ಸ್ಲೋನ್ ಸ್ಟೀಫನ್ಸ್‌ಗೆ ಮೊದಲ ಮಯಾಮಿ ಕಿರೀಟ
Team Udayavani, Apr 2, 2018, 6:05 AM IST
ಮಯಾಮಿ (ಫ್ಲೋರಿಡಾ): ಫ್ಲೋರಿಡಾದವರೇ ಆದ ಸ್ಲೋನ್ ಸ್ಟೀಫನ್ಸ್ ಮೊದಲ ಬಾರಿಗೆ ಮಯಾಮಿ ಡಬ್ಲ್ಯುಟಿಎ ಸಿಂಗಲ್ಸ್ ಕಿರೀಟವೇರಿಸಿಕೊಂಡು ತವರಿನ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಅವರು ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ವಿರುದ್ಧ 7-6 (7-5), 6-1 ಅಂತರದ ಗೆಲುವು ಸಾಧಿಸಿದರು.
ಇದು ಕಳೆದ ವರ್ಷದ ಯುಎಸ್ ಓಪನ್ ಚಾಂಪಿಯನ್ ಹಾಗೂ ಫ್ರೆಂಚ್ ಓಪನ್ ಚಾಂಪಿಯನ್ ಆಟಗಾರ್ತಿಯರ ನಡುವಿನ ಪ್ರತಿಷ್ಠೆಯ ಕಣವಾಗಿತ್ತು. ಇಲ್ಲಿ ತವರಿನ ಆಟಗಾರ್ತಿಗೆ ಅದೃಷ್ಟ ಒಲಿಯಿತು. ಇದರೊಂದಿಗೆ ಎಲ್ಲ 6 ಟೆನಿಸ್ ಫೈನಲ್‌ಗಳಲ್ಲಿ ಗೆದ್ದು ಬಂದ ಹಿರಿಮೆ ಸ್ಲೋನ್ ಸ್ಟೀಫನ್ಸ್ ಅವರದಾಯಿತು.ಮೊದಲ ಸೆಟ್ ಇಬ್ಬರ ಪಾಲಿಗೂ ಅತ್ಯಂತ ಕಠಿನವಾಗಿತ್ತು, ಯಾರೂ ಗೆಲ್ಲಬಹುದಾದ ಕದನವಾಗಿತ್ತು. ಕೊನೆಗೆ ಟೈ ಬ್ರೇಕರ್‌ನಲ್ಲಿ ಸ್ಟೀಫನ್ಸ್ ಕೈ ಮೇಲಾಯಿತು. ಆದರೆ ದ್ವಿತೀಯ ಸೆಟ್‌ನಲ್ಲಿ ಒಸ್ಟಾಪೆಂಕೊ ಪ್ರತಿರೋಧ ತೋರುವಲ್ಲಿ ವಿಫಲರಾದರು. ಅವರ ಆಕ್ರಮಣಕಾರಿ ಆಟ ಮರೆಯಾಗಿತ್ತು. ಅಮೆರಿಕನ್ ಆಟಗಾರ್ತಿ ಸುಲಭದಲ್ಲಿ ಇದನ್ನು ವಶಪಡಿಸಿಕೊಂಡರು. ಒಂದು ಗಂಟೆ, 32 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು.
ಟಾಪ್-10 ಯಾದಿಯಲ್ಲಿ…
ಗೆಲುವಿನ ಹಾದಿಯಲ್ಲಿ ಗ್ರ್ಯಾನ್‌ಸ್ಲಾಮ್ ವಿಜೇತರಾದ ಗಾರ್ಬಿನ್ ಮುಗುರುಜಾ, ಆ್ಯಂಜೆಲಿಕ್ ಕೆರ್ಬರ್, ವಿಕ್ಟೋರಿಯಾ ಅಜರೆಂಕಾ ಅವರನ್ನೆಲ್ಲ ಹಿಮ್ಮೆಟ್ಟಿಸಿದ ಹಿರಿಮೆ ಸ್ಲೋನ್ ಸ್ಟೀಫನ್ಸ್ ಅವರದಾಗಿತ್ತು. ಇದರೊಂದಿಗೆ ಸ್ಟೀಫನ್ಸ್ ಮೊದಲ ಬಾರಿಗೆ ಟಾಪ್-10 ರ್‍ಯಾಂಕಿಂಗ್ ಯಾದಿಯಲ್ಲಿ ಕಾಣಿಸಿಕೊಂಡರು. ಅಧಿಕೃತ ರ್‍ಯಾಂಕಿಂಗ್ ಪಟ್ಟಿ ಸೋಮವಾರ ಬಿಡುಗಡೆಯಾಗಲಿದೆ.
“ಒಸ್ಟಾಪೆಂಕೊ ಅಮೋಘ ಶಾಟ್‌ಗಳೊಂದಿಗೆ ಮುನ್ನುಗ್ಗುತ್ತಿದ್ದರು. ಆದರೆ ಈ ಬಗ್ಗೆ ನಾನು ವಿಶೇಷವಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಮೊದಲ ಸೆಟ್ ಯಾವಾಗ ಗೆದ್ದೇನೋ ಅಲ್ಲಿಂದ ಆತ್ಮವಿಶ್ವಾಸ ಹೆಚ್ಚಿತು. ಟಾಪ್-10 ರ್‍ಯಾಂಕಿಂಗ್ ಯಾದಿಯಲ್ಲಿ ಕಾಣಿಸಿಕೊಳ್ಳಬೇಕೆಂಬುದು ನನ್ನ ಬಹು ದಿನಗಳ ಕನಸಾಗಿತ್ತು. ಇದೀಗ ನೆರವೇರಿದೆ. ಖುಷಿ ಹಾಗೂ ರೋಮಾಂಚನವಾಗುತ್ತಿದೆ’ ಎಂದು ಸ್ಲೋನ್ ಸ್ಟೀಫನ್ಸ್ ಪ್ರತಿಕ್ರಿಯಿಸಿದ್ದಾರೆ.
ಜೆಲೆನಾ ಒಸ್ಟಾಪೆಂಕೊ ಒಂದೂ ಸೆಟ್ ಕಳೆದುಕೊಳ್ಳದೆ ಫೈನಲ್ ಪ್ರವೇಶಿಸಿದ್ದರು. “ಕೆಲವೊಮ್ಮೆ ನಾನು ವಿಪರೀತ ಆಕ್ರಮಣಕಾರಿ ಮನೋಭಾವ ತೋರುವುದುಂಟು. ಕೂಟದ ಆರಂಭದಲ್ಲಿ ಇದರಿಂದ ಲಾಭವಾಗುತ್ತದೆ. ಆದರೆ ಫೈನಲ್ ಎನ್ನುವುದು ಡಿಫರೆಂಟ್ ಬಾಲ್ ಗೇಮ್. ಇಲ್ಲಿ ವಿಪರೀತ ಒತ್ತಡವಿರುತ್ತದೆ. ನಾನಿಲ್ಲಿ ಬಹಳಷ್ಟು ಹೊಡೆತಗಳನ್ನು ಕಳೆದುಕೊಂಡೆ…’ ಎಂಬುದು ಲಾತ್ವಿಯನ್ ಆಟಗಾರ್ತಿಯ ಪ್ರತಿಕ್ರಿಯೆ.
ಕೊನೆಯ ಕೀ ಬಿಸ್ಕೇನ್ ಟೂರ್ನಿ
ಇಷ್ಟು ವರ್ಷಗಳ ಕಾಲ ಫ್ಲೋರಿಡಾದ ಕೀ ಬಿಸ್ಕೇನ್‌ನ “ಕ್ರಾಂಡನ್ ಪಾರ್ಕ್’ನಲ್ಲಿ ನಡೆಯುತ್ತಿದ್ದ ಮಯಾಮಿ ಓಪನ್ ಟೆನಿಸ್ ಪಂದ್ಯಾವಳಿ ಬರುವ ವರ್ಷದಿಂದ “ಹಾರ್ಡ್ ರಾಕ್ ಸ್ಟೇಡಿಯಂ’ಗೆ ವರ್ಗಾವಣೆಗೊಳ್ಳಲಿದೆ. ಕೂಟದ ನಿರ್ದೇಶಕ ಜೇಮ್ಸ್ ಬ್ಲೇಕ್ ಇದನ್ನು ಅಧಿಕೃತವಾಗಿ ಘೋಷಿಸಿದರು.ಇಲ್ಲಿ ವನಿತಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಕೊನೆಯ ಆಟಗಾರ್ತಿ ಎಂಬುದು ತನ್ನ ಪಾಲಿನ ಹಿರಿಮೆ ಎಂಬುದಾಗಿ ಸ್ಲೋನ್ ಸ್ಟೀಫನ್ಸ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.