ಚಿನ್ನ ಗೆದ್ದ ಅಭಿಷೇಕ್‌ಗೆ ಒಲಿಂಪಿಕ್ ಟಿಕೆಟ್
ಶೂಟಿಂಗ್ ವಿಶ್ವಕಪ್
Team Udayavani, Apr 28, 2019, 10:14 AM IST
ಬೀಜಿಂಗ್: “ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್’ನಲ್ಲಿ ಚಿನ್ನ ಗೆಲ್ಲುವ ಮೂಲಕ ಅಭಿಷೇಕ್ ವರ್ಮ ಟೋಕಿಯೊ ಒಲಿಂಪಿಕ್ಸ್‌ಗೆ
ಅರ್ಹತೆ ಪಡೆದಿದ್ದಾರೆ. ಇದು ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿದ 5ನೇ ಒಲಿಂಪಿಕ್ ಕೋಟಾ.
ಶನಿವಾರ ನಡೆದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ ಒಟ್ಟು 242.7 ಅಂಕ ಸಂಪಾದಿಸಿದ ಅಭಿಷೇಕ್ ಚಿನ್ನ ಗೆದ್ದರು. ರಶ್ಯದ ಅರ್ಟೆಮ್ ಚೆನೌìಸೋವ್ ಬೆಳ್ಳಿ (240.4) ಮತ್ತು ಕೊರಿಯದ ಸಿಂಗ್‌ವೊ ಹ್ಯಾನ್ (220.0) ಕಂಚಿನ ಪದಕ ಗೆದ್ದರು. ಅಭಿಷೇಕ್ ವರ್ಮ ಪಾಲಿಗೆ ಇದು ಮೊದಲ ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌ವಾಗಿತ್ತು. ಏಶ್ಯಾಡ್‌ನಲ್ಲಿ ಇದೇ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ ಹೆಗ್ಗಳಿಕೆ ಇವರ ಪಾಲಿಗಿದೆ.
ಅವಳಿ ಒಲಿಂಪಿಕ್ ಕೋಟಾ
ಈ ಮೂಲಕ ಭಾರತ ಇಲ್ಲಿಯ ವರೆಗೆ ಒಟ್ಟು 5 ಒಲಿಂಪಿಕ್ ಕೋಟಾಗಳನ್ನು ಸಂಪಾದಿಸಿದಂತಾ ಯಿತು. ವರ್ಷದ ಆರಂಭದಲ್ಲಿ ಹೊಸದಿಲ್ಲಿಯಲ್ಲಿ ನಡೆದ ವಿಶ್ವಕಪ್ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಒಲಿಂಪಿಕ್ ಅರ್ಹತೆ ಪಡೆದಿದ್ದರು. ಈಗ ಈ ವಿಭಾಗದ ಎರಡೂ ಒಲಿಂಪಿಕ್ ಕೋಟಾಗಳು ಭಾರತದ ಪಾಲಾಗಿವೆ.
ಹೊಸದಿಲ್ಲಿಯಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಅಭಿಷೇಕ್, ತವರಿನಲ್ಲಿ ಫೈನಲ್ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಶನಿವಾರದ ಅರ್ಹತಾ ಸುತ್ತಿನಲ್ಲಿ 585 ಅಂಕ ಪಡೆದು 4ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದರು.
ಅರ್ಹತಾ ಸುತ್ತಿನಲ್ಲಿದ್ದ ಭಾರತದ ಮತ್ತಿಬ್ಬರು ಸ್ಪರ್ಧಿಗಳಾದ ಶಾಜಾರ್ ರಿಜ್ವಿ ಮತ್ತು ಅರ್ಜುನ್ ಸಿಂಗ್ ಚೀಮ ಕ್ರಮವಾಗಿ 32ನೇ ಮತ್ತು 54ನೇ ಸ್ಥಾನ ಪಡೆದರು.
ಉಳಿದಂತೆ ಅಂಜುಮ್ ಮೌದ್ಗಿಲ್ ಮತ್ತು ಅಪೂರ್ವಿ ಚಾಂಡೇಲ (ವನಿತೆಯರ 10 ಮೀ. ಏರ್ ರೈಫಲ್), ದಿವ್ಯಾಂಶ್ ಸಿಂಗ್ ಪನ್ವಾರ್ (ಪುರುಷರ 10 ಮೀ. ಏರ್ ರೈಫಲ್) ಟೋಕಿಯೊ ಒಲಿಂಪಿಕ್ ಅರ್ಹತೆ ಸಂಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.