ಟೀಮ್ ಇಂಡಿಯಾದ ಕೋಚ್ಗೆ 10 ದಿನ ಐಸೊಲೇಶನ್
Team Udayavani, Sep 6, 2021, 9:55 PM IST
ಲಂಡನ್: ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ ಅವರ ಆರ್ಟಿ-ಪಿಸಿಆರ್ ಟೆಸ್ಟ್ ವರದಿ ಕೂಡ ಪಾಸಿಟಿವ್ ಬಂದಿರುವುದರಿಂದ ಅವರು 10 ದಿನಗಳ ಐಸೊಲೇಶನ್ನಲ್ಲಿರಲಿದ್ದಾರೆ. ಹೀಗಾಗಿ ಇದೇ ವಾರ ಮ್ಯಾಂಚೆಸ್ಟರ್ನಲ್ಲಿ ಆರಂಭವಾಗಲಿರುವ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯುವರು ಎಂದು ಬಿಸಿಸಿಐ ತಿಳಿಸಿದೆ.
ಭಾನುವಾರ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ನಲ್ಲಿ ರವಿಶಾಸ್ತ್ರಿ ಅವರ ಫಲಿತಾಂಶ ಪಾಸಿಟಿವ್ ಬಂದಿತ್ತು. ಬಳಿಕ ಸೋಮವಾರ ಆರ್ಟಿ-ಪಿಸಿಆರ್ ಟೆಸ್ಟ್ ನಡೆಸಲಾಗಿತ್ತು. ಅವರಿಗೀಗ ಗಂಟಲು ನೋವು ಇದೆ. ಕೊನೆಯ ಟೆಸ್ಟ್ ಮುಗಿದ ಬಳಿಕವಷ್ಟೇ ಅವರ ಐಸೊಲೇಶನ್ ಅವಧಿ ಮುಗಿಯಲಿದೆ.
ಇದೇ ವೇಳೆ ಮೂವರು ಸಹಾಯಕ ಸಿಬಂದಿಯಾದ ಬೌಲಿಂಗ್ ಕೋಚ್ ಬಿ. ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಮತ್ತು ಫಿಸಿಯೋ ನಿತಿನ್ ಪಟೇಲ್ ಅವರನ್ನೂ ಮುನ್ನೆಚ್ಚರಿಕೆಯ ಕಾರಣ ಐಸೊಲೇಶನ್ನಲ್ಲಿ ಇರಿಸಲಾಗಿದೆ. ಇವರು ಕೂಡ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಮೊದಲೇ ನಿರ್ಧರಿಸಿದಂತೆ, ಮ್ಯಾಂಚೆಸ್ಟರ್ನಲ್ಲಿ ಬಿಸಿಸಿಐ ಪ್ರತ್ಯೇಕ ಐಪಿಎಲ್ ಜೈವಿಕ ಸುರಕ್ಷಾ ವಲಯವನ್ನು ನಿರ್ಮಿಸಲಿದೆ. ಬಬಲ್ ಟು ಬಬಲ್ ಪ್ರಯಾಣವೇ ಇದರ ಉದ್ದೇಶ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.