ಶೂಟಿಂಗ್: ಭಾರತಕ್ಕೆ ಅವಳಿ ಬಂಗಾರ
Team Udayavani, Mar 22, 2021, 6:50 AM IST
ಹೊಸದಿಲ್ಲಿ: ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಶೂಟಿಂಗ್‌ನಲ್ಲಿ ರವಿವಾರ ಭಾರತದ ಮಹಿಳೆಯರ ಹಾಗೂ ಪುರುಷರ ತಂಡಗಳೆರಡೂ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬಂಗಾರ ಬೇಟೆಯಾಡಿವೆ.
ಮನು ಭಾಕರ್, ಯಶಸ್ವಿನಿ ಸಿಂಗ್ ದೇಸ್ವಾಲ್ ಮತ್ತು ಶ್ರೀನಿವೇತಾ ಅವರನ್ನೊಳಗೊಂಡ ವನಿತಾ ತಂಡ ಪೋಲೆಂಡ್ ವಿರುದ್ಧ 16-8 ಅಂತರದಿಂದ ಗೆಲುವು ಸಾಧಿಸಿ ಸ್ವರ್ಣ ಸಂಪಾದಿಸಿತು.
ಬಳಿಕ ಪುರುಷರ ತಂಡವೂ ಇದೇ ಸಾಧನೆಯನ್ನು ಪುನರಾವರ್ತಿಸಿತು. ಸೌರಭ್ ಚೌಧರಿ, ಅಭಿಶೇಕ್ ವರ್ಮ ಮತ್ತು ಶಾಜಾರ್ ರಿಜ್ವಿ ಅವರನ್ನು ಒಳಗೊಂಡ ಭಾರತೀಯ ತಂಡ ವಿಯೆಟ್ನಾಂ ಎದುರಾಳಿಗಳನ್ನು 17-11 ಅಂತರದಿಂದ ಹಿಮ್ಮೆಟ್ಟಿಸಿತು.
ಗಾನೇಮತ್‌ಗೆ ಕಂಚು :
ಸ್ಕೀಟ್ ಶೂಟರ್, 20 ವರ್ಷದ ಗಾನೇಮತ್ ಶೆಖೋನ್ ಕಂಚಿನ ಸಾಧನೆಯೊಂದಿಗೆ ಸೀನಿಯರ್ ವಿಭಾಗದ ಮೊದಲ ಪದಕ ಗೆದ್ದರು. 6 ಮಂದಿ ವನಿತೆಯರ ಫೈನಲ್‌ನಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ಕಾರ್ತಿಕಿ ಸಿಂಗ್ ಶಕ್ತಾವತ್ 4ನೇ ಸ್ಥಾನಿಯಾದರು.
ಭಾರತ ಈ ವರೆಗೆ ಈ ಕೂಟದಲ್ಲಿ 3 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿಸಿದೆ. ಶುಕ್ರವಾರ ವನಿತಾ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಯಶಸ್ವಿನಿ ಸಿಂಗ್ ದೇಸ್ವಾಲ್ ಚಿನ್ನಕ್ಕೆ ಗುರಿ ಇರಿಸಿದ್ದರು.
ಮತ್ತೆ ಶೂಟರ್‌ಗಳಿಗೆ ಕೋವಿಡ್ :
ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಶೂಟಿಂಗ್‌ನಲ್ಲಿ ಮತ್ತೆ ಕೋವಿಡ್ ಕೇಸ್ ಕಂಡುಬಂದಿದೆ. ರವಿವಾರ ಪಾಸಿಟಿವ್ ಸೋಂಕಿತರ ಸಂಖ್ಯೆ ಆರಕ್ಕೆ ಏರಿದೆ.
ಶನಿವಾರ ಮೂವರು ಶೂಟರ್‌ಗಳ ಕೋವಿಡ್ ಫಲಿತಾಂಶ ಪಾಸಿಟಿವ್ ಬಂದಿತ್ತು. ರವಿವಾರ ಮತ್ತೆ ಮೂವರಿಗೆ ಕೊರೊನಾ ಅಂಟಿದೆ ಎಂದು ನ್ಯಾಶನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಎಐ) ತಿಳಿಸಿದೆ.
“ಸೋಂಕಿತರನ್ನು ಐಸೊಲೇಶನ್‌ನಲ್ಲಿ ಇಡಲಾಗಿದೆ. ಎಲ್ಲರೂ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದು, ಆರೋಗ್ಯವಾಗಿದ್ದಾರೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ’ ಎಂದು ಎನ್‌ಆರ್‌ಎಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇವರೆಲ್ಲ ಯಾವ ದೇಶದ ಸ್ಪರ್ಧಿಗಳೆಂದು ಸ್ಪಷ್ಟಪಡಿಸಿಲ್ಲ. ಹೆಚ್ಚಿನವರು ಭಾರತದವರೇ ಆಗಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.