Shakib Al Hasan: ಇಸಿಬಿ ಆಟಗಳಲ್ಲಿ ಬೌಲಿಂಗ್ ಮಾಡದಂತೆ ಶಕೀಬ್ ಅಲ್ ಹಸನ್ ಗೆ ನಿಷೇಧ
Team Udayavani, Dec 14, 2024, 4:05 PM IST
ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ (Shakib Al Hasan) ಅವರನ್ನು ಇಸಿಬಿ ಆಯೋಜಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ಬೌಲಿಂಗ್ ಮಾಡುವುದರಿಂದ ಅಮಾನತು ಮಾಡಿದೆ.
ಶಕೀಬ್ ಅವರ ಬೌಲಿಂಗ್ ಕ್ರಮವನ್ನು ಕಾನೂನುಬಾಹಿರವೆಂದು ಪರಿಗಣಿಸಿದ ನಂತರ ಬೌಲಿಂಗ್ ನಡೆಸುವುದನ್ನು ಅಮಾನತು ಮಾಡಿದೆ.
ಟೌಂಟನ್ ನಲ್ಲಿ ನಡೆದ ಸಾಮರ್‌ಸೆಟ್ ವಿರುದ್ಧದ ಕೌಂಟಿ ಪಂದ್ಯದಲ್ಲಿ ಸೆಪ್ಟಂಬರ್‌ನಲ್ಲಿ ಸರ್ರೆ ಪರ ಆಡಿದ ಸಂದರ್ಭದಲ್ಲಿ ಎಡಗೈ ಸ್ಪಿನ್ನರ್ ಶಕೀಬ್ ಬೌಲಿಂಗ್ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿತ್ತು. ಆನ್-ಫೀಲ್ಡ್ ಅಂಪೈರ್ ಗಳಾದ ಸ್ಟೀವ್ ಒ’ಶೌಗ್ನೆಸ್ಸಿ ಮತ್ತು ಡೇವಿಡ್ ಮಿಲ್ಸ್ ಅವರು ಆ ಆಟದಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದ ಶಕೀಬ್ ಅವರ ಬೌಲಿಂಗ್ ಕ್ರಿಯೆಯಲ್ಲಿ ದೋಷ ಪತ್ತೆ ಮಾಡಿದರು. ಅಲ್ಲದೆ ಬಳಿಕ ಶಕೀಬ್ ಅವರು ಬೌಲಿಂಗ್ ಶೈಲಿ ಪರೀಕ್ಷೆಗೆ ಒಳಗಾದರು.
712 ಅಂತಾರಾಷ್ಟ್ರೀಯ ವಿಕೆಟ್ ಪಡೆದಿರುವ ಶಕೀಬ್ ಅಲ್ ಹಸನ್ ಅವರ 17 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಬೌಲಿಂಗ್ ಶೈಲಿಯ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INWvWIW: ವೆಸ್ಟ್ ಇಂಡೀಸ್ ವಿರುದ್ದ ಏಕದಿನ-ಟಿ20 ಸರಣಿಗೆ ಭಾರತ ವನಿತಾ ತಂಡ ಪ್ರಕಟ
Pakistan Cricket: ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮೊಹಮ್ಮದ್ ಅಮೀರ್
BGT 25: ಗಾಬಾದಲ್ಲಿ ಮಳೆ ಕಾಟ; 13 ಓವರ್ ಗೆ ನಿಂತ ಟೆಸ್ಟ್ ಆಟ; ಅವಕಾಶ ಪಡೆದ ಜಡ್ಡು, ದೀಪ್
ODI; ಮೊದಲ ಪಂದ್ಯದಲ್ಲೇ ಜಂಗೂ ಶತಕ : ವಿಂಡೀಸ್ ಕ್ಲೀನ್‌ಸ್ವೀಪ್ ಸಾಹಸ
MAHE: ಅಖಿಲ ಭಾರತ ಅಂತರ್ ವಿ.ವಿ. ವನಿತಾ ಟೆನಿಸ್ ಆರಂಭ
MUST WATCH
ಹೊಸ ಸೇರ್ಪಡೆ
Magadi Bus Stand: ಮಾಗಡಿ ಬಸ್ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
INWvWIW: ವೆಸ್ಟ್ ಇಂಡೀಸ್ ವಿರುದ್ದ ಏಕದಿನ-ಟಿ20 ಸರಣಿಗೆ ಭಾರತ ವನಿತಾ ತಂಡ ಪ್ರಕಟ
BBK11: ರಜತ್ – ಧನರಾಜ್ ಫೈಟ್.. ರಜತ್‌ರನ್ನು ಪಂಜರದೊಳಗೆ ಹಾಕಿ ಶಿಕ್ಷೆ ನೀಡಿದ ಕಿಚ್ಚ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.