ಶಾ-ರಾಹುಲ್ ಓಪನರ್:ಸೆಹವಾಗ್ ಸಲಹೆ
Team Udayavani, Nov 30, 2018, 6:20 AM IST
ಹೊಸದಿಲ್ಲಿ: ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪೃಥ್ವಿ ಶಾ ಜತೆ ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸುವುದು ಹೆಚ್ಚು ಸೂಕ್ತ ಎಂಬುದಾಗಿ ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್ ಅಭಿಪ್ರಾಯಪಟ್ಟಿದ್ದಾರೆ.
“ನಾನು ನಾಯಕನಾಗಿದ್ದೇ ಆದರೆ ಸರಣಿಯುದ್ದಕ್ಕೂ ಪೃಥ್ವಿ ಶಾ ಜತೆ ಇನ್ನಿಂಗ್ಸ್ ಆರಂಭಿಸಲು ಕೆ.ಎಲ್. ರಾಹುಲ್ ಅವರಿಗೆ ಅವಕಾಶ ಕಲ್ಪಿಸುತ್ತಿದ್ದೆ. ಕಾರಣ, ಮುರಳಿ ವಿಜಯ್ ಈಗಾಗಲೇ ಬಹಳಷ್ಟು ಅವಕಾಶ ಪಡೆದಿದ್ದಾರೆ. ಹೀಗಾಗಿ ಅವರು ಮತ್ತೆ ತಮ್ಮ ಸರದಿಗಾಗಿ ಕಾಯುವುದು ಅನಿವಾರ್ಯ. 8 ಇನ್ನಿಂಗ್ಸ್‌ಗಳಲ್ಲಿ ಯಾರಾದರೂ ವಿಫಲರಾದರೆ ಆಗ ಮತ್ತೆ ವಿಜಯ್‌ಗೆ ಅವಕಾಶ ಕೊಡುವ ನಿಟ್ಟಿನಲ್ಲಿ ನಾನು ಯೋಚಿಸುತ್ತೇನೆ’ ಎಂದು ಸೆಹವಾಗ್ ಹೇಳಿದರು.
ಆದರೆ ರಾಹುಲ್ ಅವರ ಸದ್ಯದ ಬ್ಯಾಟಿಂಗ್ ಫಾರ್ಮ್ ಹೇಳಿಕೊಳ್ಳು ಮಟ್ಟದಲ್ಲಿಲ್ಲ. ಸಿಡ್ನಿ ಅಭ್ಯಾಸ ಪಂದ್ಯದಲ್ಲಿ ಎಲ್ಲರೂ ಮಿಂಚಿರುವಾಗ ರಾಹುಲ್ ಒಬ್ಬರೇ ಅಗ್ಗಕ್ಕೆ ಔಟಾದದ್ದು ಇದಕ್ಕೆ ತಾಜಾ ಉದಾಹರಣೆ.
ಇದೇ ವೇಳೆ ಟೀಮ್ ಇಂಡಿಯಾದ ಸಹಾಯಕ ಕೋಚ್ ಸಂಜಯ್ ಬಂಗಾರ್ ಅವರು ರಾಹುಲ್ ಬಗ್ಗೆ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದು, “ರಾಹುಲ್ ಔಟಾಗಲು ಹೊಸ ಮಾರ್ಗವನ್ನು ಹುಡುಕಿಕೊಳ್ಳುತ್ತಿದ್ದಾರೆ. ಆದರೆ ಉತ್ತಮ ಲಯದಲ್ಲಿದ್ದಾರೆ. ಅವರು ಫಾರ್ಮ್ನಿಂದ ಒಂದೇ ಒಂದು ದೊಡ್ಡ ಇನ್ನಿಂಗ್ಸ್‌ನಿಂದ ದೂರ ಇದ್ದಾರೆ’ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.