ಸಿಂಗಾಪುರ್ ಸ್ಮ್ಯಾಶ್ ಟೇಬಲ್ ಟೆನಿಸ್: ಭಾರತದ ಆಟ ಅಂತ್ಯ
Team Udayavani, Mar 16, 2023, 6:45 AM IST
ಸಿಂಗಾಪುರ: “ಸಿಂಗಾಪುರ್ ಸ್ಮ್ಯಾಶ್ ಟೇಬಲ್ ಟೆನಿಸ್’ ಪಂದ್ಯಾವಳಿಯಲ್ಲಿ ಭಾರತದ ಆಟ ಕೊನೆಗೊಂಡಿದೆ. ಮಣಿಕಾ ಬಾತ್ರಾ ವನಿತಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಸೋಲುವುದರೊಂದಿಗೆ ಭಾರತ ಕೂಟದಿಂದ ನಿರ್ಗಮಿಸಿತು.
ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಮಣಿಕಾ ಬಾತ್ರಾ-ಜಿ. ಸಥಿಯನ್ ಜಪಾನ್‌ನ ಹಿನಾ ಹಯಾಟಾ-ಟೊಮೊಕಾಝ ಹರಿಮೊಟೊ ವಿರುದ್ಧ 2-3 ಅಂತರದ ಸೋಲನುಭವಿಸಿದರು (9-11, 9-11, 11-8, 11-5, 7-11). ಜಪಾನ್ ಜೋಡಿ ಹಾಲಿ ವಿಶ್ವ ಚಾಂಪಿಯನ್‌ಶಿಪ್ ರನ್ನರ್ ಅಪ್ ಆಗಿದೆ.
ಭಾರತೀಯ ಜೋಡಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. 16ರ ಸುತ್ತಿನಲ್ಲಿ ಸಿಂಗಾಪುರ್ ಜೋಡಿಯನ್ನು ಮಣಿಸಿತ್ತು.
ವನಿತಾ ಡಬಲ್ಸ್‌ನಲ್ಲಿ ಮಣಿಕಾ ಬಾತ್ರಾ-ಅರ್ಚನಾ ಕಾಮತ್ ಅವರನ್ನು ಚೀನದ ಮೆಂಗ್ ಚೆನ್-ಯಿದಿ ವಾಂಗ್ 3-2ರಿಂದ ಮಣಿಸಿತು.
ಮಣಿಕಾ ಬಾತ್ರಾ, ಜಿ. ಸಥಿಯನ್ ಮತ್ತು ಅಚಂತ ಶರತ್ ಕಮಲ್ ಸಿಂಗಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.