ ಚುನಾವಣೆ

If you want an American visa, you have to wait 16 months now!

US Visa: ಅಮೆರಿಕ ವೀಸಾ ಬೇಕಿದ್ದರೆ 16 ತಿಂಗಳು ಕಾಯುವುದು ಈಗ ಅನಿವಾರ್ಯ!

PM has not read Constitution, I guarantee this: Rahul

Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್‌

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.