ದ್ವಿತೀಯ ಟೆಸ್ಟ್: ಶ್ರೀಲಂಕಾಕ್ಕೆ ಇನ್ನಿಂಗ್ಸ್ ಮುನ್ನಡೆ
Team Udayavani, Jul 26, 2022, 11:52 PM IST
ಗಾಲೆ: ರಮೇಶ್ ಮೆಂಡಿಸ್ ಅವರ ಅಮೋಘ ಬೌಲಿಂಗ್ ದಾಳಿಯಿಂದಾಗಿ ಶ್ರೀಲಂಕಾ ತಂಡವು ಪಾಕಿಸ್ಥಾನ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಯಶಸ್ವಿಯಾಗಿದೆ.
ವೆುಂಡೀಸ್ ದಾಳಿಯಿಂದಾಗಿ ಪಾಕಿಸ್ಥಾನ ತಂಡವು 231 ರನ್ನಿಗೆ ಆಲೌಟಾಯಿತು. ಇದರಿಂದಾಗಿ ಶ್ರೀಲಂಕಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 147 ರನ್ನುಗಳ ಮುನ್ನಡೆ ಸಾಧಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡವು ಮೂರನೇ ದಿನದಾಟದಲ್ಲಿ ಮಂದ ಬೆಳಕಿನಿಂದಾಗಿ ಆಟ ಬೇಗನೇ ನಿಂತಾಗ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟಿಗೆ 176 ರನ್ ಗಳಿಸಿದೆ. ಇದರಿಂದ ಆತಿಥೇಯ ತಂಡ ಒಟ್ಟಾರೆ ತನ್ನ ಮುನ್ನಡೆಯನ್ನು 323 ರನ್ನಿಗೆ ಹೆಚ್ಚಿಸಿಕೊಂಡಿದೆ.
ದಿಮುತ್ ಕರುಣರತ್ನ ಮತ್ತು ದನಂಜಯ ಡಿ’ಸಿಲ್ವ ಮುರಿಯದ ಆರನೇ ವಿಕೆಟಿಗೆ 59 ರನ್ನುಗಳ ಜತೆಯಾಟ ನೀಡಿದ್ದರಿಂದ ಲಂಕಾದ ಮುನ್ನಡೆ 300ರ ಗಡಿ ದಾಟುವಂತಾಯಿತು. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಶ್ರೀಲಂಕಾ ಇನ್ನಷ್ಟು ಜಾಗ್ರತೆಯಿಂದ ಆಡಿ ಪಾಕಿಸ್ಥಾನಕ್ಕೆ ಕಠಿನ ಸವಾಲು ನೀಡಬೇಕಾದ ಅಗತ್ಯವಿದೆ.
ಇದೇ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ಥಾನ ಗೆಲುವಿಗೆ ಶ್ರೀಲಂಕಾ 342 ರನ್ನುಗಳ ಗುರಿ ನೀಡಿತ್ತು. ಅಂತಿಮ ದಿನದಾಟದಲ್ಲಿ ಪಾಕಿಸ್ಥಾನ ಭರ್ಜರಿಯಾಗಿ ಆಡಿ ನಾಲ್ಕು ವಿಕೆಟ್‌ಗಳಿಂದ ಗೆದ್ದ ಸಾಧನೆ ಮಾಡಿತ್ತು. ಇದು ಗಾಲೆಯಲ್ಲಿ ಚೇಸ್‌ನಲ್ಲಿ ಯಶಸ್ಸು ಪಡೆದ ದಾಖಲೆಯೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leh; ಐಸ್ ಹಾಕಿ ಲೀಗ್ ದ್ವಿತೀಯ ಆವೃತ್ತಿಯ ಟ್ರೋಫಿ- ಜೆರ್ಸಿ ಅನಾವರಣ
NZvsENG: 147 ವರ್ಷಗಳಲ್ಲೇ ಮೊದಲ ಬಾರಿ..; ಹೊಸ ದಾಖಲೆ ಬರೆದ ಕೇನ್ ವಿಲಿಯಮ್ಸನ್
SMAT 2024: ನೇರ ಪ್ರಸಾರದಲ್ಲೇ ಕ್ಷಮೆ ಕೇಳಿದ ಟಿವಿ ಅಂಪೈರ್! ಆಗಿದ್ದೇನು?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
MUST WATCH
ಹೊಸ ಸೇರ್ಪಡೆ
RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
ಸ್ಪೀಕರ್, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ
ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.