ಮಾಂಟ್ರಿಯಲ್ ಟೆನಿಸ್: ವೀನಸ್ ವಿರುದ್ಧ ಹಾಲೆಪ್ ಹಾರಾಟ
Team Udayavani, Aug 11, 2018, 8:21 AM IST
ಮಾಂಟ್ರಿಯಲ್: ವಿಶ್ವದ ನಂಬರ್ ವನ್ ಆಟಗಾರ್ತಿ ಸಿಮೋನಾ ಹಾಲೆಪ್ ಮಾಂಟ್ರಿಯಲ್ ಎಟಿಪಿ ಟೆನಿಸ್ ಪಂದ್ಯಾವಳಿಯಲ್ಲಿ ವೀನಸ್ ವಿಲಿಯಮ್ಸ್ ಆಟವನ್ನು ಕೊನೆಗೊಳಿಸಿದ್ದಾರೆ. ಕೇವಲ 71 ನಿಮಿಷಗಳ ಹೋರಾಟದ ಬಳಿಕ ವೀನಸ್‌ಗೆ 6-2, 6-2 ಅಂತರದ ಸೋಲುಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ರಶ್ಯದ ಮರಿಯಾ ಶರಪೋವಾ ಕೂಡ ವೀನಸ್ ಹಾದಿಯನ್ನೇ ಹಿಡಿದಿದ್ದಾರೆ.
ರಶ್ಯದ ಪಾವು ಚೆಂಕೋವಾ ವಿರುದ್ಧದ ಮಳೆಬಾಧಿತ ಸುದೀರ್ಘ ಪಂದ್ಯವನ್ನು ಗೆದ್ದ ಕೆಲವೇ ಗಂಟೆಗಳಲ್ಲಿ ಸಿಮೋನಾ ಹಾಲೆಪ್ ಪ್ರಿ-ಕ್ವಾರ್ಟರ್ ಫೈನಲ್ ಆಡಲಿಳಿ ದಿದ್ದರು. ಹಾಲೆಪ್ ಅವರ ಎಂಟರ ಸುತ್ತಿನ ಎದುರಾಳಿ ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ. ಅವರು ಮರಿಯಾ ಶರಪೋವಾಗೆ 6-3, 6-2 ಅಂತರದ ಸೋಲುಣಿಸಿದರು. ಕಳೆದ ವರ್ಷವೂ ಹಾಲೆಪ್-ಗಾರ್ಸಿಯಾ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಗಿದ್ದರು. ಇದರಲ್ಲಿ ಹಾಲೆಪ್‌ಗೆ ಗೆಲುವು ಒಲಿದಿತ್ತು.
ಸ್ಟೀಫನ್ಸ್-ಸೆವತ್ಸೋವಾ ಮುಖಾಮುಖಿ
ಯುಎಸ್ ಓಪನ್ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಸ್ಪೇನಿನ ಕಾರ್ಲಾ ಸೂರೆಜ್ ನವಾರೊ ವಿರುದ್ಧ 6-2, 7-5 ಅಂತರದ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇವರ ಎದುರಾಳಿ ಲಾತ್ವಿಯಾದ ಅನಾಸ್ತಾಸಿಜಾ ಸೆವತ್ಸೋವಾ. ಅವರು ಜರ್ಮನಿಯ ಜೂಲಿಯಾ ಜಾರ್ಜಸ್ ವಿರುದ್ಧ 6-3, 7-6 (7-2) ಅಂತರದಿಂದ ಗೆದ್ದು ಬಂದರು.
ಫ್ರಾನ್ಸ್‌ನ ಅಲಿಜೆ ಕಾರ್ನೆಟ್ ವಿರುದ್ಧ 7-6 (7-3), 6-4 ಅಂತರದ ಗೆಲುವು ಸಾಧಿಸಿದ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇವರ ಎದುರಾಳಿ ಹಾಲೆಂಡ್‌ನ ಕಿಕಿ ಬರ್ಟೆನ್ಸ್. ಇನ್ನೊಂದು ಮುಖಾ ಮುಖೀಯಲ್ಲಿ ಬರ್ಟೆನ್ಸ್ 6-3, 6-2ರಿಂದ ಪೆಟ್ರಾ ಕ್ವಿಟೋವಾಗೆ ಸೋಲಿನೇಟು ನೀಡಿದರು.ಕ್ಯಾರೋಲಿನ್ ವೋಜ್ನಿಯಾಕಿ ಅವರನ್ನು ಮಣಿಸಿ ಟೆನಿಸ್ ಬಾಳ್ವೆಯ ದೊಡ್ಡ ಗೆಲುವು ಸಾಧಿಸಿದ ಬೆಲರೂಸ್‌ನ ಅರಿನಾ ಸಬಲೆಂಕಾ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್‌ಗೆ ಶರಣಾಗಿದ್ದಾರೆ.
ಮಳೆಯಿಂದ ವಿಳಂಬಗೊಂಡ ದ್ವಿತೀಯ ಸುತ್ತಿನ ಪಂದ್ಯವೊಂದ ರಲ್ಲಿ ಬ್ರಿಟನ್ನಿನ ಜೊಹಾನ್ನಾ ಕೊಂಟಾ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾಗೆ 6-3, 6-1ರಿಂದ ಆಘಾತವಿಕ್ಕಿದ್ದಾರೆ. ಬಳಿಕ ಎಲೆನಾ ಸ್ವಿಟೋಲಿನಾಗೆ 6-3, 6-4ರಿಂದ ಶರಣಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.