ಶೋಭಾ ಆಪಾದನೆ ಮಾಡೋದಕ್ಕೇ ಹುಟ್ಟಿದ್ದಾರೆ:ಆಂಜನೇಯ
Team Udayavani, Feb 26, 2018, 6:35 AM IST
ಚಿತ್ರದುರ್ಗ: ಸಂಸದೆ ಶೋಭಾ ಕರಂದ್ಲಾಜೆ ಆಪಾದನೆ ಮಾಡುವುದಕ್ಕಾಗಿಯೇ ಹುಟ್ಟಿರಬಹುದು ಎನ್ನಿಸುತ್ತದೆ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಟೀಕಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದಾಗ ಸಾವಿರಾರು ಕೋಟಿ ರೂ. ಅವ್ಯವಹಾರ ಹಾಗೂ ಭೂಮಿ ಖರೀದಿ ಆರೋಪ ಅವರ ಮೇಲಿದೆ. ಜವಾಬ್ದಾರಿ ಸ್ಥಾನದಲ್ಲಿರುವವರು ದಾಖಲೆಗಳಿಲ್ಲದೆ ಆರೋಪ ಮಾಡಬಾರದು. ವಿದ್ಯುತ್ ಕಂಬ ಹಾಕದೆ, ಪರಿವರ್ತಕ ಅಳವಡಿಸದೆ, ವಿದ್ಯುತ್ ಖರೀದಿಸದೆ ಬಿಲ್ ಪಾವತಿ ಮಾಡಿದರೇ ಎಂದು ತಿರುಗೇಟು ನೀಡಿದರು.
ಶೋಭಾ ಕರಂದ್ಲಾಜೆ ವಿರುದ್ಧದ ಅವ್ಯವಹಾರ ಬಯಲಿಗೆಳೆಯುತ್ತೀರಾ, ಅವರೊಂದಿಗೆ ಸಾರ್ವಜನಿಕ ಚರ್ಚೆಗೆ ಬರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಂಜನೇಯ, ಸಾರ್ವಜನಿಕ ಚರ್ಚೆಗೆ ಶೋಭಮ್ಮನವರಿಗೆ ಆಹ್ವಾನ ನೀಡುವಷ್ಟು ದೊಡ್ಡವರು ನಾವಲ್ಲ. ಅಲ್ಲದೆ ಅವರ ಹಗರಣಗಳನ್ನು ಹೊರ ತೆಗೆಯುವಷ್ಟು ಸಮಯವೂ ನಮಗಿಲ್ಲ. ನಾವು ಚುನಾವಣಾ ವರ್ಷದಲ್ಲಿದ್ದೇವೆ. ನಮ್ಮ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಡಲೇ ನಮಗೆ ಸಮಯ ಸಾಲುತ್ತಿಲ್ಲ ಎಂದರು.
ಕೇಂದ್ರ ಸರ್ಕಾರವೇ ಅವರದು. ಅವರ ಹಿಡಿತದಲ್ಲೇ ಇರುವ ಸಿಬಿಐ, ಸಿಐಡಿ ಸೇರಿ ಯಾವುದೇ ತನಿಖಾ ಸಂಸ್ಥೆಯಿಂದಾದರೂ ಗಂಗಾಕಲ್ಯಾಣ ಯೋಜನೆಯಡಿಯ ಕಾರ್ಯಗಳನ್ನು ತನಿಖೆಗೆ ಒಳಪಡಿಸಲಿ ಎಂದು ಸವಾಲೆಸೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.