ಪುತ್ತೂರಿನ ತರಬೇತುದಾರನನ್ನು ಸತ್ಕರಿಸಿದ ಸಿಂಧು ಕುಟುಂಬ


Team Udayavani, Oct 17, 2019, 12:58 PM IST

f

ಪುತ್ತೂರು: ಆ ಕುಟುಂಬವೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಲಕ್ಷಾಂತರ ಅಭಿಮಾನಿಗಳ ದಂಡೇ ಇದೆ. ಆದರೂ 35 ವರ್ಷಗಳ ಹಿಂದೆ ತರಬೇತಿ ನೀಡಿದ ಪುತ್ತೂರಿಗನನ್ನು ಮರೆಯದೆ ಸತ್ಕರಿಸಿ ಕ್ರೀಡಾಪ್ರೀತಿ ಮೆರೆದಿದೆ!

ಇಂತಹ ಅಪರೂಪದ ಆತಿಥ್ಯಕ್ಕೆ ಸಾಕ್ಷಿಯಾದದ್ದು ಕೇರಳದ ತಿರುವನಂತ‌ಪುರ. ಇಲ್ಲಿ ಒಲಿಪಿಂಕ್ಸ್‌ ಪದಕ ವಿಜೇತ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು, ಅವರ ತಾಯಿ ವಿಜಯಾ ರಮಣ ಹಾಗೂ ದ.ಕ. ಜಿಲ್ಲೆಯ ಪುತ್ತೂರಿನ ಸಂಪ್ಯ ನಿವಾಸಿ, ಎನ್‌ಐಎಸ್‌ ಮಾಜಿ ತರಬೇತುದಾರ ಪಿ.ವಿ. ನಾರಾಯಣ್‌ 35 ವರ್ಷಗಳ ಬಳಿಕ ಪರಸ್ಪರ ಭೇಟಿಯಾದರು. ವಿಜಯಾ ವಾಲಿಬಾಲ್‌ ಪಟುವಾಗಿದ್ದು, 35 ವರ್ಷಗಳ ಹಿಂದೆ ನಾರಾಯಣ್‌ ಅವರು ವಾಲಿಬಾಲ್‌ ತರಬೇತಿ ನೀಡಿರುವುದೇ ಈ ಬೆಸುಗೆಗೆ ಕಾರಣ!

ಕೇರಳದಲ್ಲಿ ನಡೆದ ಭೇಟಿ
ಕೇರಳ ರಾಜ್ಯ ಒಲಿಂಪಿಕ್‌ ಅಸೋಸಿಯೇಶನ್‌ ಸಂಸ್ಥೆ ಬ್ಯಾಡ್ಮಿಂಟನ್‌ ಸಾಧನೆಗಾಗಿ ಸಿಂಧು ಅವರನ್ನು ಇತ್ತೀಚೆಗೆ ತಿರುವನಂತ‌ಪುರದಲ್ಲಿ ಗೌರವಿಸಿತ್ತು. ಇದನ್ನು ನಾರಾಯಣ್‌ ಅವರಿಗೆ ತಾಯಿ ವಿಜಯಾ ರಮಣ ತಿಳಿಸಿದ್ದರು.

ತರಬೇತಿ ನೀಡಿ ಊರಿಗೆ ಮರಳಿದ 35 ವರ್ಷದ ಬಳಿಕ ಪಿ.ವಿ. ನಾರಾಯಣ್‌ ಹಾಗೂ ಪಿ.ವಿ.ಸಿಂಧು ಕುಟುಂಬ ಭೇಟಿಯಾಗಿದೆ. “ಕೇರಳಕ್ಕೆ ಬರುವ ವಿಚಾರವನ್ನು ವಿಜಯಾ ರಮಣ ತಿಳಿಸಿದ್ದರು. ಅಲ್ಲಿ 35 ವರ್ಷಗಳ ಹಿಂದಿನ ದಿನಗಳ ನೆನಪುಗಳನ್ನು ಹಂಚಿಕೊಂಡೆವು. ಒಂದು ದಿನ ಉಳಿದುಕೊಂಡಿದ್ದ ಸಿಂಧು ಕುಟುಂಬದವ ರೊಂದಿಗೆ ರಾತ್ರಿ ಸಿಹಿ ಭೋಜನ ಸವಿದೆ’ ಎಂದು ನಾರಾಯಣ್‌ ಆತಿಥ್ಯವನ್ನು ಸ್ಮರಿಸಿಕೊಂಡರು.

“ಅ. 8ರ ರಾತ್ರಿ ತಿರುವನಂತ‌ಪುರ ಹೊಟೇಲ್‌ ನಲ್ಲಿ ಅವರ ಕೋರಿಕೆಯಂತೆ ವಿಶೇಷ ಭೋಜನದ ಆತಿಥ್ಯ ಸ್ವೀಕರಿಸಿದೆ. ಜತೆಗೆ ಸಿಂಧು ಅವರ ಭವಿಷ್ಯದ ಬಗ್ಗೆಯೂ ಮಾತಾಡಿದರು. ಮರುದಿನ ತಿರುವನಂತ‌ಪುರ ಪದ್ಮನಾಭಸ್ವಾಮಿ ಹಾಗೂ ಅಟ್ಟುಕಲ್‌ ದೇವಾಲಯಕ್ಕೆ ಭೇಟಿ ನೀಡಿದೆವು. ಅನಂತರ ಸಿಂಧು ತಿರುವನಂತ‌ಪುರ ಸಮಾರಂಭದಲ್ಲಿ ಪಾಲ್ಗೊಂಡು, ಸಂಜೆ 7 ಗಂಟೆಗೆ ಚೆನ್ನೈಗೆ ತೆರಳಿದರು. ಮುಂದಿನ ಒಲಿಂಪಿಕ್ಸ್‌ ಬಳಿಕ ಕುಟುಂಬ ಸಮೇತ ಪುತ್ತೂರಿಗೆ ಬರುವುದಾಗಿ ವಿಜಯಾ ರಮಣ ಹೇಳಿದ್ದಾರೆ’ ಎಂದು ಪಿ.ವಿ. ನಾರಾಯಣ್‌ ಈ ಭೇಟಿಯನ್ನು ವಿವರಿಸಿದರು.

ಸಿಂಧು ಕುಟುಂಬದ ಜತೆ ನಂಟು
ಮೂಲತಃ ಕೇರಳದವರಾದ ಪಿ.ವಿ. ನಾರಾಯಣ್‌ 1981ರಲ್ಲಿ ತಮಿಳುನಾಡಿನ ವಾಲಿಬಾಲ್‌ ತರಬೇತುದಾರರಾಗಿದ್ದರು. 1981-84ರಲ್ಲಿ ಚೆನ್ನೈನ ಕ್ರೊಂಪೆಟ್‌ ವೈಷ್ಣವ ಕಾಲೇಜಿನಲ್ಲಿ ಸಿಂಧು ಅವರ ತಾಯಿ ವಿಜಯಾ ರಮಣ ವ್ಯಾಸಂಗ ಮಾಡುತ್ತಿದ್ದರು. ಆಗ ರಾಜ್ಯ ಮಟ್ಟದ ವಾಲಿಬಾಲ್‌ ಕ್ಯಾಂಪ್‌ಗೆ ಆಯ್ಕೆಗೊಂಡಿದ್ದರು. ಆಗ ನಾರಾಯಣ್‌ ಈ ತಂಡಕ್ಕೆ ತರಬೇತಿ ನೀಡಿದ್ದರು. ಇವರ ತರಬೇತಿಯಡಿ ವಿಜಯಾ ಅವರು ಯೂತ್‌, ಸೀನಿಯರ್‌, ವಿ.ವಿ. ಮಟ್ಟದಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದರು. ಅನಂತರ ತರಬೇತಿ ಕೆಲಸ ಬಿಟ್ಟುಬಂದ ನಾರಾಯಣ್‌ ಅವರು ವಿಜಯಾ ರಮಣ ಕುಟುಂಬದ ಜತೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದರು. ನಾರಾಯಣ್‌ ವಾಲಿಬಾಲ್‌ ಫೆಡರೇಶನ್‌ ಆಫ್‌ ಇಂಡಿಯಾ ಮತ್ತು ಬೀಚ್‌ ವಾಲಿಬಾಲ್‌ ತಾಂತ್ರಿಕ ಸಂಸ್ಥೆಯ ಸದಸ್ಯರಾಗಿದ್ದರು. ಪ್ರತಿ ವರ್ಷ ಪುತ್ತೂರಿನಲ್ಲಿ ಮಿತ್ರವೃಂದ ವಾಲಿಬಾಲ್‌ ಅಕಾಡೆಮಿ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ವಾಲಿಬಾಲ್‌ ತರಬೇತಿ ನೀಡುತ್ತಿದ್ದಾರೆ.

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

Agarwal

Vijay Hazare Trophy; ಮಯಾಂಕ್‌ ಅಗರ್ವಾಲ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

INDvAUS: ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

saavu

ಮಂಜನಾಡಿ ಗ್ಯಾಸ್‌ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

1-tallur

ತಲ್ಲೂರು: ಪಿಕಪ್‌- ಕಾರು ಢಿಕ್ಕಿ

1-gooli

Gangolli:ಅರ್ಧ ಗಂಟೆಗೂ ಹೆಚ್ಚು ಭೀತಿ ಮೂಡಿಸಿದ ಗೂಳಿ ಕಾಳಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.