ಟೆಸ್ಟ್ಕ್ಯಾಪ್ ಧರಿಸಿದ ಕೆಲವೇ ನಿಮಿಷಗಳಲ್ಲಿ ಶಾರ್ದೂಲ್ ಗಾಯಾಳು!
Team Udayavani, Oct 13, 2018, 11:40 AM IST
ಮುಂಬಯಿಯ ಪೇಸ್ ಬೌಲರ್ ಶಾರ್ದೂಲ್ ಠಾಕೂರ್ ಹೈದರಾಬಾದ್ ಟೆಸ್ಟ್ ಪಂದ್ಯದ ಮೊದಲ ದಿನ ಮಿಶ್ರ ಫಲ ಅನುಭವಿಸಿದರು. ಅವರಿಗೆ ಟೆಸ್ಟ್ಕ್ಯಾಪ್ ಧರಿಸುವ ಅದೃಷ್ಟ ಕೂಡಿಬಂದಿತಾದರೂ ಕೆಲವೇ ನಿಮಿಷದಲ್ಲಿ ಗಾಯಾಳಾಗಿ ಮೈದಾನದಿಂದ ಹೊರನಡೆಯಬೇಕಾದ ಸಂಕಟಕ್ಕೆ ಸಿಲುಕಿದರು.
ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಿ ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಅವರು ಉಮೇಶ್ ಯಾದವ್ ಜತೆ ಬೌಲಿಂಗ್ ಆರಂಭಿಸಿದರು. ಆದರೆ 10 ಎಸೆತ ಹಾಕುವಷ್ಟರಲ್ಲಿ ಬಲ ತೊಡೆಯ ಸ್ನಾಯು ಸೆಳೆತಕ್ಕೊಳಗಾದರು. ಫಿಸಿಯೋ ಪ್ಯಾಟ್ರಿಕ್ ಫರ್ಹಾತ್ ಆಗಮಿಸಿ ಪರೀಕ್ಷಿಸಿದರು. ಆದರೆ ಬೌಲಿಂಗ್ ಮುಂದುವರಿಸ ಲಾಗದ ಠಾಕೂರ್ ಅಂಗಳ ದಿಂದ ಹೊರನಡೆದರು. ಉಳಿದೆರಡು ಎಸೆತಗಳನ್ನು ಅಶ್ವಿನ್ ಎಸೆದು ಆ ಓವರ್ ಪೂರ್ತಿಗೊಳಿಸಿದರು.
ಬಳಿಕ ಶಾರ್ದೂಲ್ ಠಾಕೂರ್ ಸ್ಕ್ಯಾನಿಂಗ್ಗೆ ತೆರಳಿದ ಕಾರಣ ಅಂಗಳಕ್ಕಿಳಿಯಲಿಲ್ಲ. ಇದರ ವರದಿ ಪರಿಶೀಲಿಸಿದ ಬಳಿಕ ಮುಂದಿನ ನಿರ್ಧಾರಕ್ಕೆ ಬರಲಾಗುವುದು ಎಂದು ತಂಡದ ಪ್ರಕಟನೆ ತಿಳಿಸಿದೆ. ಠಾಕೂರ್ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸಿದ 294ನೇ ಆಟಗಾರನಾಗಿದ್ದರು. ಕಳೆದ ಏಶ್ಯ ಕಪ್ ಕೂಟದ ಹಾಂಕಾಂಗ್ ಎದುರಿನ ಪಂದ್ಯದ ವೇಳೆ ಅವರು ಇದೇ ಸಮಸ್ಯೆಗೆ ಸಿಲುಕಿದ್ದರು.
ಮರಳಿದ ಜಾಸನ್ ಹೋಲ್ಡರ್
ರಾಜ್ಕೋಟ್ ಟೆಸ್ಟ್ ಪಂದ್ಯದಿಂದ ಕಡೆ ಗಳಿಗೆಯಲ್ಲಿ ಹೊರಗುಳಿದ ವೆಸ್ಟ್ ಇಂಡೀಸ್ ನಾಯಕ ಜಾಸನ್ ಹೋಲ್ಡರ್, ಹೈದರಾಬಾದ್ನಲ್ಲಿ ಕಣಕ್ಕಿಳಿದು ತಂಡದ ನೇತೃತ್ವ ವಹಿಸಿದರು. ಎಡಗೈ ಸ್ಪಿನ್ನರ್ ಜೋಮೆಲ್ ವ್ಯಾರಿಕ್ಯಾನ್ ಕೂಡ ಆಡುವ ಬಳಗಕ್ಕೆ ಸೇರ್ಪಡೆಗೊಂಡರು. ಇವರಿಗಾಗಿ ಜಾಗ ಬಿಟ್ಟವರು ಕೀಮೊ ಪೌಲ್ ಮತ್ತು ಶೆರ್ಮನ್ ಲೆವಿಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.