ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಮೊದಲ ಸುತ್ತಿನಲ್ಲೇ ಸಿಂಧು ಪತನ
Team Udayavani, Mar 16, 2023, 6:42 AM IST
ಬರ್ಮಿಂಗ್‌ಹ್ಯಾಮ್: ಭಾರತದ ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಅವರ ಕಳಪೆ ಪ್ರದರ್ಶನ “ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್’ ಪಂದ್ಯಾವಳಿಯಲ್ಲೂ ಮುಂದುವರಿಸಿದೆ. ಅವರಿಲ್ಲಿ ಮೊದಲ ಸುತ್ತಿನಲ್ಲೇ ಪತನಗೊಂಡಿದ್ದಾರೆ.
ಬುಧವಾರ ನಡೆದ ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಅವರನ್ನು ಚೀನದ ಜಾಂಗ್ ಯಿ ಮಾನ್ 21-17, 21-11 ಅಂತರದಿಂದ ಬಹಳ ಸುಲಭದಲ್ಲಿ ಮಣಿಸಿದರು. 39 ನಿಮಿಷದಲ್ಲಿ ಈ ಪಂದ್ಯ ಕೊನೆಗೊಂಡಿತು.
ಈ ವರ್ಷ ಪ್ರಥಮ ಸುತ್ತಿನಲ್ಲೇ ಸಿಂಧು ಅನುಭವಿಸಿದ 3ನೇ ಸೋಲು ಇದಾಗಿದೆ. ಇಂಡಿಯಾ ಓಪನ್ ಮತ್ತು ಮಲೇಷ್ಯಾ ಓಪನ್‌ನಲ್ಲೂ ಸಿಂಧು ಅವರಿಗೆ ಮೊದಲ ಸುತ್ತಿನ ಆಘಾತ ಕಾದಿತ್ತು. ಇತ್ತೀಚೆಗೆ ಸಿಂಧು ತಮ್ಮ ಕೋಚ್ ಪಾರ್ಕ್ ಟೆ-ಸ್ಯಾಂಗ್ ಅವರನ್ನು ತೊರೆದಿದ್ದರು. ಇವರ ಮಾರ್ಗದರ್ಶನದಲ್ಲೇ ಸಿಂಧು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಡಬಲ್ಸ್ ಗೆಲುವು
ಬುಧವಾರದ ವನಿತಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಗೆಲುವಿನ ಆರಂಭ ಪಡೆದರು. ಮೊದಲ ಸುತ್ತಿನ ಮುಖಾಮುಖಿಯಲ್ಲಿ ಇವರು ಥಾಯ್ಲೆಂಡ್‌ನ ಕಿಟಿತಾರಾಕುಲ್-ರವಿಂಡಾ ವಿರುದ್ಧ 21-18, 21-14 ಅಂತರದ ಜಯ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.