BANvsNED; ಅರ್ಧಶತಕದ ಬೆನ್ನಲ್ಲೇ ‘ಸೆಹ್ವಾಗ್ ಯಾರು…?’ ಎಂದು ಪ್ರಶ್ನಿಸಿದ ಶಕೀಬ್ ಅಲ್ ಹಸನ್
Team Udayavani, Jun 14, 2024, 12:48 PM IST
ಕಿಂಗ್ಸ್ ಟೌನ್: ನೆದರ್ಲ್ಯಾಂಡ್ ವಿರುದ್ದ ಗೆಲುವು ಸಾಧಿಸಿದ ಬಾಂಗ್ಲಾದೇಶವು ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 8 ಹಂತದ ಸನಿಹಕ್ಕೆ ಬಂದಿದೆ. ಅನುಭವಿ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರ ಅರ್ಧಶತಕದ ನೆರವಿನಿಂದ ಬಾಂಗ್ಲಾ ತಂಡವು ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಶಕೀಬ್ ಅವರು ಭಾರತೀಯ ಬ್ಯಾಟರ್ ವೀರೆಂದ್ರ ಸೆಹ್ವಾಗ್ ಅವರ ಟೀಕೆಗೆ ಉತ್ತರಿಸಿದ್ದು, ‘ಯಾರು ಸೆಹ್ವಾಗ್’ ಎಂದಿದ್ದಾರೆ.
ಶಕೀಬ್ ಬಹಳ ಹಿಂದೆಯೇ ಟಿ20 ಫಾರ್ಮ್ಯಾಟ್‌ನಿಂದ ನಿವೃತ್ತಿ ಹೊಂದಬೇಕಿತ್ತು ಎಂದು ಸೆಹ್ವಾಗ್ ಹೇಳಿದ್ದರು. ಟಿ20 ಸ್ವರೂಪದಲ್ಲಿ ಅವರ ಇತ್ತೀಚಿನ ರನ್ ಗಳು ‘ನಾಚಿಕೆಗೇಡು’ ಎಂದು ಟೀಕೆ ಮಾಡಿದ್ದರು.
“ನಿಮ್ಮ ಅನುಭವಕ್ಕಾಗಿ ನೀವು ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಿದ್ದರೆ, ಅದು ನಿಜವಾಗಿಯೂ ಯೋಗ್ಯವಾಗಿದೆ ಎಂದು ತೋರಿಸಿ. ನೀವು ಕ್ರೀಸ್ ನಲ್ಲಿ ಸ್ವಲ್ಪ ಸಮಯ ಕಳೆಯಬೇಕು. ನೀವು ಆಡಮ್ ಗಿಲ್‌ಕ್ರಿಸ್ಟ್ ಅಥವಾ ಮ್ಯಾಥ್ಯೂ ಹೇಡನ್ ಅಲ್ಲ. ಹುಕ್ಸ್ ಮತ್ತು ಪುಲ್ ಗಳು ನಿಮ್ಮದಲ್ಲ. ನೀವು ಬಾಂಗ್ಲಾದೇಶದ ಆಟಗಾರ; ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡುತ್ತೀರಿ” ಎಂದು ಕ್ರಿಕ್ ಬಜ್ ನಲ್ಲಿ ಮಾತನಾಡುತ್ತಾ ಸೆಹ್ವಾಗ್ ಹೇಳಿದರು.
ನೆದರ್ಲ್ಯಾಂಡ್ ವಿರುದ್ದದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಶಕೀಬ್ ಅವರಿಗೆ ಪತ್ರಕರ್ತರು ಸೆಹ್ವಾಗ್ ಅವರ ಟೀಕೆಯ ಬಗ್ಗೆ ಹೇಳಿದರು. ಈ ವೇಳೆ ಶಕೀಬ್ ಅವರು ‘ಯಾರು ಸೆಹ್ವಾಗ್’ ಎಂದರು.
Shakib Al Hasan, the most arrogant cricketer in the his history.
Journalist: There has been lot of discussions about your performance especially criticize by Virendra Sehwag”
Shakib: Who is Sehwag?
pic.twitter.com/wtqlGrdeX3— Farrago Abdullah Parody (@abdullah_0mar) June 14, 2024
ಆಟಗಾರನ ಕೆಲಸ ಉತ್ತರಗಳನ್ನು ನೀಡುವುದಲ್ಲ, ತನ್ನ ತಂಡಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಕೊಡುಗೆ ನೀಡುವುದು ಎಂದು ಶಕೀಬ್ ಹೇಳಿದರು.
“ಒಬ್ಬ ಆಟಗಾರ ಯಾವುದೇ ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ಬ್ಯಾಟರ್ ಆದರೆ ತಂಡಕ್ಕಾಗಿ ಬ್ಯಾಟಿಂಗ್ ಮಾಡುವುದು, ಬೌಲರ್ ಆದರೆ ಉತ್ತಮ ಓವರ್ ಗಳನ್ನು ಎಸೆಯುವುದು. ಫೀಲ್ಡರ್ ಆಗಿದ್ದರೆ ಆದಷ್ಟು ರನ್ ಉಳಿಸುವುದು ಮತ್ತು ಸಾಧ್ಯವಾದಷ್ಟು ಕ್ಯಾಚ್ ಗಳನ್ನು ಪಡೆಯವುದು ಆಟಗಾರನ ಕೆಲಸ. ಇಲ್ಲಿ ಯಾರಿಗೂ ಉತ್ತರ ಕೊಡಬೇಕು ಎಂದಿಲ್ಲ. ಆಟಗಾರ ಪ್ರದರ್ಶನ ನೀಡದೆ ಇದ್ದಾಗ ಇಂತಹ ಮಾತುಗಳು ಬರುತ್ತದೆ, ಇದು ಕೆಟ್ಟ ವಿಚಾರ ಎಂದು ನನಗೆ ಅನಿಸುವುದಿಲ್ಲ” ಎಂದರು.
ನೆದರ್ಲ್ಯಾಂಡ್ ವಿರುದ್ದದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಅವರು 46 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.