![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Dec 3, 2022, 10:42 PM IST
ದೋಹಾ: ಕ್ಯಾಮೆರೂನ್ ಹೊಡೆತಕ್ಕೆ 5 ಬಾರಿಯ ಚಾಂಪಿಯನ್ ಬ್ರೆಝಿಲ್ ಬೆಚ್ಚಿಬಿದ್ದಿದೆ. ಪೀಲೆ ನಾಡಿನ ಅಭಿಮಾನಿಗಳು ದಂಗಾಗಿದ್ದಾರೆ. ಆದರೆ ಈ ಸೋಲಿನ ಹೊರತಾಗಿಯೂ ಬ್ರೆಝಿಲ್ ನಾಕೌಟ್ ಪ್ರವೇಶಕ್ಕೇನೂ ಅಡ್ಡಿಯಾಗಿಲ್ಲ. ಈ ಐತಿಹಾಸಿಕ ಗೆಲುವಿನ ಹೊರತಾಗಿಯೂ ಕ್ಯಾಮೆರೂನ್‌ಗೆ ಮುನ್ನಡೆ ಸಾಧ್ಯವಾಗಿಲ್ಲ. “ಜಿ’ ಬಣದ ಇನ್ನೊಂದು ಪಂದ್ಯದಲ್ಲಿ ಸ್ವಿಜರ್ಲೆಂಡ್ ವಿರುದ್ಧ ಸೆರ್ಬಿಯ ಸೋತಿದ್ದರೆ, ಕ್ಯಾಮೆರೂನ್ ಮುನ್ನಡೆಯುತ್ತಿತ್ತು. ಆದರೆ ಸ್ವಿಜರ್ಲೆಂಡ್ ಗೆದ್ದು ಮೇಲೇರಿತು.
ಜಿ ಗುಂಪಿನಲ್ಲಿ ಬ್ರೆಝಿಲ್ ಮತ್ತು ಸ್ವಿಜರ್ಲೆಂಡ್ ತಲಾ 6 ಅಂಕ ಗಳಿಸಿದವು (2 ಗೆಲುವು, 1 ಸೋಲು). ಕ್ಯಾಮೆರೂನ್ ಮೂರಕ್ಕೆ ಕುಸಿಯಿತು (1 ಜಯ, 1 ಸೋಲು, 1 ಡ್ರಾ, 4 ಅಂಕ), ಸೆರ್ಬಿಯ ಅಂತಿಮ ಸ್ಥಾನಿಯಾಯಿತು (2 ಸೋಲು, 1 ಡ್ರಾ, 1 ಅಂಕ).
ಕ್ಯಾಮೆರೂನ್ ಇತಿಹಾಸ: “ಜಿ’ ವಿಭಾಗದ ಮುಖಾಮುಖಿಯಲ್ಲಿ ಬ್ರೆಝಿಲ್ ವಿರುದ್ಧ 1-0 ಅಂತರದ ಜಯಭೇರಿ ಮೊಳಗಿಸಿದ ಕ್ಯಾಮೆರೂನ್ ಹೊಸ ಇತಿಹಾಸವನ್ನೇ ನಿರ್ಮಿಸಿತು. ವಿಶ್ವಕಪ್ ಚರಿತ್ರೆಯಲ್ಲಿ ಬ್ರೆಝಿಲ್‌ಗೆ ಸೋಲುಣಿಸಿದ ಆಫ್ರಿಕಾ ಖಂಡದ ಮೊದಲ ದೇಶವೆಂಬ ಹಿರಿಮೆ ಕ್ಯಾಮೆರೂನ್‌ನದ್ದಾಯಿತು. ಹಾಗೆಯೇ ವೀರೋಚಿತವಾಗಿಯೇ ಕತಾರ್ ವಿಶ್ವಕಪ್‌ಗೆ ವಿದಾಯ ಹೇಳಿತು.
ಗೋಲುರಹಿತ ಡ್ರಾ ಆಗಬೇಕಿದ್ದ ಈ ಪಂದ್ಯಕ್ಕೆ ತಿರುವು ಕೊಟ್ಟವರು ವಿನ್ಸೆಂಟ್ ಅಬೂಬಕರ್. ಪೂರ್ಣಾವಧಿ ಕಳೆದು 2 ನಿಮಿಷದಲ್ಲಿ ಅವರು ಗೆಲುವಿನ ಗೋಲ್ ಸಿಡಿಸಿದರು. ಇದರೊಂದಿಗೆ ಬ್ರೆಝಿಲ್ ತಂಡದ ಹಂತದ ಸತತ 17 ಪಂದ್ಯಗಳ ಅಜೇಯ ವಿಶ್ವಕಪ್ ಲೀಗ್ ದಾಖಲೆ ಮುರಿಯಲ್ಪಟ್ಟಿತು.
ಗೋಲು ಬಾರಿಸಿದ ಸಂತಸದಲ್ಲಿ ವಿನ್ಸೆಂಟ್ ಅಬೂಬಕರ್ ತಮ್ಮ ಜೆರ್ಸಿಯನ್ನು ಕಿತ್ತೆಸೆದು ಸಂಭ್ರಮಿಸಿದರು. ಈ ಅಸಭ್ಯ ವರ್ತನೆಗೆ ಮರು ನಿಮಿಷದಲ್ಲೇ ಅವರಿಗೆ ರೆಡ್ ಕಾರ್ಡ್ ನೀಡಿ ಹೊರಗೆ ಕಳುಹಿಸಲಾಯಿತು. ಹೀಗೆ, ಗೋಲು ಬಾರಿಸಿದ ಬೆನ್ನಲ್ಲೇ ವಿಶ್ವಕಪ್ ಪಂದ್ಯದಿಂದ ಹೊರಬಿದ್ದು ಜಿನೆದಿನ್ ಜಿದಾನೆ ಸಾಲಿಗೆ ಸೇರಿದರು. ಇಟಲಿ ವಿರುದ್ಧದ 2006ರ ಫೈನಲ್‌ನಲ್ಲಿ ಜಿದಾನೆ ಈ ಶಿಕ್ಷೆಗೆ ಗುರಿಯಾಗಿದ್ದರು.
ಬ್ರೆಝಿಲ್‌ಗೆ ಒಂದೆರಡು ಸಲ ಗೋಲು ಬಾರಿಸುವ ಅವಕಾಶ ಎದುರಾಗಿತ್ತು. 14ನೇ ನಿಮಿಷದಲ್ಲೇ ಗೇಬ್ರಿಯಲ್ ಮಾರ್ಟಿನೆಲ್ಲಿ ಖಾತೆ ತೆರೆಯಲು ಸಜ್ಜಾಗಿದ್ದರು. ಆದರೆ ಇವರ “ಹೆಡರ್’ಗೆ ಡೇವಿಸ್ ಇಪಾಸ್ಸಿ ತಡೆಯೊಡ್ಡುವಲ್ಲಿ ಯಶಸ್ವಿಯಾದರು.
ಫಲಿತಾಂಶ
ಕ್ಯಾಮೆರೂನ್: 01
ಬ್ರೆಝಿಲ್: 00
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
You seem to have an Ad Blocker on.
To continue reading, please turn it off or whitelist Udayavani.