ಒಲಿಂಪಿಕ್ಸ್ ಅರ್ಹತಾ ಸಮಯ ದಾಖಲಿಸಿದ ಶ್ರೀಹರಿ ನಟರಾಜನ್
Team Udayavani, Jun 29, 2021, 9:32 AM IST
ಹೊಸದಿಲ್ಲಿ: ರೋಮ್‌ನಲ್ಲಿ ನಡೆದ ಸೆಟ್ಟಿ ಕೊಲ್ಲಿ ಚಾಂಪಿಯನ್ ಶಿಪ್‌ನಲ್ಲಿ ಬೆಂಗಳೂರಿನ ಈಜುಪಟು ಶ್ರೀಹರಿ ನಟರಾಜ್ 100 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಒಲಿಂಪಿಕ್ಸ್ ಅರ್ಹತಾ ಸಮಯದ ದಾಖಲೆ ಮಾಡಿದ್ದಾರೆ. ನಿಗದಿತ ಸಮಯದ ಪ್ರಯೋಗದಲ್ಲಿ ಅವರು ತೆಗೆದುಕೊಂಡ 53.77 ಸೆಕೆಂಡ್ ಅವಧಿ 53.85 ಸೆಕೆಂಡ್ “ಎ’ ಕಟ್ ಸಮಯಕ್ಕಿಂತ ಉತ್ತಮವಾಗಿದೆ.
ವಿಶ್ವ ಈಜು ಸಂಸ್ಥೆಯಾದ ಫಿನಾಗೆ ಈ ಬಗ್ಗೆ ತಿಳಿಸಲಾಗಿದ್ದು ಸಂಸ್ಥೆಯು ಅದನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತದೆ. ಒಂದೊಮ್ಮೆ ಫಿನಾ ಶ್ರೀಹರಿಯವರ ಸಮಯದ ಮಿತಿಯ ಈಜನ್ನು ಪುರಸ್ಕರಿಸಿದ್ದರೆ ಶನಿವಾರ ಸಾಧನೆ ಮಾಡಿದ ಸಜನ್ ಪ್ರಕಾಶ್ ಬಳಿಕ ನೇರ ಒಲಿಂಪಿಕ್ಸ್ ಕೋಟಾ ಗಳಿಸಿದ ಎರಡನೇ ಭಾರತೀಯ ಈಜುಗಾರರಾಗುತ್ತಾರೆ.
“ಅನುಮೋದಿತ ಅರ್ಹತಾ ವಿಭಾಗದಲ್ಲಿ ಸಮಯದ ವಿನಂತಿಯಿಂದ ಫಲಿತಾಂಶವನ್ನು ಫಿನಾ ನಿರ್ಧರಿಸಲಿದೆ. 400 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಯುಎಸ್ ಒಲಿಂಪಿಕ್ಸ್ ತಂಡದ ಪ್ರಯೋಗಗಳಂತೆ ಇತ್ತೀಚೆಗೆ ಅನೇಕ ಮಾನ್ಯತೆ ಪಡೆದ ವಿಭಾಗಗಳಲ್ಲಿ ಇದನ್ನು ವಾಡಿಕೆಯಂತೆ ಮಾಡಲಾಗಿತ್ತು’ ಎಂದು ಭಾರತದ ಈಜು ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮೋನಾಲ್ ಚೋಕ್ಷಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.