ಏಕರೀತಿಯ ಚೆಂಡು: ಎಂಸಿಸಿ ವಿರುದ್ಧ ಮುಗಿಬಿದ್ದ ಗಾವಸ್ಕರ್
Team Udayavani, Mar 15, 2019, 12:45 AM IST
ಮುಂಬಯಿ: ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ ಏಕರೀತಿಯ ಚೆಂಡು ಬಳಕೆಗೆ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಶಿಫಾರಸು ಮಾಡಿತ್ತು. ಆದರೆ ಎಲ್ಲ ದೇಶಗಳಲ್ಲೂ ಒಂದೇ ರೀತಿಯ ಚೆಂಡು ಬಳಸಬೇಕೆಂಬ ಶಿಫಾರಸಿಗೆ ಕ್ರಿಕೆಟ್ ದಂತಕತೆ ಸುನೀಲ್ ಗಾವಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಶಿಫಾರಸು ಮಾಡಿದ ಎಂಸಿಸಿ ವಿರುದ್ಧವೇ ಅವರು ಮುಗಿಬಿದ್ದಿದ್ದಾರೆ.
ಎಂಸಿಸಿ, ಕೋಲ್ಕತಾದಲ್ಲಿರುವ ನ್ಯಾಷನಲ್ ಕ್ರಿಕೆಟ್ ಕ್ಲಬ್, ಚೆನ್ನೈನಲ್ಲಿರುವ ಮದ್ರಾಸ್ ಕ್ರಿಕೆಟ್ ಕ್ಲಬ್‌ನಂತೆ ಮಾತ್ರ. ಅದಕ್ಕಿಂತ ಹೆಚ್ಚಿನ ಯಾವುದೇ ಗೌರವ ಅದಕ್ಕಿಲ್ಲ. ಆದರೆ ಎಂಸಿಸಿ ಮಾತ್ರ ತಾನು ಐಸಿಸಿಯ ಕ್ರಿಕೆಟ್ ಸಮಿತಿಗಿಂತ ಜಾಸ್ತಿ ಎನ್ನುವಂತೆ ವರ್ತಿಸುತ್ತಿದೆ ಎಂದು ಕಟಕಿಯಾಡಿದ್ದಾರೆ. ಚೆಂಡನ್ನು ಏಕರೀತಿ ಮಾಡುವುದು, ಬ್ಯಾಟನ್ನು ಏಕರೀತಿ ಮಾಡುವುದು, ಅಂಕಣಗಳನ್ನು ಏಕರೀತಿ ಮಾಡುವುದು….ಹೀಗೆ ಮಾಡುತ್ತಲೇ ಹೋದರೆ ವಿದೇಶಕ್ಕೆ ಹೋಗಿ ಕ್ರಿಕೆಟ್ ಆಡುವುದರ ಅಗತ್ಯವೇನಿದೆ ಎಂದು ಗಾವಸ್ಕರ್ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.