ಶಕಿಬ್, ಬಾಂಗ್ಲಾ ಸರ್ವಾಧಿಕ ಮೊತ್ತ
Team Udayavani, Jan 14, 2017, 3:45 AM IST
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಎದುರಿನ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದ 2ನೇ ದಿನ ಬಾಂಗ್ಲಾದೇಶ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಅವರ ಅಮೋಘ 217 ರನ್ ಹಾಗೂ ಕೀಪರ್ ಮುಶ್ಫಿಕರ್ ರಹೀಂ ಅವರ 159 ರನ್ ಸಾಹಸದಿಂದ 7 ವಿಕೆಟಿಗೆ 542 ರನ್ ಪೇರಿಸಿದೆ.
ಕಿವೀಸ್ ಎದುರು ಬಾಂಗ್ಲಾ ಐನೂರರ ಗಡಿ ದಾಟಿದ್ದು ಇದೇ ಮೊದಲು. ಸದ್ಯ ಇದು ಬಾಂಗ್ಲಾ ಟೆಸ್ಟ್ ಕ್ರಿಕೆಟಿನ 4ನೇ ಅತ್ಯಧಿಕ ಸ್ಕೋರ್ ಆಗಿದೆ. ಇನ್ನೂ 3 ವಿಕೆಟ್ ಕೈಲಿರುವುದರಿಂದ ಬಾಂಗ್ಲಾಕ್ಕೆ 2ನೇ ಅಥವಾ 3ನೇ ಅತ್ಯಧಿಕ ಮೊತ್ತವನ್ನು ಗಳಿಸುವ ಅವಕಾಶವಿದೆ. ಶ್ರೀಲಂಕಾ ಎದುರಿನ 2013ರ ಗಾಲೆ ಪಂದ್ಯದಲ್ಲಿ 638 ರನ್ ಪೇರಿಸಿದ್ದು ಬಾಂಗ್ಲಾದ ದಾಖಲೆ.
ಇದು ಎಡಗೈ ಆಟಗಾರ ಶಕಿಬ್ ಬಾರಿಸಿದ 4ನೇ ಶತಕ ಹಾಗೂ ಪ್ರಥಮ ದ್ವಿಶತಕವೆಂಬುದು ವಿಶೇಷ. ಅಷ್ಟೇ ಅಲ್ಲ, ಇದು ಬಾಂಗ್ಲಾದೇಶ ಟೆಸ್ಟ್ ಇತಿಹಾಸದಲ್ಲಿ ದಾಖಲಾದ ಸರ್ವಾಧಿಕ ವೈಯಕ್ತಿಕ ಗಳಿಕೆಯೂ ಹೌದು. ಪಾಕಿಸ್ಥಾನ ವಿರುದ್ಧದ 2015ರ ಖುಲಾ ಟೆಸ್ಟ್‌ನಲ್ಲಿ ತಮಿಮ್ ಇಕ್ಬಾಲ್ 206 ರನ್ ಹೊಡೆದದ್ದು ಈವರೆಗಿನ ಬಾಂಗ್ಲಾ ದಾಖಲೆ ಆಗಿತ್ತು. 276 ಎಸೆತ ನಿಭಾಯಿಸಿದ ಶಕಿಬ್ 31 ಬೌಂಡರಿ ಬಾರಿಸಿ ಮೆರೆದರು. ಮುಶ್ಫಿಕರ್ ರಹೀಂ 159 ರನ್ನಿಗೆ 276 ಎಸೆತ ಎದುರಿಸಿದರು. ಬಾರಿಸಿದ್ದು 23 ಬೌಂಡರಿ ಹಾಗೂ ಒಂದು ಸಿಕ್ಸರ್. ಇದು ರಹೀಂ ಅವರ 4ನೇ ಶತಕ.
ಶಕಿಬ್-ರಹೀಂ ಸೇರಿಕೊಂಡು 5ನೇ ವಿಕೆಟಿಗೆ 359 ರನ್ ಸೂರೆಗೈದರು. ಇದು ಟೆಸ್ಟ್ ಇತಿಹಾಸದಲ್ಲಿ 5ನೇ ವಿಕೆಟಿಗೆ ದಾಖಲಾದ 4ನೇ ಅತಿ ದೊಡ್ಡ ಜತೆಯಾಟ. ಹಾಗೆಯೇ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ಬಾಂಗ್ಲಾ ಟೆಸ್ಟ್ ಚರಿತ್ರೆಯ ಅತಿ ದೊಡ್ಡ ಜತೆಯಾಟವೂ ಹೌದು.
ಬಾಂಗ್ಲಾದೇಶ 3ಕ್ಕೆ 154 ರನ್ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಶುಕ್ರವಾರದ ಆಟಕ್ಕೆ ಮಳೆ ಎದುರಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-7 ವಿಕೆಟಿಗೆ 542 (ಶಕಿಬ್ 217, ರಹೀಂ 159, ಮೊಮಿನುಲ್ 64, ತಮಿಮ್ 56, ವ್ಯಾಗ್ನರ್ 124ಕ್ಕೆ 3, ಬೌಲ್ಟ್ 121ಕ್ಕೆ 2, ಸೌಥಿ 144ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.