ಬಾಲ್ ಬದಲು ವಿಕೆಟ್ ಗೆ ಹೊಡೆದ ಪಾಕ್ ಬ್ಯಾಟ್ಸಮನ್
Team Udayavani, May 18, 2019, 4:07 PM IST
ಟ್ರೆಂಟ್ ಬ್ರಿಡ್ಜ್: ಕ್ರಿಕೆಟ್ ಎನ್ನುವುದು ಚೆಂಡು ಮತ್ತು ಬ್ಯಾಟಿನ ನಡುವೆ ನಡೆಯುವ ಹೋರಾಟ. ಬೌಲರ್ ಎಸೆದ ಚೆಂಡನ್ನು ಬ್ಯಾಟ್ಸಮನ್ ಮೈದಾನದ ಮೂಲೆ ಮೂಲೆಗೆ ಬಾರಿಸುತ್ತಾರೆ. ಆದರೆ ಈ ಪಾಕ್ ಬ್ಯಾಟ್ಸ್ ಮನ್ ಬಾಲ್ ಗೆ ಹೊಡೆಯುವ ಬದಲು ವಿಕೆಟ್ ಗೆ ಹೊಡೆದಿದ್ದಾರೆ. ಹೀಗೆ ವಿಚಿತ್ರವಾಗಿ ಔಟಾದ ಬ್ಯಾಟ್ಸಮನ್ ಪಾಕಿಸ್ಥಾನದ ಅನುಭವಿ ಆಟಗಾರ ಶೋಯೇಬ್ ಮಲಿಕ್.
ಶುಕ್ರವಾರ ಇಂಗ್ಲೆಂಡ್ ನ ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ ನಡೆದ ಆತಿಥೇಯ ಇಂಗ್ಲೆಂಡ್ ಮತ್ತು ಪಾಕಿಸ್ಥಾನ ನಡುವಿನ ಪಂದ್ಯದ ವೇಳೆ ಮಲಿಕ್ ಈ ರೀತಿ ಔಟ್ ಆಗಿ ಅವಮಾನ ಅನುಭವಿಸಿದರು.
ಪಾಕ್ ಮಾಜಿ ನಾಯಕ ಶೋಯೇಬ್ ಮಲಿಕ್ 26 ಎಸೆತಗಳಲ್ಲಿ 41 ರನ್ ಹೊಡೆದು ಉತ್ತಮವಾಗೇ ಆಡುತ್ತಿದ್ದರು. ಇನ್ನಿಂಗ್ಸ್ ನ 47ನೇ ಓವರ್ ಎಸೆಯಲು ಬಂದ ಮಾರ್ಕ್ ವುಡ್ ಎಸೆತವನ್ನು ಲೇಟ್ ಕಟ್ ಮಾಡುವ ಪ್ರಯತ್ನದಲ್ಲಿ ಮಲಿಕ್ ಬಾಲ್ ಗೆ ಹೊಡೆಯುವ ಬದಲು ಸ್ಟಂಪ್ ಗೆ ಬ್ಯಾಟ್ ನಿಂದ ಬಡಿದು ಬಿಟ್ಟರು. ಕ್ರಿಕೆಟ್ ನಿಯಮಗಳ ಪ್ರಕಾರ ಇದು ಔಟ್. ಹೀಗಾಗಿ ಶೋಯೇಬ್ ಮಲಿಕ್ ಭಾರವಾದ ಹೆಜ್ಜೆಯಿಟ್ಟು ಪೆವಿಲಿಯನ್ ಗೆ ನಡೆದರು.
Don’t see this too often!
Scorecard & Videos: https://t.co/A8uZh11q6U#EngvPak pic.twitter.com/HxUAK2A5qG
— England Cricket (@englandcricket) May 17, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.