ಪಾರೀಕರ್ ಕೊಡುಗೆ ಸ್ಮರಿಸಿಕೊಂಡ ಶೂಟರ್ ತೇಜಸ್ವಿನಿ
Team Udayavani, Mar 19, 2019, 12:30 AM IST
ಮುಂಬಯಿ: ಭಾರತದ ಖ್ಯಾತ ಶೂಟರ್ ತೇಜಸ್ವಿನಿ ಸಾವಂತ್ ತಮ್ಮ ಕ್ರೀಡಾ ಬದುಕಿನ ಏಳಿಗೆಯಲ್ಲಿ ಅಗಲಿದ ಗೋವಾ ಮುಖ್ಯಮಂತ್ರಿ ಮನೋಹರ್ ಪಾರೀಕರ್ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡಿದ್ದಾರೆ.
ಇದು 2005ರ ವಿದ್ಯಮಾನ. ಅಂದು ಕೊಲ್ಹಾಪುರದ ತೇಜಸ್ವಿನಿ ಹೆಸರು ಶೂಟಿಂಗ್ ಕ್ಷೇತ್ರದಲ್ಲಿ ಚಾಲ್ತಿಗೆ ಬಂದಿರಲಿಲ್ಲ. ಅವರಿಗೆ ಜರ್ಮನಿ ಶೂಟಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ತೀವ್ರ ಆರ್ಥಿಕ ಅಡಚಣೆ ಎದುರಾಗಿತ್ತು. ಆಗ ತೇಜಸ್ವಿನಿ ಕುಟುಂಬದ ಆತ್ಮೀಯರಾದ, ಹಿರಿಯ ಬಿಜೆಪಿ ಮುಖಂಡ ಚಂದ್ರಕಾಂತ್ ಪಾಟೀಲ್ ಜತೆ ಗೋವಾ ಮುಖ್ಯಮಂತ್ರಿ ಪಾರೀಕರ್ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಇದಕ್ಕೆ ಸ್ಪಂದಿಸಿದ ಪಾರೀಕರ್ ಕೂಡಲೇ ಚೆಕ್ ಒಂದಕ್ಕೆ ಸಹಿ ಹಾಕಿ ತೇಜಸ್ವಿನಿ ಕೈಗೆ ನೀಡುತ್ತಾರೆ. ಇದು ಒಂದು ಲಕ್ಷ ರೂ. ಮೊತ್ತವನ್ನು ಒಳಗೊಂಡಿದ್ದಾಗಿ ತೇಜಸ್ವಿನಿ ಹೇಳುತ್ತಾರೆ.
ಈ ನೆರವು ತೇಜಸ್ವಿನಿಯ ಶೂಟಿಂಗ್ ಬದುಕಿಗೆ ದೊಡ್ಡ ತಿರುವು ನೀಡುತ್ತದೆ. ಬಳಿಕ ಅವರು ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ವನಿತಾ ಶೂಟರ್ ಎನಿಸಿದ್ದು ಇತಿಹಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.