ಧವನ್ಗೆ ವಿಚ್ಛೇದನ ನೀಡಿದ ಆಯೇಷಾ
Team Udayavani, Sep 7, 2021, 10:26 PM IST
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಖ್ಯಾತ ಎಡಗೈ ಆಟಗಾರ ಶಿಖರ್ ಧವನ್ ಅವರ ವೈವಾಹಿಕ ಜೀವನ ಮುರಿದುಬಿದ್ದಿದೆ. ಅವರ ಪತ್ನಿಯಾಗಿದ್ದ ಆಸ್ಟ್ರೇಲಿಯದ ಬಾಕ್ಸರ್ ಆಯೇಷಾ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಪ್ರಕಟಿಸಿದ್ದಾರೆ.
ಇದು ಆಯೇಷಾಗೆ ಎರಡನೇ ವಿಚ್ಛೇದನ. ಧವನ್ರನ್ನು ವರಿಸುವುದಕ್ಕೆ ಮುನ್ನವೇ ಅವರು ಒಮ್ಮೆ ವಿಚ್ಛೇದನ ಪಡೆದಿದ್ದರು.
2012ರಲ್ಲಿ ಧವನ್, ಆಯೇಷಾರನ್ನು ವರಿಸಿದ್ದರು. ಹಾಗೆಯೇ ಆಯೇಷಾರ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. ಅದರ ಜತೆಗೆ ಧವನ್-ಆಯೇಷಾಗೆ ಜೊರಾವರ್ ಹೆಸರಿನ 7 ವರ್ಷದ ಗಂಡು ಮಗನಿದ್ದಾನೆ. ಸದ್ಯ ಈ ಮಕ್ಕಳ ಜವಾಬ್ದಾರಿ ಏನು ಎನ್ನುವುದು ಇತ್ಯರ್ಥವಾಗಬೇಕಿದೆ. ಇನ್ನು ವಿಚ್ಛೇದನಕ್ಕೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.