ಪದಕ ಕೈಗಿಡುವ ಮುನ್ನವೇ ಅಪ್ಪನ ಸಾವು!
Team Udayavani, Sep 5, 2018, 6:00 AM IST
ಹೊಸದಿಲ್ಲಿ: ಜಕಾರ್ತಾದಲ್ಲಿ ಇತ್ತೀಚೆಗಷ್ಟೇ ಮುಗಿದ ಏಷ್ಯಾಡ್ ಕ್ರೀಡಾಕೂಟ ಭಾರತೀಯರನ್ನು ಸಂಭ್ರಮದಲ್ಲಿ ಮುಳುಗೇಳಿಸಿದ್ದರೆ, ಆ್ಯತ್ಲೀಟ್ ತೇಜಿಂದರ್ ಪಾಲ್ ಶಾಟ್‌ಪುಟ್‌ನಲ್ಲಿ ಚಿನ್ನ ಗೆದ್ದೂ ಸಂಭ್ರಮಿಸಲಾಗದ ಸ್ಥಿತಿಯಲ್ಲಿದ್ದಾರೆ. ತೇಜಿಂದರ್ ಸಿಂಗ್ ಬಂಗಾರ ಗೆದ್ದು, ಅದನ್ನು ತಂದೆಯ ಕೈಗಿಡುವ ಮುನ್ನವೇ ತಂದೆ ಕ್ಯಾನ್ಸರ್‌ನಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ತಂದೆಯ ಕಡೆಯಾಸೆ ಈಡೇರಿಸಲಾಗದೆ ಪುತ್ರ ದುಃಖತಪ್ತರಾಗಿದ್ದಾರೆ.
ಪಂಜಾಬ್‌ನ ಮೊಗಾ ಜಿಲ್ಲೆಯ ತೇಜಿಂದರ್ ಪಾಲ್ ಸಿಂಗ್ ಏಷ್ಯಾಡ್‌ನಲ್ಲಿ ಶಾಟ್‌ಪುಟ್ ಸ್ವರ್ಣ ಗೆದ್ದ ದೇಶದ ಮೊದಲ ಸಾಧಕರಾಗಿ ಇತಿಹಾಸ ನಿರ್ಮಿಸಿದ್ದಾರೆ. ಇಷ್ಟೆಲ್ಲ ಹೆಗ್ಗಳಿಕೆಯನ್ನು ಸಂಪಾದಿಸುವ ಹೊತ್ತಿಗೆ ತಂದೆ ಕರಮ್ ಸಿಂಗ್ ಕ್ಯಾನ್ಸರ್‌ನಿಂದ ಆಸ್ಪತ್ರೆಯಲ್ಲಿ ನರಳುತ್ತಿದ್ದರು. ಮರಳಿ ತಂದೆಯ ಮುಂದೆ ನಿಲ್ಲಬೇಕೆನ್ನುವ ಕನಸು ಕಂಡ ಅವರು ಮನೆಗೆ ಮರಳುವಷ್ಟರಲ್ಲಿ ತಂದೆ ಕೊನೆಯುಸಿರೆಳೆದಿದ್ದರು.
ಚಿನ್ನ ಗೆದ್ದಾದ ಅನಂತರ ತನ್ನ ಯಶಸ್ಸಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತಂದೆಗೆ ಪದಕವನ್ನು ಅರ್ಪಿಸಿದ್ದರು. ವಿಧಿ ಇಚ್ಛೆ ಬೇರೆಯಿತ್ತು ಪುತ್ರ ಗೆದ್ದ ಪದಕವನ್ನು ತಾನು ಕೈಯಲ್ಲಿ ಮುಟ್ಟಬೇಕೆಂಬ ತುಡಿತವನ್ನು ತಂದೆ ಹೊಂದಿದ್ದರು. ಅದೇ ಕಾರಣಕ್ಕೆ ತೇಜಿಂದರ್ ಮೊಗಾಕ್ಕೆ ಬೇಗ ತಲುಪಲು ಮುಂದಾಗಿದ್ದರು. ಸೋಮವಾರ ರಾತ್ರಿ ಹೊತ್ತಿಗೆ ದಿಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಿದರು. ಇನ್ನೇನು ಹೊಟೇಲ್‌ಗೆ ತೆರಳುವ ಸಿದ್ಧತೆಯಲ್ಲಿದ್ದಾಗಲೇ ತಂದೆ ಸಾವಿನ ಸುದ್ದಿಯಿಂದ ಆಘಾತಗೊಂಡರು.
ಪುತ್ರನ ಕ್ರಿಕೆಟ್ ಹುಚ್ಚು ಬಿಡಿಸಿದ್ದ ತಂದೆ
ತೇಜಿಂದರ್ ಬಾಲ್ಯದಿಂದಲೇ ಭಾರತದ ಬಹುತೇಕ ಮಕ್ಕಳಂತೆ ಕ್ರಿಕೆಟ್ ಗೀಳು ಅಂಟಿಸಿಕೊಂಡಿದ್ದರು. ಆದರೆ ಟ್ರಕ್ ಚಾಲಕರಾಗಿ ಜೀವನ ನಡೆಸುತ್ತಿದ್ದ ಕರಮ್ ಸಿಂಗ್, ಕ್ರಿಕೆಟ್ ಬೇಡ, ಶಾಟ್‌ಪುಟ್ ಕಲಿ ಎಂದು ಮಗನನ್ನು ಹುರಿದುಂಬಿಸಿದರು. ಈಗ 23 ವರ್ಷದವರಾಗಿರುವ ತೇಜಿಂದರ್ 2006ರಿಂದ ತಮ್ಮ ಊರಾದ ಖೋಸಾಪಾಂಡೊದಲ್ಲಿ ಶಾಟ್‌ಪುಟ್ ತರಬೇತಿ ಆರಂಭಿಸಿದರು. ತಂದೆಯ ಸಲಹೆ ಈಗ ಚಿನ್ನವಾಗಿ ಬದಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.