36ರ ಹರೆಯ ಸೆರೆನಾ ವಿಲಿಯಮ್ಸ್ ಗೆ ಹೆಣ್ಣು ಮಗು ಜನನ
Team Udayavani, Sep 2, 2017, 11:37 AM IST
ಫ್ಲೋರಿಡಾ : ಟೆನಿಸ್ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್ ನಿನ್ನೆ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಸೆರೆನಾ ಮಾತ್ರವಲ್ಲದೆ ವಿಶ್ವಾದ್ಯಂತದ ಆಕೆಯ ಸಹ-ವೃತ್ತಿಪರರು ಮತ್ತು ಅಭಿಮಾನಗಳು ಈ ಸುದ್ದಿಯನ್ನು ಕೇಳಿ ಆನಂದ ತುಂದಿಲರಾಗಿದ್ದಾರೆ.
ಸೆರೆನಾ ವಿಲಿಯಮ್ಸ್ ಗೆ ಇದೇ ತಿಂಗಳಲ್ಲಿ 36ರ ಹರೆಯ ತುಂಬಲಿದೆ. ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್ ನಲ್ಲಿರುವ ಸೈಂಟ್ ಮೇರೀಸ್ ಮೆಡಿಕಲ್ ಸೆಂಟರ್ಗೆ ಆಕೆಯನ್ನು ನಿನ್ನೆ ಶುಕ್ರವಾರ ಹೆರಿಗೆಗಾಗಿ ಸೇರಿಸಲಾಗಿತ್ತು. ಸೆರೆನಾ ಗೆ ಹೆಣ್ಣು ಮಗು ಜನಿಸಿರುವ ಬಗ್ಗೆ ಆಕೆಯ ಪ್ರತಿನಿಧಿಗಳಿಂದ ಇನ್ನಷ್ಟೇ ಅಧಿಕೃತ ಹೇಳಿಕೆ ಹೊರಬೀಳಬೇಕಾಗಿದೆ.
ಸೆರೆನಾ ಳ ಅಕ್ಕ ವೀನಸ್ ವಿಲಿಯಮ್ಸ್ ತನ್ನ ತಂಗಿಗೆ ಹೆಣ್ಣು ಮಗು ಜನಿಸಿರುವುದನ್ನು ಅತ್ಯಂತ ಸಂಭ್ರಮೋಲ್ಲಾಸದಿಂದ ಸ್ವಾಗತಿಸಿದ್ದಾಳೆ. ತಾನು super excited ಆಗಿದ್ದೇನೆ ಎಂದಾಕೆ ಹೇಳಿದ್ದಾಳೆ.
ನ್ಯೂಯಾರ್ಕ್ನಲ್ಲೀಗ ಸಾಗುತ್ತಿರುವ ಯುಎಸ್ ಓಪನ್ ಮಹಿಳಾ ವಿಭಾಗದ ಮೂರನೇ ಸುತ್ತಿನ ಆಟದಲ್ಲಿ ಭಾಗಿಯಾಗಿರುವ ನಡುವೆಯೇ ವೀನಸ್ ವಿಲಿಯಮ್ಸ್ಗೆ ತನ್ನ ತಂಗಿ ಹೆಣ್ಣು ಮಗು ಹೆತ್ತಿರುವ ವಿಷಯ ಮಾಧ್ಯಮದ ಮೂಲಕ ಗೊತ್ತಾಗಿದೆ. “ನನಗೆ ತುಂಬ ಖುಷಿಯಾಗಿದೆ’ ಎಂದಷ್ಟೇ ಹೇಳಿದ ಆಕೆ ತನ್ನ ಆಟದ ಮೇಲೆ ಕೇಂದ್ರೀಕೃತವಾಗಿರುವ ತನ್ನ ಮನಸ್ಸನ್ನು ಇತರೆಡೆ ಹರಿಯ ಬಿಡದಿರುವ ಕಾರಣಕ್ಕೆ ಸುದ್ದಿಗಾರರ ಯಾವುದೇ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.