ಅಂಜುಮ್‌ ಮೌದ್ಗಿಲ್‌ಗೆ ಬೆಳ್ಳಿಯ ಪದಕ


Team Udayavani, Mar 10, 2018, 8:15 AM IST

s-8.jpg

ಹೊಸದಿಲ್ಲಿ: ಮೆಕ್ಸಿಕೋದ ಗ್ವಾಡಲಜಾರದಲ್ಲಿ ಸಾಗುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯ ವನಿತೆಯರ 50 ಮೀ. 3 ಪೊಸಿಸನ್ಸ್‌ ವಿಭಾಗದಲ್ಲಿ ಭಾರತದ ಅಂಜುಮ್‌ ಮೌದ್ಗಿಲ್‌ ಅವರು ಬೆಳ್ಳಿಯ ಪದಕ ಗೆದ್ದಿದ್ದಾರೆ.

ಜೊರಾಗಿ ಗಾಳಿ ಬೀಸುತ್ತಿದ್ದರೂ ಉತ್ತಮ ನಿರ್ವಹಣೆ ದಾಖಲಿಸಿದ ಅಂಜುಮ್‌ 45 ಹೊಡೆತಗಳ ಫೈನಲ್‌ ಹೋರಾಟದಲ್ಲಿ 454.2 ಅಂಕ ಗಳಿಸಿ ಬೆಳ್ಳಿ ಗೆಲ್ಲಲು ಯಶಸ್ವಿಯಾದರು. ಇದು ವಿಶ್ವಕಪ್‌ನಲ್ಲಿ ಅವರ ಮೊದಲ ಪದಕವಾಗಿದೆ. ಮಾಜಿ ಜೂನಿಯರ್‌ ವಿಶ್ವ ಚಾಂಪಿಯನ್‌ ಚೀನದ ರುಯಿಜಿಯಾವೊ ಪೆಯಿ (455.4) ಚಿನ್ನ ಗೆದ್ದರೆ ಅದೇ ದೇಶದ ಟಿಂಗ್‌ ಸನ್‌ ಕಂಚು ಪಡೆದರು.

ಈ ವಿಶ್ವಕಪ್‌ನಲ್ಲಿ ಇದು ಭಾರತಕ್ಕೆ ಲಭಿಸಿದ ಎಂಟನೇ ಮತ್ತು ಮೊದಲ ಬೆಳ್ಳಿಯ ಪದಕವಾಗಿದೆ. ಭಾರತ ಈ ಮೊದಲು ಮೂರು ಚಿನ್ನ ಮತ್ತು ನಾಲ್ಕು ಕಂಚಿನ ಪದಕ ಜಯಿಸಿತ್ತು. ಇದು ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತದ ಇಷ್ಟರವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ. ಒಟ್ಟಾರೆ ಎಂಟು ಪದಕ ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಚೀನ ದ್ವಿತೀಯ (2 ಚಿನ್ನ, 2 ಬೆಳ್ಳಿ, 1 ಕಂಚು) ಸ್ಥಾನದಲ್ಲಿದೆ.

ಫೈನಲ್‌ ಸ್ಪರ್ಧೆಯ ಆರಂಭದಲ್ಲಿಯೇ ಅಂಜುಮ್‌ ಪದಕ ಗೆಲ್ಲುವ ಫೇವರಿಟ್‌ ಸ್ಪರ್ಧಿಯಾಗಿದ್ದರು. 15 ಹೊಡೆತಗಳ ಮೊದಲ ಸುತ್ತು ಮುಗಿದಾಗ ಅಂಜುಮ್‌ ಮೂರನೇ ಸ್ಥಾನದಲ್ಲಿದ್ದರು. ಐದು ಹೊಡೆತಗಳ ಪ್ರೋನ್‌ ಪೊಸಿಸನ್‌ನಲ್ಲಿ ಅಂಜುಮ್‌ ಮುನ್ನಡೆ ಸಾಧಿಸಲು ಯಶಸ್ವಿಯಾದರು. 41ನೇ ಹೊಡೆತದಲ್ಲಿ ಅದ್ಭುತವಾಗಿ ಆಡಿ 10.8 ಅಂಕ ಕಲೆ ಹಾಕಿದ ಅಂಜುಮ್‌ ಬೆಳ್ಳಿ ಗೆದ್ದರು. ಅರ್ಹತಾ ಸುತ್ತಿನಲ್ಲಿಯೂ ಅಂಜುಮ್‌ ಅಮೋಘ ಆಟದ ಪ್ರದರ್ಶನ ನೀಡಿದ್ದರು. 

ಪುರುಷರ 25 ಮೀ. ರ್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ 15ರ ಹರೆಯದ ಅನೀಶ್‌ ಭಾನ್ವಾಲ ಅವರು ಭರ್ಜರಿ ಆಟವಾಡಿದರೂ ಫೈನಲ್‌ ಹಂತಕ್ಕೇರಲು ವಿಫ‌ಲರಾಗಿ ನಿರಾಶೆ ಅನುಭವಿಸಿದರು. ಮೊದಲ ಸುತ್ತಿನ ಬಳಿಕ ಮೂರನೇ ಸ್ಥಾನದಲ್ಲಿದ್ದ ಅವರು ಆಬಳಿಕ ಆಘಾತ ಅನುಭವಿಸಿ ಏಳನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು. ಕಣದಲ್ಲಿದ್ದ ಭಾರತದ ಇನ್ನೋರ್ವ ಸ್ಪರ್ಧಿ ನೀರಜ್‌ ಕುಮಾರ್‌ 13ನೇ ಸ್ಥಾನ ಪಡೆದರು. 

ಟಾಪ್ ನ್ಯೂಸ್

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.