IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Team Udayavani, Nov 24, 2024, 4:15 PM IST
ಜೆಡ್ಡಾ: ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು 2025 ಆರಂಭವಾಗಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ಶನಿವಾರ (ನ.24) ನಡೆಯುತ್ತಿದೆ. ಮಲ್ಲಿಕಾ ಸಾಗರ್ ಐಪಿಎಲ್ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಈ ಬಾರಿಯ ಹರಾಜಿನ ಮೊದಲ ಆಟಗಾರನಾಗಿ ಅರ್ಶದೀಪ್ ಸಿಂಗ್ ಅವರು 18 ಕೋಟಿ ರೂ ಗೆ ಮತ್ತೆ ಪಂಜಾಬ್ ಕಿಂಗ್ಸ್ ಪಾಲಾದರು. ಸನ್ ರೈಸರ್ಸ್ ಹೈದರಾಬಾದ್ ನಡೆಸಿದ ಬಿಡ್ಡಿಂಗ್ ಗೆ ಪಂಜಾಬ್ ಆರ್ ಟಿಎಂ ಕಾರ್ಡ್ ಖರೀದಿಸಿ ವೇಗಿಯನ್ನು ತಮ್ಮಲ್ಲೇ ಉಳಿಸಿಕೊಂಡಿತು.
ಟೈಟಾನ್ಸ್ ಪಾಲಾದ ರಬಾಡ
ವೇಗಿ ಕಗಿಸೋ ರಬಾಡ ಅವರನ್ನು ಮೊದಲು ಆರ್ ಸಿಬಿ ತಂಡದವರು ಮೂಲ ಬೆಲೆ 2 ಕೋಟಿ ರೂ.ಗೂ ಖರೀದಿಸಲು ಮುಂದಾದರು. ಆ ಬಳಿಕ ಗುಜರಾತ್ ಟೈಟಾನ್ಸ್ ಹರಾಜು ಪ್ರಕ್ರಿಯೆ ಮುಂದಾದರು.
ಆ ಬಳಿಕ ಮುಂಬಯಿ ಹಾಗೂ ಗುಜರಾತ್ ನಡುವೆ ಪೈಪೋಟಿ ನಡೆಯಿತು. 10 ಕೋಟಿ ಅಧಿಕ ಬೆಲೆಗೆ ಕಗಿಸೋ ಅವರ ಬೆಲೆ ಏರಿಕೆ ಆಯಿತು.
ಕೊನೆಯದಾಗಿ 10.75 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್ ತಂಡ ರಬಾಡ ಅವರನ್ನು ಖರೀದಿ ಮಾಡಿತು.
ಶ್ರೇಯಸ್ ಅಯ್ಯರ್
ಹಾಲಿ ಚಾಂಪಿಯನ್ ಕೆಕೆಆರ್ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರು ಮೂರನೇ ಆಟಗಾರನಾಗಿ ಹರಾಜಿಗೆ ಬಂದರು. ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ಆರಂಭದಲ್ಲಿ ಪೈಪೋಟಿ ನಡೆಸಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಬಿಡ್ಡಿಂಗ್ ನಡೆಸಿತು. ನಾಯಕನಿಗಾಗಿ ಎದುರು ನೋಡುತ್ತಿರುವ ಪಂಜಾಬ್ ಮತ್ತು ಡೆಲ್ಲಿ ತಂಡಗಳು ನಡುವೆ ಅಯ್ಯರ್ ಗಾಗಿ ಭಾರಿ ಪ್ರಯತ್ನಗಳು ನಡೆದವು.
ಕೊನೆಗೆ ಬಲಗೈ ಆಟಗಾರ ಅಯ್ಯರ್ ದಾಖಲೆಯ ಬರೋಬ್ಬರಿ 26.75 ಕೋಟಿ ರೂ ಬೆಲೆಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದರು. ಈ ಮೂಲಕ ಅತಿ ಹೆಚ್ಚು ಹಣ ಪಡೆದ ಆಟಗಾರ ಎಂಬ ಐಪಿಎಲ್ ದಾಖಲೆ ಬರೆದರು. ಇದುವರೆಗೆ 24.75 ಕೋಟಿ ರೂ ಪಡೆದಿದ್ದ ಮಿಚೆಲ್ ಸ್ಟಾರ್ಕ್ ಅವರು ಐಪಿಎಲ್ ನ ದುಬಾರಿ ಆಟಗಾರನಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.