ಇಂದು ಸರಣಿ ನಿರ್ಣಾಯಕ ಏಕದಿನ; ಕೊಹ್ಲಿ ಆಡುವುದು ಅನುಮಾನ
ವಿಂಡೀಸಿಗೂ ಗೆಲುವಿನ ಭರವಸೆ; ಮತ್ತೆ ಪ್ರಯೋಗವೋ? ಸರಣಿ ಗೆಲುವಿನ ಯೋಗವೋ?
Team Udayavani, Aug 1, 2023, 7:30 AM IST
ಟರೂಬ (ಟ್ರಿನಿಡಾಡ್ ಆ್ಯಂಡ್ ಟೊಬೆಗೊ): ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯನ್ನು ಪ್ರಯೋಗಕ್ಕಾಗಿ ಮೀಸಲಿರಿಸಿರುವ ಟೀಮ್ ಇಂಡಿಯಾ ಇದರಲ್ಲಿ ಮಿಶ್ರ ಫಲ ಅನುಭವಿಸಿದೆ. ಶನಿವಾರದ ದ್ವಿತೀಯ ಏಕದಿನ ಪಂದ್ಯದಲ್ಲಿ ಸೋಲನುಭವಿಸಿದ ಕಾರಣ ಸರಣಿ ಸಮಬಲಕ್ಕೆ ಬಂದಿದೆ. ಮಂಗಳವಾರ ಇಲ್ಲಿನ “ಬ್ರಿಯಾನ್ ಲಾರಾ ಸ್ಟೇಡಿಯಂ’ನಲ್ಲಿ 3ನೇ ಹಾಗೂ ನಿರ್ಣಾಯಕ ಮುಖಾಮುಖೀ ಏರ್ಪಡಲಿದೆ. ಭಾರತ ಮತ್ತೆ ಪ್ರಯೋಗಕ್ಕೆ ಒಡ್ಡಿಕೊಳ್ಳಲಿದೆಯೋ ಅಥವಾ ಸರಣಿ ಗೆಲುವಿನ ಯೋಗವೇನಾದರೂ ಕೂಡಿಬರಲಿದೆಯೋ ಎಂಬುದು ಮುಖ್ಯ ಪ್ರಶ್ನೆ.
ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ತಂಡವೊಂದು ಪ್ರಯೋಗ ನಡೆಸುವುದು ತಪ್ಪಲ್ಲ. ಆದರೆ ಇಲ್ಲಿ ಸರಣಿ ಗೆಲುವು ಮೊದಲ ಗುರಿಯಾಗಬೇಕಿತ್ತು ಎಂಬುದು ಅನೇಕರ ವಾದ. ಇದನ್ನೆಲ್ಲ ಆಸ್ಟ್ರೇಲಿಯ ತಂಡದಿಂದ ನೋಡಿ ಕಲಿಯಬೇಕಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರೆಲ್ಲ ಸರಣಿ ಗೆಲ್ಲಿಸಿಕೊಟ್ಟು, ಬೇಕಿದ್ದರೆ 3ನೇ ಪಂದ್ಯದಲ್ಲಿ ಹೊರಗುಳಿಯಬಹುದಿತ್ತು ಎಂಬ ತರ್ಕದಲ್ಲಿ ಹುರುಳಿಲ್ಲದಿಲ್ಲ.
ಒಂದು ವೇಳೆ ಈ ಸೀನಿಯರ್ ಆಟಗಾರರೇ ವಿಶ್ರಾಂತಿ ಪಡೆಯುವುದಿದ್ದರೆ ವೆಸ್ಟ್ ಇಂಡೀಸ್ಗೆ ಏಕೆ ಹೋಗಬೇಕಿತ್ತು ಎಂಬುದು ಮತ್ತೂಂದು ಪ್ರಶ್ನೆ. ಈಗ ತಂಡ ತೀವ್ರ ಒತ್ತಡದಲ್ಲಿ 3ನೇ ಮುಖಾ ಮುಖೀಯಲ್ಲಿ ಸೆಣಸಬೇಕಿದೆ. 2006ರ ಬಳಿಕ ವಿಂಡೀಸ್ ವಿರುದ್ಧ ಏಕದಿನ ಸರಣಿ ಸೋಲದ ಭಾರತ, ಈ ಗೆಲುವಿನ ಸರಪಳಿಯನ್ನು ಮುಂದು ವರಿಸಿಕೊಂಡು ಹೋಗಬೇಕಾದ ಅಗತ್ಯವಿದೆ. ಈ ಪಂದ್ಯದಿಂದಲೂ ವಿರಾಟ್ ಕೊಹ್ಲಿ ಹೊರಗುಳಿಯುವರೇ ಎಂಬ ಪ್ರಶ್ನೆಯೊಂದು ಕಾಡಲಾರಂಭಿಸಿದೆ. ಕಾರಣ, ತಂಡದೊಂದಿಗೆ ಅವರು ಟ್ರಿನಿಡಾಡ್ಗೆ ಪ್ರಯಾಣಿಸಿಲ್ಲ.
ಕೆಲವರ ಫಾರ್ಮ್ ನಿರ್ಣಾಯಕ
ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಉಮ್ರಾನ್ ಮಲಿಕ್ ಅವರ ಫಾರ್ಮ್ ಭಾರತಕ್ಕೆ ನಿರ್ಣಾಯಕವಾಗಬೇಕಿದೆ. ಬೇಕಿದ್ದರೆ ಈ ಯಾದಿಗೆ ಶುಭಮನ್ ಗಿಲ್ ಅವರನ್ನೂ ಸೇರಿಸಿಕೊಳ್ಳಬಹುದು. ಇಲ್ಲಿನ ಮೂರೂ ಬ್ಯಾಟರ್ ಟಿ20 ಜೋಶ್ ಅನ್ನು ಏಕದಿನದಲ್ಲಿನ್ನೂ ತೋರ್ಪಡಿಸಿಲ್ಲ. ಹಾಗೆಯೇ ಉಮ್ರಾನ್ ಮಲಿಕ್ ವೇಗಕ್ಕೆ ಒತ್ತು ನೀಡುತ್ತಾರೆಯೇ ಹೊರತು ಇನ್ನೂ ವಿಕೆಟ್ ಟೇಕರ್ ಎನಿಸಿಲ್ಲ.
ವಿಶ್ವಕಪ್ ವೇಳೆ ಇವರಲ್ಲಿ ಎಷ್ಟು ಮಂದಿ ಭಾರತ ತಂಡದಲ್ಲಿರುತ್ತಾರೋ ಎಂಬುದು ಪ್ರಶ್ನೆಯಲ್ಲ. ಏಕೆಂದರೆ ಬುಮ್ರಾ, ಶಮಿ, ಅಯ್ಯರ್, ರಾಹುಲ್ ಮೊದಲಾದವರು ವಾಪಸಾಗುವಾಗ ಈಗಿನ ತಂಡದ ಅನೇಕರು ಜಾಗ ಖಾಲಿ ಮಾಡಲೇಬೇಕಾಗುತ್ತದೆ. ಆದರೆ ಕೋಚ್ ರಾಹುಲ್ ದ್ರಾವಿಡ್ ಹೇಳಿದಂತೆ, “ಯಾವುದೇ ಸನ್ನಿವೇಶವನ್ನು ಎದುರಿಸಲು ಈ ಪ್ರತಿಭಾನ್ವಿತರು ಸಜ್ಜಾಗಿ ನಿಲ್ಲಬೇಕಿದೆ. ಮುಂದೆ ಇವರಿಗೆ ಹೆಚ್ಚಿನ ಅವಕಾಶ ಇಲ್ಲದ ಕಾರಣ ವಿಂಡೀಸ್ ವಿರುದ್ಧವೇ ಪ್ರಯೋಗ ನಡೆಸಲಾಗಿದೆ’. ಇದನ್ನೂ ಒಪ್ಪಬೇಕಾಗುತ್ತದೆ. ಹಾಗೆಯೇ ಇಲ್ಲಿ ಇನ್ನೊಂದು ಕಾರಣವೂ ಇದೆ.
ಅದೆಂದರೆ, ನಮ್ಮವರು ವೆಸ್ಟ್ ಇಂಡೀಸ್ ತಂಡವನ್ನು ಕಳಪೆ ಎಂದು ತೀರ್ಮಾನಿಸಿದ್ದು! ಅವರು ಮೊದಲ ಪಂದ್ಯದಲ್ಲಿ ಆಡಿದ ರೀತಿ ಹಾಗಿತ್ತು.
ಬಹುಶಃ ಉಸ್ತುವಾರಿ ನಾಯಕ ಹಾರ್ದಿಕ್ ಪಾಂಡ್ಯ ಸಮರ್ಥ ಕಾರ್ಯತಂತ್ರ ರೂಪಿಸಿದ್ದರೆ ಶನಿವಾರವೇ ಭಾರತ ಸರಣಿ ಗೆಲ್ಲುವ ಸಾಧ್ಯತೆ ಇತ್ತು. ನಮ್ಮವರು ಆಡಿದ ರೀತಿ ನೋಡಿದರೆ, ಈ ಪಂದ್ಯವನ್ನು ಬಹಳ ಲಘುವಾಗಿ ತೆಗೆದುಕೊಂಡಂತಿತ್ತು. ವಿಶ್ವಕಪ್ ಅರ್ಹತೆಯನ್ನೇ ಪಡೆಯದ ತಂಡದ ವಿರುದ್ಧ ಈ ರೀತಿ ಆಡಿ ಸೋಲುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಮಂಗಳವಾರ ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ.
ಹೋಪ್ ಹೊಸ ಭರವಸೆ
ದ್ವಿತೀಯ ಪಂದ್ಯದಲ್ಲಿ ಪೇಸರ್ ರೊಮಾರಿಯೊ ಶೆಫರ್ಡ್, ಎಡಗೈ ಸ್ಪಿನ್ನರ್ ಗುಡಕೇಶ್ ಮೋಟಿ, ನಾಯಕ ಶೈ ಹೋಪ್ ಮತ್ತು ಕೇಸಿ ಕಾರ್ಟಿ ಭಾರತಕ್ಕೆ ಸಂದಿಗ್ಧ ಸ್ಥಿತಿಯನ್ನು ತಂದೊಡ್ಡಿದ್ದರು. “ನಮ್ಮ ತಂಡ ಮರಳಿ ಕಠಿನ ಹೋರಾಟ ನಡೆಸಿ ಲಯ ಸಾಧಿಸಿದೆ. ಅಂತಿಮ ಪಂದ್ಯದಲ್ಲಿ ಇದನ್ನು ಪುನರಾವರ್ತಿಸುವುದು .ಮುಖ್ಯ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಸರಣಿ ಗೆಲ್ಲುವುದು ನಮ್ಮ ಯೋಜನೆ’ ಎಂಬುದಾಗಿ ನಾಯಕ ಶೈ ಹೋಪ್ ಹೇಳಿದ್ದಾರೆ. ಅಜೇಯ 63 ರನ್ ಮಾಡಿ ತಂಡವನ್ನು ದಡ ಸೇರಿಸಿದ ಹೋಪ್ ವಿಂಡೀಸ್ ತಂಡಕ್ಕೆ ಹೊಸ ಭರವಸೆ ಮೂಡಿಸಿ ರುವುದು ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.