ವಿಂಬಲ್ಡನ್-2018: ನಂ.1 ಸಿಮೋನಾ ಹಾಲೆಪ್ ನಿರ್ಗಮನ
Team Udayavani, Jul 8, 2018, 11:10 AM IST
ಲಂಡನ್: ವಿಶ್ವದ ನಂಬರ್ ವನ್ ಆಟಗಾರ್ತಿ ಸಿಮೋನಾ ಹಾಲೆಪ್ ವಿಂಬಲ್ಡನ್ ಕೂಟದಿಂದ ಹೊರಬಿದ್ದಿದ್ದಾರೆ. ಶನಿವಾರದ ತೃತೀಯ ಸುತ್ತಿನ ಪಂದ್ಯದಲ್ಲಿ ತೈವಾನ್‌ನ ಶೀ ಸು ವೀ 3-6, 6-4, 7-5 ಅಂತರದಿಂದ ಹಾಲೆಪ್ ಹಾರಾಟವನ್ನು ಕೊನೆಗೊಳಿಸಿದರು. ವಿಶ್ವದ ನಂ. 48 ಆಟಗಾರ್ತಿ ಸು ವೀ ನಿರ್ಣಾಯಕ ಸೆಟ್‌ನಲ್ಲಿ 2-5ರ ಹಿನ್ನಡೆಯಿಂದ ಪಾರಾಗಿ ಬಂದು ಹಾಲೆಪ್‌ಗೆ ಸೋಲುಣಿಸಿದ್ದೊಂದು ಅಚ್ಚರಿ ಎನಿಸಿತು.
ಶುಕ್ರವಾರ ರಾತ್ರಿಯ ಸ್ಪರ್ಧೆಯಲ್ಲಿ 5 ಬಾರಿಯ ವಿಂಬಲ್ಡನ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಕೂಡ ಸೋಲನುಭವಿಸಿದ್ದಾರೆ. 3ನೇ ಸುತ್ತಿನ ಪಂದ್ಯದಲ್ಲಿ ಹಾಲೆಂಡಿನ ಕಿಕಿ ಬರ್ಟೆನ್ಸ್ ಭಾರೀ ಹೋರಾಟ ನಡೆಸಿ ವೀನಸ್ ಅವರನ್ನು 6-2, 6-7 (5-7), 8-6 ಅಂತರದಿಂದ ಹಿಮ್ಮೆಟ್ಟಿಸಿದರು.
ನಡಾಲ್, ಡೆಲ್ ಪೊಟ್ರೊ ಮುನ್ನಡೆ
ಪುರುಷರ ವಿಭಾಗದ ನಂ.1 ಟೆನಿಸಿಗ ರಫೆಲ್ ನಡಾಲ್ 4ನೇ ಸುತ್ತು ಪ್ರವೇಶಿಸಿದ್ದಾರೆ. ಶನಿವಾರದ ಪಂದ್ಯದಲ್ಲಿ ಅವರು ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ವಿರುದ್ಧ 6 -1, 6 -2, 6 -4 ಅಂತರದ ಜಯ ಸಾಧಿಸಿದರು.
ಆರ್ಜೆಂಟೀನಾ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಈ ಕೂಟದಲ್ಲಿ ಒಂದೂ ಸೆಟ್ ಕಳೆದುಕೊಳ್ಳದೆ 4ನೇ ಸುತ್ತಿಗೆ ಏರಿದರು. ತೃತೀಯ ಸುತ್ತಿನ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಬೆನೋಯಿಟ್ ಪೇರ್ ವಿರುದ್ಧ 6-4, 7-6 (4), 6-3 ಅಂತರದ ಜಯ ಒಲಿಸಿಕೊಂಡರು. 2016ರ ಫೈನಲಿಸ್ಟ್ ಕೆನಡಾದ ಮಿಲೋಸ್ ರಾನಿಕ್ ಕೂಡ 3ನೇ ಸುತ್ತು ದಾಟಿದ್ದಾರೆ. ಅವರು ಆಸ್ಟ್ರಿಯಾದ ಡೆನ್ನಿಸ್ ನೊವಾಕ್ ವಿರುದ್ಧ 7-6 (5), 4-6, 7-5, 6-2 ಅಂತರದಿಂದ ಗೆದ್ದು ಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
IPL Mega Auction: ಹರಾಜು ಆರಂಭ; ಭರ್ಜರಿ ಬಿಡ್ ಗಳಿಸಿದ ವೇಗಿ ಅರ್ಶದೀಪ್ ಸಿಂಗ್
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.