ವಿಶ್ವಕಪ್ ಸೋಲಿನೊಂದಿಗೆ ಟಿ20 ಅಗ್ರಸ್ಥಾನ ಬಿಟ್ಟುಕೊಟ್ಟ ಶಫಾಲಿ ವರ್ಮಾ
Team Udayavani, Mar 9, 2020, 4:25 PM IST
ದುಬೈ: ವನಿತಾ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದ ಬಳಿಕ ಸೋಲಿನ ಬಳಿಕ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಐಸಿಸಿ ರಾಂಕಿಂಗ್ ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಸಿಡಿದ ಆಸೀಸ್ ನ ಬೆತ್ ಮೂನಿ ಐಸಿಸಿ ಟಿ20 ರಾಂಕಿಂಗ್ ನ ಅಗ್ರಸ್ಥಾನಿಯಾಗಿ ಮೂಡಿಬಂದಿದ್ದಾರೆ. ಕೂಟದಲ್ಲಿ ಮೂನಿ 64ರ ಸರಾಸರಿಯಲ್ಲಿ 259 ರನ್ ಗಳಸಿದ್ದರು. ವನಿತಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆ ಬರೆದ ಮೂನಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಲೀಗ್ ಹಂತದ ಪ್ರದರ್ಶನದ ನಂತರ ಪ್ರಥಮ ಸ್ಥಾನಿಯಾಗಿದ್ದ ಶಫಾಲಿ, ಫೈನಲ್ ಪಂದ್ಯದಲ್ಲಿ ಗಳಿಸಿದ್ದು ಕೇವಲ ಎರಡು ರನ್. ಇದರಿಂದಾಗಿ ಶಫಾಲಿ ಅಗ್ರ ಸ್ಥಾನ ಕಳೆದುಕೊಂಡಿರುವುದು ಮಾತ್ರವಲ್ಲದೇ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಎರಡನೇ ಸ್ಥಾನದಲ್ಲಿ ಕಿವೀಸ್ ನಾಯಕಿ ಸೂಜಿ ಬೇಟ್ಸ್ ಮುಂದುವರಿದಿದ್ಧಾರೆ.
ಆಸೀಸ್ ನ ಅಲಿಲಿಸಾ ಹೀಲಿ ಐದನೇ ಸ್ಥಾನಕ್ಕೇರಿದ್ದು, ಭಾರತದ ಸ್ಮೃತಿ ಮಂಧನಾ ಒಂದು ಸ್ಥಾನ ಜಾರಿ ಏಳನೇ ರಾಂಕ್ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.