ಸೆರೆನಾ ವಿಲಿಯಮ್ಸ್‌ಗೆ ಶ್ರೇಯಾಂಕ ಯಾಕಿಲ್ಲ|
Team Udayavani, May 30, 2018, 6:00 AM IST
ಪ್ಯಾರಿಸ್: ವಿಶ್ವದ ಮಾಜಿ ನಂ.1 ಆಟಗಾರ್ತಿ, ಆಧುನಿಕ ಟೆನಿಸ್‌ನಲ್ಲಿ ಗರಿಷ್ಠ ಮಹಿಳಾ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಗೆದ್ದು ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯಾಗಿ ಮೂಡಿಬಂದಿರುವ ಸೆರೆನಾ ವಿಲಿಯಮ್ಸ್ ಈ ಬಾರಿಯ ಫ್ರೆಂಚ್ ಓಪನ್‌ನಲ್ಲಿ ಆಡುತ್ತಿದ್ದಾರೆ. ದುರದೃಷ್ಟವಶಾತ್ ಅವರಿಗೆ ಕೂಟದಲ್ಲಿ ಶ್ರೇಯಾಂಕ ಲಭಿಸಿಲ್ಲ. ಬದಲಿಗೆ ನೇರ ಪ್ರವೇಶದಲ್ಲಿ ಆಡುತ್ತಿದ್ದಾರೆ. ಸಂಘಟಕರ ಈ ಕ್ರಮಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಘಟಕರ ಈ ತೀರ್ಮಾನಕ್ಕೆ ಕಾರಣ ಸೆರೆನಾ ಕಳೆ ದೊಂದು ವರ್ಷ ಟೆನಿಸ್‌ನಿಂದ ದೂರವಿದ್ದದ್ದು. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ಅನಂತರ ಸೆರೆನಾ ಅನಿವಾರ್ಯವಾಗಿ ಟೆನಿಸ್‌ನಿಂದ ದೂರವಿದ್ದರು. ಅಷ್ಟು ಮಾತ್ರವಲ್ಲ ಅವರ ಆರೋಗ್ಯವೂ ಸರಿಯಿರಲಿಲ್ಲ.
ಸೆರೆನಾ ಟೆನಿಸ್‌ಗೆ ಮರಳಿ ಮತ್ತೆ ಆಡುತ್ತಿದ್ದಾರೆ. ಆದರೆ ಅವರ ಶ್ರೇಯಾಂಕ 453ಕ್ಕೆ ಕುಸಿದಿದೆ. ಫ್ರೆಂಚ್ ಓಪನ್‌ನಲ್ಲಿ ಶ್ರೇಯಾಂಕ ನೀಡದೇ ಇರುವುದಕ್ಕೆ ಬೊರಿಸ್ ಬೆಕರ್, ರೋಜರ್ ಫೆಡರರ್, ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.