ಸ್ಮಾರ್ಟ್ ಚೆಂಡಿನ ಕಥೆ: ಅಲ್ ರಿಹ್ಲಾ ಎಂಬ ಒಂದು ಜರ್ನಿ
Team Udayavani, Nov 21, 2022, 6:50 AM IST
ರವಿವಾರ ಆರಂಭವಾಗಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಬಳಕೆ ಮಾಡಲಾಗುವ ಚೆಂಡಿನ ಕಥೆಯೇ ರೋಚಕ. ಪ್ರತೀ ಬಾರಿಯೂ ಈ ಚೆಂಡು ಒಂದೊಂದು ರೀತಿಯ ವೈಶಿಷ್ಟ್ಯ ಪಡೆದಿರುತ್ತದೆ. ಈ ಬಾರಿ ಈ ಬಾಲ್ ಸಂಪೂರ್ಣ ಸ್ಮಾರ್ಟ್. ಆಡಿಡಾಸ್ ಕಂಪೆನಿ ಸತತ 14ನೇ ವರ್ಷ ಈ ಚೆಂಡನ್ನು ರೂಪಿಸಿಕೊಟ್ಟಿದೆ. ಹಾಗಾದರೆ ಇದರ ವಿಶೇಷಗಳೇನು? ಇದು ಹೇಗೆ ಸ್ಮಾರ್ಟ್? ಇಲ್ಲಿದೆ ಮಾಹಿತಿ.
ಅಲ್ ರಿಹ್ಲಾ
ಇದು ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಬಳಕೆ ಮಾಡಲಾಗುತ್ತಿರುವ ಚೆಂಡಿನ ಹೆಸರು. ಅರಬ್ ಮೂಲದ ಪದ. ಇದರ ಅರ್ಥ “ದಿ ಜರ್ನಿ’ ಅಥವಾ “ಪರ್ಯಟನೆ’. ಇದರಲ್ಲಿನ ತ್ರಿಕೋನಾಕಾರದ ಪ್ಯಾನಲ್‌ಗಳು ಅರಬ್ ದೇಶದಲ್ಲಿ ಬಳಕೆ ಮಾಡುವ ಸಾಂಪ್ರದಾಯಿಕ ಹಡಗನ್ನು ನಡೆಸುವುದನ್ನು ಪ್ರತಿನಿಧಿಸುತ್ತವೆ.
ಆವೇಗ
ಈ ಅಲ್ ರಿಹ್ಲಾ ಚೆಂಡನ್ನು ಎಷ್ಟು ವೇಗದಲ್ಲಿ ಬೇಕಾದರೂ ಹೊಡೆಯುವಂತೆ ರೂಪಿಸಲಾಗಿದೆ. ಅಂದರೆ ಇದು ಬೆಳಕಿಗಿಂತಲೂ ವೇಗವಾಗಿ ಮುನ್ನುಗ್ಗುವ ಸಾಮರ್ಥ್ಯ ಹೊಂದಿದೆ. 92 ವರ್ಷಗಳ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಇದೇ ಮೊದಲ ಬಾರಿಗೆ ಇಂಥ ಅತ್ಯಂತ ವೇಗವರ್ಧಿತ ಚೆಂಡನ್ನು ಬಳಕೆ ಮಾಡಲಾಗುತ್ತಿದೆ ಎಂಬುದು ವಿಶೇಷ.
ಸಿಟಿಆರ್-ಕೋರ್
ಬಾಲಿನೊಳಗೆ ಇರುವ ಒಂದು ನಾವೀನ್ಯ ತಿರುಳು. ಇದು ಸ್ಥಿರತೆ ಮತ್ತು ನಿಖರತೆಗೆ ಹೆಚ್ಚಿನ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಆಟಗಾರರ ವೇಗಕ್ಕೆ ತಕ್ಕಂತೆ ಸ್ಪಂದಿಸುತ್ತದೆ.
ಪರ್ಲ್ ಸ್ಕಿನ್
ಬೋಲ್ಡ್ ಮತ್ತು ವೈವಿಧ್ಯಮಯ ಬಣ್ಣಗಳೊಂದಿಗೆ ಗ್ರಾಫಿಕ್ಸ್ ಅನ್ನು ಬಾಲಿನ ಮೇಲೆ ಬಳಕೆ ಮಾಡಲಾಗಿದೆ. ಈ ಬಣ್ಣಗಳು ಕತಾರ್‌ನ ಸಂಸ್ಕೃತಿ, ವಾಸ್ತುಶಿಲ್ಪ ಮತ್ತು ಬಾವುಟವನ್ನು ಪ್ರತಿನಿಧಿಸುತ್ತವೆ.
ಸೆಮಿ ಆಟೋಮೇಟೆಡ್ ಆಫ್ ಸೈಡ್ ಟೆಕ್ನಾಲಜಿ
ಫಿಫಾವು 2018ರ ವಿಶ್ವಕಪ್‌ನಲ್ಲೇ ತಾಂತ್ರಿಕತೆಯನ್ನು ಬಳಕೆ ಮಾಡಿತ್ತು. ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವೀಡಿಯೋ ಅಸಿಸ್ಟೆಂಟ್ ರೆಫರಿಂಗ್(ವಿಎಆರ್) ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಬಾಲ್ ಮತ್ತು ಎಲ್ಲ 22 ಆಟಗಾರರ ಮೇಲೆ ನಿಗಾ ಇಡಲಿದೆ.
ಕಿಕ್ ಪಾಯಿಂಟ್ ಪ್ರೀಸಿಶನ್
ಯಾವಾಗ ಮತ್ತು ಎಲ್ಲಿ ಬಾಲ್ ಅನ್ನು ಒದೆಯಲಾಯಿತು ಎಂಬುದನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ.
12 ಕೆಮರಾಗಳು
ಕ್ರೀಡಾಂಗಣಗಳ ಮೇಲ್ಛಾವಣಿಯಲ್ಲಿ 12 ಕೆಮರಾಗಳನ್ನು ಅಳವಡಿಸಲಾಗಿದ್ದು, ಬಾಲ್‌ನ ಚಲನೆ ಮತ್ತು ಎಲ್ಲ 22 ಆಟಗಾರರ ಮೇಲೆ ನಿಗಾ ವಹಿಸಲಾಗಿರುತ್ತದೆ.
ಟ್ರ್ಯಾಕ್
ಬಾಲ್ ಯಾರ ಬಳಿ ಇದೆ? ಯಾರಿಗೆ ಹೋಯಿತು? ಯಾರು ಕಿಕ್ ಮಾಡಿದರು ಎಂಬುದರ ಟ್ರ್ಯಾಕ್ ಮಾಡಲಾಗುತ್ತದೆ. ವೀಡಿಯೋ ಆಪರೇಶನ್ ರೂಂಗೆ ಅಲರ್ಟ್ ಅನ್ನು ರವಾನೆ ಮಾಡಲಾಗುತ್ತದೆ. ನಿರ್ಧಾರವನ್ನು ರೆಫರಿಗೆ ಕಳುಹಿಸಲಾಗುತ್ತದೆ.
ಬಾಲ್ ತಂತ್ರಜ್ಞಾನದ ಸಂಪರ್ಕ
ಬಾಲಿನೊಳಗಿನ ಸಸ್ಪೆನ್ಶನ್ ವ್ಯವಸ್ಥೆಯು ಜಡತ್ವದ ಅಳತೆಯನ್ನು ಗುರುತಿಸಲಿದೆ. ಇದಕ್ಕಾಗಿ ಇಲ್ಲಿ ಯೂನಿಟ್ ಮೋಶನ್ ಸೆನ್ಸರ್(ಐಎಂಯು) ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಸ್ಪೀಡ್‌ಶೆಲ್
ಬಾಲಿನ ಪಾಲ್ಯುರ್ಥೇನ್(ಪಿಯು) ಸ್ಕಿನ್‌ನಲ್ಲಿ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಬರಹಗಳನ್ನು ಕಾಣಬಹುದಾಗಿದೆ. ಇದರಲ್ಲಿ ಹೊಸದಾದ 20 ಪೀಸ್ ಪ್ಯಾನಲ್ ಶೇಪ್ ಇದೆ. ಇದು ಏರೋಡೈನಾಮಿಕ್ಸ್ ಅನ್ನು ಹೆಚ್ಚಿಸಿ, ನಿಖರತೆಯನ್ನು ಸುಧಾರಿಸುತ್ತದೆ. ಆಟಗಾರರು ಯಾವುದೇ ಆ್ಯಂಗಲ್‌ನಿಂದ ಬೇಕಾದರೂ ಈ ಬಾಲನ್ನು ಚಲನೆ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.