ಫುಟ್‌ಬಾಲ್ ತಂಡದಲ್ಲಿ ಆರು ಹೊಸ ಮುಖ
ಜೂ. 5ರಿಂದ ಥಾಯ್ಲೆಂಡ್‌ನಲ್ಲಿ ಕಿಂಗ್ಸ್ ಕಪ್
Team Udayavani, Jun 4, 2019, 6:00 AM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಥಾಯ್ಲೆಂಡ್‌ನಲ್ಲಿ ಜೂನ್ 5ರಿಂದ ನಡೆಯಲಿರುವ ಕಿಂಗ್ಸ್ ಕಪ್ ಫುಟ್‌ಬಾಲ್ ಪಂದ್ಯಾವಳಿಗಾಗಿ 23 ಸದಸ್ಯರ ಭಾರತೀಯ ಫುಟ್‌ಬಾಲ್ ತಂಡದ ಅಂತಿಮ ಪಟ್ಟಿಯನ್ನು ಮುಖ್ಯ ಕೋಚ್ ಐಗರ್ ಸ್ಟಿಮಾಕ್ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಆರು ಮಂದಿ ಹೊಸಬರಿದ್ದಾರೆ.
ರಾಹುಲ್ ಭೇಕೆ, ಬ್ರೆಂಡನ್ ಫೆರ್ನಾಂಡಿಸ್, ರೈನಿಯರ್ ಫೆರ್ನಾಂ ಡಿಸ್, ಮೈಕಲ್ ಸೂಸಾಯಿರಾಜ್, ಅಬ್ದುಲ್ ಸಾಹಲ್ ಮತ್ತು ಭಾರತೀಯ ಅಂಡರ್-17 ವಿಶ್ವಕಪ್ ತಂಡದ ನಾಯಕ ಅಮರ್‌ಜಿತ್ ಸಿಂಗ್ ತಂಡದಲ್ಲಿರುವ ಆರು ಮಂದಿ ಹೊಸ ಮುಖವಾಗಿದ್ದಾರೆ.
ಅದಿಲ್ ಖಾನ್ 2012ರ ಬಳಿಕ ಇದೇ ಮೊದಲ ಸಲ ತಂಡಕ್ಕೆ ಮರಳಿದ್ದರೆ, ಗೋಲ್‌ಕೀಪರ್ ಕಮಲ್‌ಜಿತ್ ಸಿಂಗ್ ಇನ್ನಷ್ಟೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆಗೈಯಬೇಕಾಗಿದೆ.”ಹೊಸದಿಲ್ಲಿಯಲ್ಲಿ ನಡೆದ ಶಿಬಿರದಲ್ಲಿ ನಾವು ಕಠಿನ ಅಭ್ಯಾಸ ನಡೆಸಿದ್ದೇವೆ. ಪ್ರತಿಯೊಬ್ಬರೂ ಉತ್ಸಾಹದಿಂದ ಪಾಲ್ಗೊಂಡು ಮುಂದಿನ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಇಲ್ಲಿ ಸಿಕ್ಕಿದ ಮಾರ್ಗದರ್ಶನ, ಸಲಹೆಯನ್ನು ಪಾಲಿಸಿಕೊಂಡು ಶ್ರೇಷ್ಠ ನಿರ್ವಹಣೆ ನೀಡಲು ಪ್ರಯತ್ನಿಸಲಿದ್ದೇವೆ’ ಎಂದು ಸ್ಟಿಮಾಕ್ ಹೇಳಿದ್ದಾರೆ.
ಯಶಸ್ಸಿನ ಹಸಿವು
“ಹೊಸ ರೀತಿ, ನಿಯಮದಲ್ಲಿ ಆಡಲು ಕೋಚ್ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ನಾವೀಗ ಚೆಂಡಿನ ಜತೆ ಹೆಚ್ಚಿನ ಸಮಯ ಆಡುತ್ತಿದ್ದೇವೆ. ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಒಲವು. ಇಂತಹ ಆಟದ ವೇಳೆ ಈ ಹಿಂದೆ ಭಾರತ ಯಶಸ್ಸು ಸಾಧಿಸಿದ್ದರಿಂದ ಆಟಗಾರರು ಪ್ರೇರಣೆಗೊಂಡಿದ್ದಾರೆ. ಇನ್ನಷ್ಟು ತೀವ್ರವಾಗಿ ಹೋರಾಡಬಹುದೆಂದು ನಂಬಿದ್ದಾರೆ ಮತ್ತು ಯಶಸ್ಸಿನ ಹಸಿವು ಪ್ರತಿಯೊಬ್ಬರಲ್ಲಿದೆ’ ಎಂದು ಸೆಂಟ್ರಲ್ ಡಿಫೆಂಡರ್ ಸಂದೇಶ್ ಝಿಂಗನ್ ಹೇಳಿದ್ದಾರೆ.
“ಸ್ಟಿಮಾಕ್ ಅವರೊಬ್ಬ ಅತ್ಯಂತ ಯಶಸ್ವಿ ವೃತ್ತಿಪರ ಆಟಗಾರ, ಬಹಳಷ್ಟು ಅನುಭವಿ ಕೂಡ. ಯಾವ ರೀತಿ ಆಟ ಆಡಬೇಕೆಂದು ಅವರಿಗೆ ತಿಳಿದಿದೆ ಮತ್ತು ಅದರ ಕಾರಣವೂ ಅವರಿಗೆ ತಿಳಿದಿದೆ. ಇದು ತರಬೇತುದಾರರಿಗೆ ಅಗತ್ಯವಾಗಿ ಬೇಕಾಗಿದೆ’ ಎಂಬುದು ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಹೇಳಿಕೆ.
ಜೂ. 5ಕ್ಕೆ ಮೊದಲ ಪಂದ್ಯ
ಭಾರತೀಯ ತಂಡವು ಈಗಾಗಲೇ ಥಾಯ್ಲೆಂಡ್ ತಲುಪಿದ್ದು, ಅಭ್ಯಾಸ ಆರಂಭಿಸಿದೆ. “ಕಿಂಗ್ಸ್ ಕಪ್’ ಕೂಟದ ಮೊದಲ ಪಂದ್ಯದಲ್ಲಿ ಭಾರತ ಜೂ. 5ರಂದು ಕ್ಯುರಾಕೊ ತಂಡವನ್ನು ಎದುರಿಸಲಿದೆ. ಭಾರತದ ಎರಡನೇ ಪಂದ್ಯ ಜೂ. 8ರಂದು ನಡೆಯಲಿದೆ.
ಭಾರತೀಯ ತಂಡ
ಗೋಲ್‌ಕೀಪರ್: ಗುರ್‌ಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಕಮಲ್‌ಜಿತ್ ಸಿಂಗ್.
ಡಿಫೆಂಡರ್: ಪ್ರೀತಮ್ ಕೋತಲ್, ರಾಹುಲ್ ಭೇಕೆ, ಸಂದೇಶ್ ಝಿಂಗನ್, ಅದಿಲ್ ಖಾನ್, ಸುಭಾಶಿಷ್ ಬೋಸ್.
ಮಿಡ್‌ಫಿàಲ್ಡರ್: ಉದಾಂತ ಸಿಂಗ್, ಜಾಕಿಚಂದ್ ಸಿಂಗ್, ಬ್ರೆಂಡನ್ ಫೆರ್ನಾಂಡಿಸ್, ಅನಿರುದ್ಧ್ ಥಾಪ, ರೈನಿಯರ್ ಫೆರ್ನಾಂಡಿಸ್, ಪ್ರಣಯ್ ಹಲ್ದರ್, ವಿನಿತ್ ರೈ, ಸಾಹಲ್ ಅಬ್ದುಲ್, ಅಮರ್‌ಜಿತ್ ಸಿಂಗ್, ಲಾಲಿಯನ್‌ಜ್ವಾಲಾ, ಚಂಗೆr, ಮೈಕಲ್ ಸೂಸಾಯಿರಾಜ್.
ಫಾರ್ವರ್ಡ್ಸ್: ಬಲ್ವಂತ್ ಸಿಂಗ್, ಸುನಿಲ್ ಚೇಟ್ರಿ, ಫಾರೂಖ್ ಚೌಧರಿ,
ಮನ್ವೀರ್ ಸಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.