ಸುಮಿತ್, ರವಿಕುಮಾರ್ಗೆ ಉದ್ದೀಪನ ಕಳಂಕ! ಕ್ರೀಡಾ ಇತಿಹಾಸದಲ್ಲೇ ಅಪರೂಪ
ಶೂಟಿಂಗ್, ಬಾಕ್ಸಿಂಗ್ನಲ್ಲಿ ಅತ್ಯಪರೂಪದ ಪ್ರಕರಣ
Team Udayavani, Dec 11, 2019, 10:29 PM IST
ಹೊಸದಿಲ್ಲಿ: ಭಾರತದ ಕ್ರೀಡಾ ಇತಿಹಾಸದಲ್ಲೇ ಅಪರೂಪವೆನ್ನಿಸುವ ಘಟನೆಯೊಂದು ನಡೆದಿದೆ. ಬಾಕ್ಸರ್ ಸುಮಿತ್ ಸಾಂಗ್ವಾನ್ ಮತ್ತು ಶೂಟರ್ ರವಿಕುಮಾರ್ ನಿಷೇಧಿತ ಉದ್ದೀಪನ ಸೇವಿಸಿದ್ದು ಸಾಬೀತಾಗಿದೆ. ಶೂಟರ್ಗಳು, ಬಾಕ್ಸರ್ಗಳು ಉದ್ದೀಪನ ಸೇವಿಸಿದ ಘಟನೆ ನಡೆಯುವುದು ವಿರಳ. ಹೀಗಾಗಿ ಈ ಘಟನೆ ಎಲ್ಲರನ್ನೂ ಅಚ್ಚರಿಗೆ ಕೆಡವಿದೆ.
91 ಕೆಜಿ ವಿಭಾಗದ ಬಾಕ್ಸರ್ ಸುಮಿತ್ (26 ವರ್ಷ), ನಿಷೇಧಿತ ಅಸೆಟಝೊಲಾಮೈಡ್ ಎಂಬ ಔಷಧ ಸೇವಿಸಿದ್ದಾರೆ. ವಿಶ್ವಕಪ್ ಮತ್ತು ಕಾಮನ್ವೆಲ್ತ್ನಲ್ಲಿ ಕಂಚಿನ ಪದಕ ಗೆದ್ದಿರುವ ಶೂಟರ್ ರವಿಕುಮಾರ್ (29 ವರ್ಷ) ನಿಷೇಧಿತ ಪ್ರೊಪ್ರಾನೊಲೊಲ್ ಸೇವಿಸಿರುವುದು ಪತ್ತೆಯಾಗಿದೆ.
“ನನಗೆ ಗೊತ್ತಿರಲಿಲ್ಲ’
ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿಕುಮಾರ್, “ನಾನು ಆಯಾಚಿತವಾಗಷ್ಟೇ ಉದ್ದೀಪನ ಸೇವಿಸಿದ್ದೇನೆ. ಅರೆ ತಲೆನೋವೆಂದು ನಾನು ಸೇವಿಸಿದ ಔಷಧ ನಿಷೇಧಕ್ಕೊಳಗಾಗಿತ್ತು ಎಂದು ನನಗೆ ಗೊತ್ತಿರಲಿಲ್ಲ. ಮೇ-ಜೂನ್ನಲ್ಲಿ ನಡೆದ ಸುರೇಂದ್ರನಾಥ್ ಕೂಟಕ್ಕೂ ಮುನ್ನ, ನನ್ನ ವೈದ್ಯರು ತಲೆನೋವಿಗೆ ಈ ಔಷಧ ತೆಗೆದುಕೊಳ್ಳಲು ಸೂಚಿಸಿದ್ದರು. ಗೊತ್ತಾಗದೇ ನಡೆದಿರುವುದರಿಂದ ನನಗೆ ಶಿಕ್ಷೆಯ ಪ್ರಮಾಣ ತಗ್ಗಬಹುದೆಂಬ ಭರವಸೆಯಿದೆ’ ಎಂದಿದ್ದಾರೆ.
ಈ ಬಗ್ಗೆ ರವಿಕುಮಾರ್ ನಾಡಾಕ್ಕೆ ಎಲ್ಲವನ್ನೂ ವಿವರಿಸಿದ್ದಾರೆ. ಇದನ್ನು ನಾಡಾ ಕೂಡ ಒಪ್ಪಿಕೊಂಡಿದೆ. ಅವರ ಒಂದೇ ಒಂದು ತಪ್ಪೆಂದರೆ, ಪರೀಕ್ಷೆಗೂ ಮುನ್ನ ಈ ಔಷಧ ತೆಗೆದುಕೊಂಡಿರುವುದನ್ನು ತಿಳಿಸದೇ ಇದ್ದದ್ದು ಎಂಬುದಾಗಿ ನಾಡಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.