ಭಾರತ “ಎ’ ತಂಡಗಳಿಗೆ ಅಯ್ಯರ್, ನಾಯರ್ ನಾಯಕರು
Team Udayavani, May 9, 2018, 6:00 AM IST
ಬೆಂಗಳೂರು: ಐಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ಶ್ರೇಯಸ್ ಅಯ್ಯರ್ ಅವರನ್ನು ಇಂಗ್ಲೆಂಡ್‌ನಲ್ಲಿ ನಡೆಯುವ ಏಕದಿನ ತ್ರಿಕೋನ ಸರಣಿಗೆ ಭಾರತ “ಎ’ ತಂಡದ ನಾಯಕರನ್ನಾಗಿ ಹೆಸರಿಸಲಾಗಿದೆ. ಇದೇ ವೇಳೆ ನಾಲ್ಕು ದಿನಗಳ ಪಂದ್ಯಗಳಿಗೆ ಕರುಣ್ ನಾಯರ್ ತಂಡವನ್ನು ಮುನ್ನಡೆಸಲಿದ್ದಾರೆ.
ಕಳೆದ ಕೆಲವು ಋತುಗಳಲ್ಲಿ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ ಕೂಟಗಳಲ್ಲಿ ಉತ್ತಮ ನಿರ್ವಹಣೆ ನೀಡಿದ ಹಲವು ಆಟಗಾರರು ಭಾರತ “ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತ್ರಿಕೋನ ಸರಣಿ ಜೂನ್ 22ರಿಂದ ಇಂಗ್ಲೆಂಡ್ ಲಯನ್ಸ್ (“ಎ’ ತಂಡ) ಮತ್ತು ವೆಸ್ಟ್‌ಇಂಡೀಸ್ “ಎ’ ತಂಡದೆದುರು ನಡೆಯುವ ಏಕದಿನ ತ್ರಿಕೋನ ಸರಣಿ ಮೂಲಕ ಭಾರತ “ಎ’ ತಂಡದ ಇಂಗ್ಲೆಂಡ್ ಪ್ರವಾಸ ಆರಂಭಗೊಳ್ಳಲಿದೆ.
ಚತುರ್ದಿನ ಟೆಸ್ಟ್, ತ್ರಿದಿನ ಪಂದ್ಯ
ಭಾರತ “ಎ’ ತಂಡವು ಆಬಳಿಕ ಜುಲೈ 16ರಿಂದ 19ರ ವರೆಗೆ ಇಂಗ್ಲೆಂಡ್ “ಎ’ ತಂಡದೆದುರು ಚತುರ್ದಿನ ಟೆಸ್ಟ್‌ನಲ್ಲಿ ಆಡಲಿದೆ. ಇದರ ನಡುವೆ ಕೌಂಟಿ ತಂಡಗಳೆದುರು ಕೆಲವು ತ್ರಿದಿನ ಪಂದ್ಯಗಳಲ್ಲಿ ಆಡಲಿದೆ. ಶ್ರೇಯಸ್ ಅವರಲ್ಲದೇ ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಸ್ಯಾಮ್ಸನ್, ರಿಷಬ್ ಪಂತ್, ವಿಜಯ್ ಶಂಕರ್, ಶಾದೂìಲ್ ಠಾಕುರ್, ದೀಪಕ್ ಚಹರ್, ಕೆ. ಗೌತಮ್ “ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಾಯರ್ ನೇತೃತ್ವದ ತಂಡದಲ್ಲೂ ದೇಶೀಯ ಕ್ರಿಕೆಟಿನ ಪ್ರಮುಖರು ಒಳಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.