ಏಕದಿನ ಕ್ರಿಕೆಟ್‌ಗೆ ಮಲಿಕ್‌ ವಿದಾಯ

20 ವರ್ಷಗಳ ಸುದೀರ್ಘ‌ ಏಕದಿನ ಬಾಳ್ವೆ ಅಂತ್ಯ

Team Udayavani, Jul 7, 2019, 5:05 AM IST

malik

ಲಂಡನ್‌: ಪಾಕಿಸ್ಥಾನ ಕ್ರಿಕೆಟ್‌ ತಂಡದ ಯಶಸ್ವಿ ಆಲ್‌ರೌಂಡರ್‌ ಶೋಯಿಬ್‌ ಮಲಿಕ್‌ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಶುಕ್ರವಾರ ನಡೆದ ವಿಶ್ವಕಪ್‌ ಕ್ರಿಕೆಟ್‌ ಕೂಟದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಪಾಕಿಸ್ಥಾನ 94 ರನ್ನುಗಳ ಗೆಲುವು ಸಾಧಿಸಿದ ಬಳಿಕ ಮಲಿಕ್‌ ತನ್ನ 20 ವರ್ಷಗಳ ಸುದೀರ್ಘ‌ ಬಾಳ್ವೆಯಿಂದ ನಿವೃತ್ತಿಯಾಗುವ ನಿರ್ಧಾರ ಪ್ರಕಟಿಸಿದರು. 37ರ ಹರೆಯದ ಮಲಿಕ್‌ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಆಡಿಲ್ಲ. ಆದರೂ ಗೆಲುವಿನ ಸಂಭ್ರಮದ ಬಳಿಕ ಮೈದಾನ ತೊರೆಯುವ ವೇಳೆ ಪಾಕಿಸ್ಥಾನದ ಎಲ್ಲ ಆಟಗಾರರು ನಿಂತು ಗೌರವ ಸಲ್ಲಿಸಿದರು.

“ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವೆ ಎಂದು ಈ ಹಿಂದೆ ಹೇಳಿದ್ದೆ. ನಿವೃತ್ತಿ ಪ್ರಕಟಿಸಲು ನಾನಿಲ್ಲಿ ಇದ್ದೇನೆ. ನನ್ನನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಕೃತಜ್ಞತೆಗಳು. ಅವರೆಲ್ಲರನ್ನು ಇಷ್ಟಪಡುತ್ತೇನೆ’ ಎಂದು ಮಲಿಕ್‌ ಹೇಳಿದರು.

1999ರಲ್ಲಿ ಪದಾರ್ಪಣೆ
1999ರಲ್ಲಿ ವೆಸ್ಟ್‌ ಇಂಡೀಸ್‌ ತಂಡದೆದುರು ಆಡುವ ಮೂಲಕ ಶೋಯಿಬ್‌ ಮಲಿಕ್‌ ಏಕದಿನ ಕ್ರಿಕೆಟಿಗೆ ಪದಾರ್ಪಣೆಗೈದಿದ್ದರು. ಈವರೆಗೆ 287 ಪಂದ್ಯಗಳನ್ನು ಆಡಿರುವ ಅವರು 9 ಶತಕ ಮತ್ತು 44 ಅರ್ಧ ಶತಕ ಸಹಿತ 7,534 ರನ್‌ ಪೇರಿಸಿದ್ದಾರೆ. ಆಲ್‌ರೌಂಡರ್‌ ಕೂಡ ಆಗಿರುವ ಅವರು 158 ವಿಕೆಟ್‌ ಉರುಳಿಸಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಮಲಿಕ್‌ 35 ಟೆಸ್ಟ್‌ ಪಂದ್ಯಗಳನ್ನಾಡಿದ್ದು 1,898 ರನ್‌ ಗಳಿಸಿದ್ದಾರೆ. 3 ಶತಕ ಮತ್ತು 8 ಅರ್ಧ ಶತಕ ಬಾರಿಸಿದ್ದಾರೆ. 111 ಟಿ20 ಪಂದ್ಯ ಆಡಿದ್ದು, 7 ಅರ್ಧ ಶತಕ ಸಹಿತ 2,263 ರನ್‌ ಗಳಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಪಾಕಿಸ್ಥಾನದ ಉಸ್ತುವಾರಿ ನಾಯಕನಾಗಿಯೂ ಕರ್ತವ್ಯ ನಿಭಾಯಿಸಿದ್ದಾರೆ.

ಶೋಯಿಬ್‌ ಮಲಿಕ್‌ ನಿವೃತ್ತಿಯ ನಿರ್ಧಾರ ಪ್ರಕಟಿಸಿದೊಡನೆ ಹಾಲಿ-ಮಾಜಿ ಕ್ರಿಕೆಟಿಗರನೇಕರು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ. ಅವರ ಏಕದಿನ ಸಾಧನೆಯನ್ನು ಕೊಂಡಾಡಿದ್ದಾರೆ.

ಗೌರವಯುತ ಆಟ: ಸಾನಿಯಾ ಟ್ವೀಟ್‌
“ಪ್ರತಿಯೊಂದು ಕತೆಗೂ ಅಂತ್ಯವಿದೆ. ಆದರೆ ಜೀವನದಲ್ಲಿ ಪ್ರತಿ ಯೊಂದು ಅಂತ್ಯವೂ ಹೊಸ ಆರಂಭವಾಗಿರುತ್ತದೆ. ನೀವು ನಿಮ್ಮ ದೇಶದ ಪರ 20 ವರ್ಷಗಳ ಸುದೀರ್ಘ‌ ಅವಧಿಯವರೆಗೆ ಗೌರವಯುತವಾಗಿ ಆಡಿದ್ದೀರಿ ಮತ್ತು ಆ ಗೌರವವನ್ನು ಮುಂದುವ ರಿಸಲಿದ್ದೀರಿ. ಕ್ರೀಡಾ ರಂಗದಲ್ಲಿ ನಿಮ್ಮ ಸಾಧನೆಯಿಂದ ನನಗೆ ಮತ್ತು ಇಝಾನ್‌ಗೆ ಹೆಮ್ಮೆ ಯಾಗುತ್ತಿದೆ’ ಎಂದು ಮಲಿಕ್‌ ಅವರ ಪತ್ನಿ, ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಟ್ವೀಟ್‌ ಮಾಡಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌: ಪಾಕಿಸ್ಥಾನ-ಬಾಂಗ್ಲಾದೇಶ
– 2014ರ ಬಳಿಕ ಪಾಕಿಸ್ಥಾನ ಮೊದಲ ಸಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿತು. ಪಾಕ್‌ ಕೊನೆಯ ಸಲ ಜಯಿಸಿದ್ದು 2014ರ ಏಶ್ಯ ಕಪ್‌ ಪಂದ್ಯಾವಳಿಯಲ್ಲಿ. ಇದು ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಪಾಕಿಗೆ ಒಲಿದ ಮೊದಲ ಜಯವೂ ಹೌದು.

– ಶಾಹೀನ್‌ ಅಫ್ರಿದಿ ವಿಶ್ವಕಪ್‌ ಪಂದ್ಯದಲ್ಲಿ 5 ಪ್ಲಸ್‌ ವಿಕೆಟ್‌ ಕಿತ್ತ ಅತೀ ಕಿರಿಯ ಬೌಲರ್‌ (19 ವರ್ಷ, 90 ದಿನ). ಈ ದಾಖಲೆ ಕೀನ್ಯಾದ ಕಾಲಿನ್ಸ್‌ ಒಬುಯ ಹೆಸರಲ್ಲಿತ್ತು. 2003ರಲ್ಲಿ ಶ್ರೀಲಂಕಾ ವಿರುದ್ಧ ಒಬುಯ 21 ವರ್ಷ, 212ನೇ ದಿನದಲ್ಲಿ ಈ ಸಾಧನೆಗೈದಿದ್ದರು. ಅಫ್ರಿದಿ ಏಕದಿನದಲ್ಲಿ 6 ವಿಕೆಟ್‌ ಉರುಳಿಸಿದ
4ನೇ ಕಿರಿಯ ಬೌಲರ್‌.

– ಅಫ್ರಿದಿ ಕೇವಲ 5 ಪಂದ್ಯಗಳಿಂದ 16 ವಿಕೆಟ್‌ ಕಿತ್ತರು. ಇದರೊಂದಿಗೆ ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಕಿರಿಯ ಬೌಲರ್‌ ಎನಿಸಿದರು. ಹಿಂದಿನ ದಾಖಲೆ ಅಬ್ದುಲ್‌ ರಜಾಕ್‌ ಹೆಸರಲ್ಲಿತ್ತು. 1999ರಲ್ಲಿ, 19ರ ಹರೆಯದಲ್ಲಿ ಅವರು 13 ವಿಕೆಟ್‌ ಉರುಳಿಸಿದ್ದರು.

– ಶಾಹೀನ್‌ ಅಫ್ರಿದಿ ವಿಶ್ವಕಪ್‌ನಲ್ಲಿ 6 ವಿಕೆಟ್‌ ಕಿತ್ತ ಪಾಕಿಸ್ಥಾನದ ಮೊದಲ ಬೌಲರ್‌. 2011ರಲ್ಲಿ ಕೀನ್ಯಾ ವಿರುದ್ಧ ಶಾಹಿದ್‌ ಅಫ್ರಿದಿ 16ಕ್ಕೆ 5 ವಿಕೆಟ್‌ ಉರುಳಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.

– ಶಕಿಬ್‌ ಅಲ್‌ ಹಸನ್‌ ವಿಶ್ವಕಪ್‌ ಗ್ರೂಪ್‌ ಹಂತದಲ್ಲಿ 600 ರನ್‌ ಬಾರಿಸಿದ ಮೊದಲ ಕ್ರಿಕೆಟಿಗ. 2003ರಲ್ಲಿ ಸಚಿನ್‌ ತೆಂಡುಲ್ಕರ್‌ 586 ರನ್‌ ಹೊಡೆದದ್ದು
ಹಿಂದಿನ ದಾಖಲೆ.

– ಇಮಾಮ್‌ ಉಲ್‌ ಹಕ್‌ ವಿಶ್ವಕಪ್‌ನಲ್ಲಿ ಶತಕ ಹೊಡೆದ ಪಾಕಿಸ್ಥಾನದ ಕಿರಿಯ ಕ್ರಿಕೆಟಿಗ (23 ವರ್ಷ, 205 ದಿನ). 1987ರಲ್ಲಿ ಶ್ರೀಲಂಕಾ ವಿರುದ್ಧ ಸಲೀಂ ಮಲಿಕ್‌ 24 ವರ್ಷ, 192ನೇ ದಿನದಲ್ಲಿ ಸೆಂಚುರಿ ಬಾರಿಸಿದ್ದು
ಹಿಂದಿನ ದಾಖಲೆ.

– ಬಾಬರ್‌ ಆಜಂ ವಿಶ್ವಕಪ್‌ ಕೂಟವೊಂದರಲ್ಲಿ ಅತ್ಯಧಿಕ ರನ್‌ ಬಾರಿಸಿದ ಪಾಕಿಸ್ಥಾನಿ ಆಟಗಾರ (8 ಇನ್ನಿಂಗ್ಸ್‌, 474). 1992ರಲ್ಲಿ ಜಾವೇದ್‌ ಮಿಯಾಂದಾದ್‌ 9 ಇನ್ನಿಂಗ್ಸ್‌ಗಳಿಂದ 437 ರನ್‌ ಹೊಡೆದ ದಾಖಲೆ ಪತನಗೊಂಡಿತು.

– ಮುಸ್ತಫಿಜುರ್‌ ರಹಮಾನ್‌ ಸತತ ವಿಶ್ವಕಪ್‌ ಪಂದ್ಯಗಳಲ್ಲಿ 5 ವಿಕೆಟ್‌ ಕಿತ್ತ 3ನೇ ಬೌಲರ್‌. ಗ್ಯಾರಿ ಗಿಲ್ಮೋರ್‌, ಅಶಾಂತ ಡಿ ಮೆಲ್‌ ಉಳಿದಿಬ್ಬರು.

– ಮುಸ್ತಫಿಜುರ್‌ 54 ಪಂದ್ಯಗಳಿಂದ 100 ವಿಕೆಟ್‌ ಪೂರ್ತಿಗೊಳಿಸಿದರು.

– ಈ ಪಂದ್ಯದಲ್ಲಿ ಅತ್ಯಧಿಕ 13 ವಿಕೆಟ್‌ಗಳು ಎಡಗೈ ಪೇಸ್‌ ಬೌಲರ್‌ಗಳ ಪಾಲಾದವು. ಇದು ಏಕದಿನ ದಾಖಲೆ.

– ಏಕದಿನ ಪಂದ್ಯವೊಂದರಲ್ಲಿ ಕೇವಲ 2ನೇ ಸಲ ಎಡಗೈ ಬೌಲರ್‌ಗಳಿಬ್ಬರು 5 ಪ್ಲಸ್‌ ವಿಕೆಟ್‌ ಕಿತ್ತರು. 2015ರ ವಿಶ್ವಕಪ್‌ ಗ್ರೂಪ್‌ ಪಂದ್ಯದಲ್ಲಿ ಮಿಚೆಲ್‌ ಸ್ಟಾರ್ಕ್‌, ಟ್ರೆಂಟ್‌ ಬೌಲ್ಟ್ ಈ ಸಾಧನೆ ಮಾಡಿದ್ದರು.

– ಮಶ್ರಫೆ ಮೊರ್ತಜ ಏಕದಿನ ಸರಣಿ/ಪಂದ್ಯಾವಳಿಯಲ್ಲಿ ಅತ್ಯಂತ ಕಳಪೆ ಬೌಲಿಂಗ್‌ ಸರಾಸರಿ ದಾಖಲಿಸಿದರು (361.00, ಕನಿಷ್ಠ 50 ಓವರ್‌ ಮಾನದಂಡ). 56 ಓವರ್‌ಗಳಲ್ಲಿ 361 ರನ್ನಿತ್ತು ಒಂದು ವಿಕೆಟ್‌ ಉರುಳಿಸಿದ್ದಷ್ಟೇ ಮೊರ್ತಜ ಸಾಧನೆ. 1996ರ “ಟೈಟಾನ್‌ ಕಪ್‌’ ಟೂರ್ನಿಯಲ್ಲಿ ಜಾವಗಲ್‌ ಶ್ರೀನಾಥ್‌ 258 ರನ್ನಿತ್ತು ಒಂದು ವಿಕೆಟ್‌ ಉರುಳಿಸಿದ್ದು ಹಿಂದಿನ ಕಳಪೆ ಸರಾಸರಿ ಆಗಿತ್ತು.

– ವಿಶ್ವಕಪ್‌ನಲ್ಲಿ ಪರಾಭವಗೊಂಡ ಪಂದ್ಯಗಳಲ್ಲಿ ಅತ್ಯಧಿಕ 642 ರನ್‌ ಬಾರಿಸಿದ ದಾಖಲೆಯನ್ನು ಶಕಿಬ್‌ ಅಲ್‌ ಹಸನ್‌ ಸರಿದೂಗಿಸಿದರು. ಸಚಿನ್‌ ತೆಂಡುಲ್ಕರ್‌ ಕೂಡ ಪರಾಜಿತ 16 ಪಂದ್ಯಗಳಲ್ಲಿ ಇಷ್ಟೇ ರನ್‌ ಹೊಡೆದಿದ್ದಾರೆ.

– ಶಕಿಬ್‌ ವಿಶ್ವಕಪ್‌ ಕೂಟವೊಂದರಲ್ಲಿ 600 ರನ್‌ ಜತೆಗೆ 10 ಪ್ಲಸ್‌ ವಿಕೆಟ್‌ (11) ಕಿತ್ತ ಮೊದಲ ಆಲ್‌ರೌಂಡರ್‌.

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.