ಮಗು ಹೆತ್ತು ನಾಲ್ಕೇ ತಿಂಗಳಲ್ಲಿ ಸೆರೆನಾ ಮತ್ತೆ ಟೆನಿಸ್ ಅಂಗಳಕ್ಕೆ?
Team Udayavani, Dec 21, 2017, 8:51 AM IST
ನ್ಯೂಯಾರ್ಕ್: ಮಹಿಳಾ ಟೆನಿಸ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯರಲ್ಲೊಬ್ಬರಾದ ಸೆರೆನಾ ವಿಲಿಯಮ್ಸ್ ಮಗು ಹೆತ್ತ ನಾಲ್ಕೇ ತಿಂಗಳಿಗೆ ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ.
ಮತ್ತೆ ಮೈದಾನಕ್ಕಿಳಿಯಲು ಕಠಿನ ಶ್ರಮ ಪಡುತ್ತಿರುವ ಸೆರೆನಾ, ಮುಂದಿನ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡ ಲಿರುವುದಾಗಿ ಸಂಘಟಕರೇ ಈ ಹಿಂದೆ ತಿಳಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಸೆರೆನಾ ಟೆನಿಸ್ ಅಂಕಣದ ಚಿತ್ರವೊಂದನ್ನು ಪ್ರಕಟಿಸುವ ಮೂಲಕ ಆಡುವ ಸುಳಿವನ್ನೂ ನೀಡಿದ್ದು, ಟೆನಿಸ್ ಅಭಿಮಾನಿಗಳು ಖುಷ್ ಆಗಿದ್ದಾರೆ.
ಮಹಿಳೆಯರಲ್ಲೇ ಅತೀ ಹೆಚ್ಚು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಸೆರೆನಾ, ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗರ್ಭಿಣಿಯಾಗಿದ್ದಾಗಲೇ ಟೆನಿಸ್ ಆಡಿ, ಪ್ರಶಸ್ತಿ ಗೆದ್ದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು.
ಅನಂತರ ವಿಶ್ರಾಂತಿಗೆ ತೆರಳಿದ್ದ ಆವೆಮಣ್ಣು ಅಂಗಳದ ಒಡತಿ ಸೆರೆನಾ ವಿಲಿಯಮ್ಸ್ ಮತ್ತೀಗ ಟೆನಿಸ್ ಅಂಗಳಕ್ಕೆ ಕಾಲಿಡುವ ಉತ್ಸಾಹದಲ್ಲಿರುವುದಾಗಿ ಕ್ರೀಡಾ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.