IPL Retentions: ಗುಜರಾತ್‌ನಲ್ಲಿ ಪ್ರಮುಖರ ಉಳಿಕೆಗಾಗಿ ವೇತನ ಕಡಿತಕ್ಕೆ ಒಪ್ಪಿದ ಗಿಲ್ ?
ಗಿಲ್ ತ್ಯಾಗದಿಂದ ರಶೀದ್, ಸುದರ್ಶನ್, ತೆವಾಟಿಯಾ, ಶಾರುಖ್ ತಂಡದಲ್ಲೇ ಉಳಿಕೆ ನಿರೀಕ್ಷೆ
Team Udayavani, Oct 31, 2024, 7:30 AM IST
ನವದೆಹಲಿ: ತಂಡದಲ್ಲಿ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಸಲುವಾಗಿ ಗುಜರಾಟ್ ಟೈಟಾನ್ಸ್‌ನ ನಾಯಕ ಶುಭಮನ್ ಗಿಲ್ ತನ್ನ ವೇತನವನ್ನೇ ಕಡಿತ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಶುಭಮನ್‌ರನ್ನು ಫ್ರಾಂಚೈಸಿ 2ನೇ ಆದ್ಯತೆಯ ಆಟಗಾರನಾಗಿ ಉಳಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ. ಐಪಿಎಲ್ ಫ್ರಾಂಚೈಸಿಗಳು ಉಳಿಕೆ ಆಟಗಾರರ ಅಂತಿಮ ಪಟ್ಟಿ ಪ್ರಕಟಿಸಲು ಗುರುವಾರ ಅಂತಿಮ ದಿನವಾಗಿದೆ.
ಶುಭಮನ್ ಗಿಲ್ ಅವರ ವೇತನ ತ್ಯಾಗದಿಂದಾಗಿ ಫ್ರಾಂಚೈಸಿ ಈ ಬಾರಿ ತಂಡದ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಹೀಗಾಗಿ ತಾರಾ ಸ್ಪಿನ್ನರ್ ಅಫ್ಘಾನಿಸ್ತಾನದ ರಶೀದ್ ಖಾನ್ (18 ಕೋಟಿ ರೂ.), ಶುಭಮನ್ (14 ಕೋಟಿ), ಬ್ಯಾಟರ್ ಸಾಯಿ ಸುದರ್ಶನ್ (11 ಕೋಟಿ), ಅನ್ ಕ್ಯಾಪ್ಡ್ ಆಟಗಾರರಾದ ರಾಹುಲ್ ತೆವಾಟಿಯಾ (18 ಕೋಟಿ), ಶಾರುಖ್ ಖಾನ್ (4 ಕೋಟಿ) ಅವರನ್ನು ತಂಡದಲ್ಲೇ ಉಳಿದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಕೆಕೆಆರ್‌ನಿಂದ ನಾಯಕ ಶ್ರೇಯಸ್ ಬಿಡುಗಡೆ?
ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ ತಂಡವನ್ನು ಕಳೆದ ಬಾರಿ ಮುನ್ನಡೆಸಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನೇ ಕೈಬಿಡಲು ತಂಡ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಉಳಿಕೆ ವಿಚಾರದಲ್ಲಿ ಫ್ರಾಂಚೈಸಿ ಮತ್ತು ಶ್ರೇಯಸ್ ಮಧ್ಯೆ ನಡೆದ ಮಾತುಕತೆ ವಿಫಲವಾದ ಕಾರಣ ಅವರು ತಂಡ ತೊರೆಯುವ ಸಾಧ್ಯತೆಯಿದೆ. 2022ರ ಹರಾಜಿನ ವೇಳೆ ಶ್ರೇಯಸ್ ಅವರನ್ನು ಕೆಕೆಆರ್ 12.25 ಕೋಟಿ ರೂ.ಗೆ ಖರೀದಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Cricket: ದಕ್ಷಿಣ ಆಫ್ರಿಕಾ ಹಿಡಿತದಲ್ಲಿ ದ್ವಿತೀಯ ಟೆಸ್ಟ್
Pro Kabaddi League: ಗುಜರಾತ್ ಜೈಂಟ್ಸ್ ಮಣಿಸಿದ ತಮಿಳ್ ತಲೈವಾಸ್
Paris Masters: ರೋಹನ್ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ
Test Cricket: 3ನೇ ಟೆಸ್ಟ್‌ನಲ್ಲಿ ಹರ್ಷಿತ್ ಆಡಲ್ಲ, ಬುಮ್ರಾ ಕಣಕ್ಕೆ: ನಾಯರ್ ಸುಳಿವು
Test Bowling Rankings: 3ನೇ ಸ್ಥಾನಕ್ಕೆ ಕುಸಿದ ಬುಮ್ರಾ
MUST WATCH
ಹೊಸ ಸೇರ್ಪಡೆ
ಈ ದೀಪಾವಳಿ ಎಲ್ಲರ ಜೀವನದಲ್ಲೂ ಸಂತೋಷ ಸಮೃದ್ಧಿ ತರಲಿ… ದೇಶದ ಜನತೆಗೆ ಪ್ರಧಾನಿ ಶುಭಾಶಯ
Test Cricket: ದಕ್ಷಿಣ ಆಫ್ರಿಕಾ ಹಿಡಿತದಲ್ಲಿ ದ್ವಿತೀಯ ಟೆಸ್ಟ್
Sri Murali: ಇಂದಿನಿಂದ ಬಘೀರ ಬೇಟೆ ಶುರು
Renukaswamy Case: ನಟ ದರ್ಶನ್‌ಗೆ ಜಾಮೀನು ಕೊಟ್ಟು ಹೈಕೋರ್ಟ್ ವಿಧಿಸಿರುವ ಷರತ್ತುಗಳೇನು?
Forest Land: ಎಚ್‌ಎಂಟಿ ಜಾಗಕ್ಕೆ ಸಚಿವ ಖಂಡ್ರೆ ಅತಿಕ್ರಮ ಪ್ರವೇಶ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.