ಸಾವು ಗೆದ್ದುಬಂದ ಶಾಲಿನಿ ಈಗ ಸ್ಫೂರ್ತಿ ಸರಸ್ವತಿ…
Team Udayavani, Dec 24, 2017, 6:00 AM IST
ಬೆಂಗಳೂರು: ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ಸೋಲುವವರೇ ಜಾಸ್ತಿ. ಕೆಲವರು ಸವಾಲುಗಳಿಗೆ ತಿರುಗಿಬಿದ್ದು, ತಾವೇ ಗೆಲ್ಲುತ್ತಾರೆ. ಗೆಲ್ಲುವ ದಾರಿ ಕಾಣದೇ ತಳಮಳಿಸುವವರಿಗೆ ಸ್ಫೂರ್ತಿಯಾಗುತ್ತಾರೆ. ಅಂಥದ್ದೇ ಒಂದು ಬದುಕು ಗೆದ್ದ ಕಥೆ ಇದು. ಜತೆ ಜೊತೆಗೆ, ನಮ್ಮದು ಬದುಕೇ ಅಲ್ಲ ಎಂದು ಮರುಕ ಪಡುವವರಲ್ಲಿ ಸ್ಫೂರ್ತಿ ಹುಟ್ಟಿಕೊಂಡರೆ ಅದು ಈ ಬದುಕಿನ ಸಾರ್ಥಕತೆ!
ಈಕೆಯ ಹೆಸರು ಶಾಲಿನಿ ಸರಸ್ವತಿ, ಈಗ 39 ವರ್ಷ. 5 ವರ್ಷದ ಹಿಂದೆ ಗರ್ಭಿಣಿಯಾಗಿದ್ದಾಗ ದೇಹಕ್ಕೆ ಸೇರಿದ ಬ್ಯಾಕ್ಟೀರಿಯಾ ದಾಳಿಗೊಳಗಾಗಿ ಎರಡೂ ಕೈಗಳು ಕಿತ್ತುಕೊಂಡು ಹೋದವು. ಅದು ಸಾಲದೆನ್ನುವಂತೆ ಎರಡೂ ಕಾಲುಗಳು ಮಂಡಿಯಿಂದ ಕೆಳಗೆ ಮುರಿದು ಹೋದವು. ಇಂಥ ದುರ್ಭರ ಗಳಿಗೆಯನ್ನು ಎದುರಿಸಿದ ಶಾಲಿನಿ ಬದುಕಿನ ಮರಳುಗಾಡಿನಲ್ಲಿ ಸಸಿಯೊಂದು ಚಿಗುರೊಡೆದು ಬಲಿಷ್ಠವಾಗುವಂತೆ ಮಾಡಿದರು.
ಹೌದು, ಶಾಲಿನಿ ಈಗ “ಬ್ಲೇಡ್ ರನ್ನರ್’. ಮುರಿದು ಹೋದ ಎರಡೂ ಕಾಲುಗಳಿಗೆ ಕೃತಕ ಕಾಲುಗಳನ್ನು ಜೋಡಿಸಿಕೊಂಡು ಓಡುವ ಅಭ್ಯಾಸ ನಡೆಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಶಾಲಿನಿ ವಿಶೇಷ ಚೇತನರಿಗಾಗಿ ನಡೆಯುವ ಕಾಮನ್‌ವೆಲ್ತ್, ಏಷ್ಯಾಡ್‌ಗೆ ಅರ್ಹತೆ ಗಿಟ್ಟಿಸಲಿದ್ದಾರೆ. ವಿಶ್ವ 10ಕೆ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಿ ಮೆಚ್ಚುಗೆಗೆ ಪಾತ್ರರಾಗಿರುವ ಶಾಲಿನಿ, ಮುಂಬರುವ ಅಂಗವಿಕಲರ ಕಾಮನ್ವೆಲ್ತ್, ಏಷ್ಯಾಡ್‌ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಆ ದುರಂತ ನಡೆದಿದ್ದು ಹೀಗೆ…: ಅದೊಂದು ದಿನ ನವವಿವಾಹಿತ ಪ್ರಶಾಂತ್-ಶಾಲಿನಿ ನೂರಾರು ಕನಸುಗಳೊಂದಿಗೆ ಕಾಂಬೋಡಿಯಾ ಪ್ರವಾಸ ತೆರಳಿದ್ದರು. ಹಿಂತಿರುಗಿ ಬರುವಾಗ ಜ್ವರದಿಂದ ಬಳಲುತ್ತಿದ್ದ ಪತ್ನಿ ಇದ್ದಕ್ಕಿದಂತೆ ಎರಡೂ ಕಾಲು ಕಳೆದುಕೊಂಡರು. ಗಾಯದ ಮೇಲೆ ಬರೆ ಎನ್ನುವಂತೆ ಕೆಲವೇ ದಿನಗಳಲ್ಲಿ ಕೈಗಳನ್ನೂ ಕಳೆದುಕೊಂಡರು.
“ರಿಕ್ಟಿಷಿಯಲ್’ ಎಂಬ ಮಾರಕ ಬ್ಯಾಕ್ಟೀರಿಯಾ ಹರಡಿರುವುದು ಗೊತ್ತಾಗುವ ಹೊತ್ತಿಗೆ ಶಾಲಿನಿ ಸಾವಿನ ಸನಿಹ ತಲುಪಿದ್ದರು. ಗರ್ಭಿಣಿಯಾಗಿದ್ದ ಹೊತ್ತಿನಲ್ಲಿ ರಿಕ್ಟಿಷಿಯಲ್ ಬ್ಯಾಕ್ಟೀರಿಯಾ ದೇಹ ಸೇರಿದರೆ ಚೇತರಿಸಿಕೊಳ್ಳುವುದು ಅಸಾಧ್ಯ. ಅದೇ ಕಾರಣಕ್ಕೆ ಆಕೆ ಬದುಕುವುದಿಲ್ಲ. ಸಂಬಂಧಿಕರನ್ನೆಲ್ಲ ಕರೆಸಿಬಿಡಿ ಎಂದು ವೈದ್ಯರೇ ತಿಳಿಸಿದ್ದರು. ಆದರೆ ಮುಂದೆ ನಡೆದಿದ್ದೆಲ್ಲ ಪವಾಡ.
ಪುನರ್ಜನ್ಮ ಕಥೆಯಿದು: ಅಕ್ಷರಶಃ ಸಾವನ್ನು ಗೆದ್ದು ಪುನರ್ಜನ್ಮ ಪಡೆದ ಕಥೆಯನ್ನು ಸ್ವತಃಶಾಲಿನಿಯೇ “ಉದಯವಾಣಿ’ಯೆದುರು ತೆರೆದಿಟ್ಟರು. ಅದರ ನಿರೂಪಣೆ ಇಲ್ಲಿದೆ…
“ಮೂಲತಃ ನಾನು ಕೇರಳದವಳು. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದೇವೆ. ನನಗೀಗ 39 ವರ್ಷ. ಸದ್ಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದೇನೆ. 2012ಕ್ಕೂ ಮೊದಲು ನಾನು ಎಲ್ಲರಂತೆ ಕುಣಿದು ಕುಪ್ಪಳಿಸಿ ಸಂತೋಷದಿಂದಿದ್ದೆ. ಅದು 2012-2013ರ ಸಮಯ. ನಾನು ಮದುವೆಯಾಗಿ ಹೊಸ ಜೀವನ ಆರಂಭಿಸುತ್ತಿದ್ದ ದಿನಗಳು. ಈ ವೇಳೆ ನಾನು- ನನ್ನ ಪತಿ ಪ್ರಶಾಂತ್ ಕಾಂಬೋಡಿಯಾ ಪ್ರವಾಸಕ್ಕೆ ತೆರಳಲು ನಿರ್ಧರಿಸಿದೆವು.
ಪ್ರವಾಸದಿಂದ ಬಂದ ಬಳಿಕ ನಾನು ತಾಯಿಯಾಗುತ್ತಿದ್ದೇನೆ ಎನ್ನುವ ಸಿಹಿ ಸುದ್ದಿ ಸಿಕ್ಕಿತು. ಅದೇ ವೇಳೆ ನನಗೆ ಅತೀವ ಜ್ವರ ಬಂದಿತ್ತು. ವೈದ್ಯರು ಜ್ವರಕ್ಕೆ ಔಷಧ ನೀಡಿದರು. ಏನು ಮಾಡಿದರೂ ಜ್ವರ ಕಡಿಮೆಯಾಗಲಿಲ್ಲ. ಆಗ ವೈದ್ಯರು ರಕ್ತ ಪರೀಕ್ಷೆ ನಡೆಸಿ ಪ್ಲೇಟ್‌ಲೆಟ್ ಕಡಿಮೆ ಕಂಡುಬಂದಿದ್ದರಿಂದ ಡೆಂ à ಎಂದು ವರದಿ ನೀಡಿದರು. ಬಳಿಕ ಅದು ಡೆಂಫೀಯಲ್ಲ ಮಾರಕ ಬ್ಯಾಕ್ಟೀರಿಯಾ ಸೋಂಕು ಎನ್ನುವುದು ತಿಳಿಯಿತು.
ಮುಂದೆ ಶಸ್ತ್ರಚಿಕಿತ್ಸೆ ನಡೆಸಿದರು. ಇನ್ನಿಲ್ಲದ ನೋವು ಅನುಭವಿಸಿದೆ. ಅದುವರೆಗೆ ಎಲ್ಲರಂತೆ ಇದ್ದ ನಾನು ಪ್ರವಾಸದ ಬಳಿಕ ಕಾಲು ಕಳೆದುಕೊಂಡೆ. ಕೆಲವು ದಿನಗಳ ಬಳಿಕ ಕೈಗಳನ್ನೂ ಕಳೆದುಕೊಂಡೆ. ಮರಗಟ್ಟಿ ಹೋಗಿದ್ದ ಕೈನ ಬೆರಳುಗಳು ಕೊಳೆತು ಉದುರುತ್ತಿದ್ದವು. ಕಣ್ಣೀರಿನಿಂದ ಕೈತೊಳೆಯುವಂತಾದೆ.
ಪತ್ನಿಗಾಗಿ ಪ್ರಶಾಂತ್ ಹೋರಾಟ: 2013ರ ಏ.5ರಂದು ನನ್ನ ಪತಿಯನ್ನು ಕರೆದು ವೈದ್ಯರು ನಿಮ್ಮ ಪತ್ನಿ ಉಳಿಯುವುದಿಲ್ಲ. ಆಕೆ ದೇಹದ ವಿವಿಧ ಅಂಗಗಳು ವಿಫಲಗೊಂಡಿವೆ. ಹೃದಯ ಬಡಿತ ನಿಲ್ಲುವ ಹಂತದಲ್ಲಿದೆ. ಜೀವಂತವಾಗಿ ಉಳಿಯುವ ಸಾಧ್ಯತೆ ಶೇ.5ಷ್ಟು ಮಾತ್ರ ಇದೆ. ಆಕೆ ತಂದೆ-ತಾಯಿಗೆ ಕೂಡಲೇ ವಿಷಯ ತಿಳಿಸಿ ಎಂದಿದ್ದರು. ನನ್ನ ಪತಿ ನನ್ನ ಸ್ನೇಹಿತರಿಗೆಲ್ಲ ವಿಷಯ ಹೇಳಿದರು. ಅವರ್ಯಾರೂ ನಂಬಲಿಲ್ಲ. ನಾವಿಬ್ಬರು ಸೇರಿಕೊಂಡು ಏಪ್ರಿಲ್ ಫೂಲ್ ಮಾಡುತ್ತಿದ್ದೇವೆ ಎಂದೆ ಅವರೆಲ್ಲ ಅಂದುಕೊಂಡಿದ್ದರು. ಅತ್ತ ಪ್ರಜ್ಞೆ ತಪ್ಪಿದ್ದ ನನಗೆ ಏನೂ ತಿಳಿದಿರಲಿಲ್ಲ. 2013ರ ಏಪ್ರಿಲ್ 5ರಂದು ನನಗೆ ಪ್ರಜ್ಞೆ ಬಂತು. ನನ್ನ ಹುಟ್ಟು ಹಬ್ಬದಂದೇ ಮರುಜನ್ಮ ಪಡೆದೆ.
ಬದುಕಿಸಿದ ಆರ್ಯುವೇದ: ಆಸ್ಪತ್ರೆಯಿಂದ ಬದುಕಿ ಬಂದ ಬಳಿಕ ಕೈಗಳಿಗೂ ರೋಗ ತಗುಲಿದ್ದು ಗೊತ್ತಾಯಿತು. ಒಂದು ದಿನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಎಡಗೈ ಮೂಳೆ ಮುರಿಯಿತು. ಮತ್ತೂಂದು ಸಲ ನನ್ನ ತಮ್ಮ ನನ್ನ ಕೈಹಿಡಿದಿದ್ದಾಗ ಬಲಗೈ ಲಟಕ್ ಎಂದು ಮುರಿಯಿತು. ಕೂಡಲೇ ನಾವು ಕೇರಳಕ್ಕೆ ತೆರಳಿ ಆರ್ಯುವೇದಿಕ್ ಚಿಕಿತ್ಸೆ ಮಾಡಿಸಿಕೊಂಡೆವು. ಇಡೀ ದೇಹಕ್ಕೆ ರೋಗಾಣು ಹರಡುವುದನ್ನು ಅಲ್ಲಿನ ಮದ್ದು ತಡೆಗಟ್ಟಿತು. ಪ್ರಾಣಾಪಾಯದಿಂದ ಬಚಾವ್ ಆದೆ.
ಕೋಚ್ ಅಯ್ಯಪ್ಪ ದೇವರು: ಆರ್ಯುವೇದಿಕ್ ಚಿಕಿತ್ಸೆ ಬಳಿಕ ಆರಂಭದಲ್ಲಿ ಮನೆಯಲ್ಲೇ ಇದ್ದುದರಿಂದ ಬೊಜ್ಜು ಬರುವುದಕ್ಕೆ ಶುರುವಾಯಿತು. ಇದನ್ನು ಕರಗಿಸಲು ಜಿಮ್‌ಗೆ ಹೋದೆ. ಅಲ್ಲಿ ನನ್ನ ನೋಡಿ ಇವರಿಗೆ ವ್ಯಾಯಾಮ ಮಾಡಿಸುವುದು ಹೇಗೆ ಗೊತ್ತಾಗುತ್ತಿಲ್ಲ ಎಂದು ಜಿಮ್‌ನವರು ಹೇಳಿದರು. ಕಾಲು, ಕೈ ಇಲ್ಲದ ನನಗೆ ವ್ಯಾಯಾಮ ಏನು ಹೇಳಿಕೊಡುವುದಕ್ಕೆ ಅವರು ಭಯಪಟ್ಟರು. ಬಳಿಕ ನನ್ನ ಯಜಮಾನರ ಸ್ನೇಹಿತರ ಮೂಲಕ ಅಥ್ಲೆಟಿಕ್ಸ್ ಕೋಚ್ ಎ.ಬಿ.ಅಯ್ಯಪ್ಪ ಪರಿಚಯವಾಯಿತು. ಅವರು ನನಗೆ ತರಬೇತಿ ನೀಡಲು ಒಪ್ಪಿದರು. ಎಲ್ಲರಂತೆ ನನ್ನನ್ನೂ ಅಥ್ಲೀಟ್ ಆಗಿ ರೂಪಿಸಿದರು. ಬ್ಲೇಡ್ ಕಟ್ಟಿಕೊಂಡು 2 ಬಾರಿ ವಿಶ್ವ 10ಕೆ ಓಡಿದೆ. ಇದಕ್ಕೆಲ್ಲ ಸ್ಫೂರ್ತಿ ತುಂಬಿದ್ದು ಅಯ್ಯಪ್ಪ. ನನ್ನ ಪಾಲಿಗೆ ಅವರೇ ದೇವರು.
ನಾನೇ ಮಗು ನನಗೇಕೆ ಮಗು?
ಗರ್ಭಿಣಿಯಾಗಿದ್ದ ನಾನು ರೋಗಾಣು ದೇಹದೊಳಕ್ಕೆ ಸೇರಿದ ಕಾರಣಕ್ಕೆ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡೆ. ತಾಯಿ ಆಗಬೇಕೆನ್ನುವ ನನ್ನ ಕನಸು ಕಮರಿ ಹೋಯಿತು. ಪತಿಗೆ ಈಗ ನಾನೇ ಮಗು. ನನ್ನನ್ನೇ ನೋಡಿಕೊಳ್ಳುವುದು ಅವರಿಗೆ ಕಷ್ಟ. ಹೀಗಿರುವಾಗ ನನಗ್ಯಾಕೆ ಮಗು? ನನ್ನ ಪತಿ ಪ್ರಶಾಂತ್ ಅತ್ಯಂತ ಕಷ್ಟದ ನಡುವೆಯೂ ನನ್ನನ್ನು ಉಳಿಸಿದ್ದಾರೆ. ಇಂತಹ ಪತಿ ಪಡೆಯಲು ಏಳೇಳು ಜನ್ಮದ ಪುಣ್ಯ ಮಾಡಿರಬೇಕು. ನನ್ನ ಹೆತ್ತವರು, ಪ್ರಶಾಂತ್ ಮನೆಯವರ ಹಾರೈಕೆ, ಆರೈಕೆಗಳಿಂದ ನಾನು ಈಗ ಮೊದಲಿನಂತಾಗಿದ್ದೇನೆ.
– ಹೇಮಂತ್ ಸಂಪಾಜೆ
ಚಿತ್ರ : ಶಿವಸುಬ್ರಹ್ಮಣ್ಯ.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.