SMAT 2024: ನೇರ ಪ್ರಸಾರದಲ್ಲೇ ಕ್ಷಮೆ ಕೇಳಿದ ಟಿವಿ ಅಂಪೈರ್! ಆಗಿದ್ದೇನು?
Team Udayavani, Dec 16, 2024, 11:10 AM IST
ಬೆಂಗಳೂರು: ದೇಶಿಯ ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ (Syed Mushtaq Ali Trophy) ಕೂಟದ ಫೈನಲ್ ಪಂದ್ಯದಲ್ಲಿ ನಡೆದ ಪ್ರಮಾದವೊಂದರ ಬಗ್ಗೆ ಮೂರನೇ ಅಂಪೈರ್ ಕ್ಷಮೆಯಾಚಿಸಿದ ಘಟನೆ ರವಿವಾರ ನಡೆದಿದೆ. ಮುಂಬೈ ಮತ್ತು ಮಧ್ಯಪ್ರದೇಶ ನಡುವಿನ ಫೈನಲ್ ಪಂದ್ಯದಲ್ಲಿ ಈ ಪ್ರಸಂಗ ನಡೆದಿದೆ.
ಶಾರ್ದೂಲ್ ಠಾಕೂರ್ ಅವರ ಎಸೆತವನ್ನು ಮಧ್ಯಪ್ರದೇಶ ನಾಯಕ ರಜತ್ ಪಾಟಿದಾರ್ (Rajat Patidar) ಆಫ್ ಸ್ಟಂಪ್ ನ ಹೊರಗೆ ಆಡಲು ಹೋದರೂ ವೈಡ್ ನೀಡಲಾಯಿತು. ಆದರೆ, ಬ್ಯಾಟರ್ ಎಸೆತದ ಕಡೆಗೆ ಚಲಿಸಿದ್ದಾರೆ ಎಂದು ಟಿವಿ ಅಂಪೈರ್ ವೈಡ್ ನಿರ್ಧಾರವನ್ನು ರದ್ದುಗೊಳಿಸಿದರು.
ಇದರಿಂದ ಕೋಪಗೊಂಡ ರಜತ್ ಪಾಟಿದಾರ್ ಮೈದಾನದಿಂದ ಹೊರ ಹೋಗಲಿಲ್ಲ. ಚೆಂಡು ಪಾಪಿಂಗ್ ಕ್ರೀಸ್‌ನಲ್ಲಿ ಪಿಚ್ ಆಗಿದ್ದರಿಂದ ಮತ್ತೆ ರಿವೀವ್ ಮಾಡುವಂತೆ ಕೇಳಿಕೊಂಡರು. ಈ ನಿರ್ಧಾರವನ್ನು ಟಿವಿ ಅಂಪೈರ್ ಅಂತಿಮವಾಗಿ ರದ್ದುಗೊಳಿಸಿ ವೈಡ್ ನೀಡಿದರು.
“ಕ್ಷಮಿಸಿ, ಚೆಂಡು ಪಾಪಿಂಗ್ ಕ್ರೀಸ್‌ನ ಹೊರಗೆ ಪಿಚ್ ಆಗಿತ್ತು. ನಾನು ಅದನ್ನು ನೋಡಲಿಲ್ಲ” ಎಂದು ಟಿವಿ ಅಂಪೈರ್ ಕೆ.ಎನ್. ಅನಂತಪದ್ಮನಾಭನ್ ಹೇಳಿದ್ದು ನೇರ ಪ್ರಸಾರದಲ್ಲಿ ಕೇಳಿಸಿದೆ.
– On field umpire signals wide.
– Captain takes the review.
– 3rd umpire says it’s not a wide because Patidar moved.
– Decision overturned.
– Patidar talks with on-field umpire and again it goes upstairs.
– 3rd umpire says ‘I missed that, sorry it’s a wide’.CRAZY SCENES….!!! pic.twitter.com/lcaq81iBiA
— Mufaddal Vohra (@mufaddal_vohra) December 15, 2024
ಪಂದ್ಯದ ವಿಚಾರಕ್ಕೆ ಬರುವುದಾದರೆ ಮುಂಬೈ ತಂಡವು ಮಧ್ಯಪ್ರದೇಶವನ್ನು ಸೋಲಿಸಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ ತಂಡವು 174 ರನ್ ಗಳಿಸಿದರೆ, ಮುಂಬೈ ತಂಡವು 17.5 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಎರಡನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿತು. ಮಧ್ಯಪ್ರದೇಶ ಪರ ನಾಯಕ ರಜತ್ ಪಾಟಿದಾರ್ ಅಜೇಯ 81 ರನ್ ಮಾಡಿದರೆ, ಮುಂಬೈ ಪರ ಸೂರ್ಯಕುಮಾರ್ ಯಾದವ್ 48 ರನ್, ಸೂರ್ಯಾಂಶ್ ಶೆಡ್ಗೆ 15 ಎಸೆತಗಳಲ್ಲಿ ಅಜೇಯ 36 ರನ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆ: ಹಾಜರಿರುವರೇ ಭಾರತದ ನಾಯಕ?
Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್ ಫೈನಲ್‌ಗೆ
3rd ODI: ಐರ್ಲೆಂಡ್ ವಿರುದ್ಧ 3-0 ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ
ಆಸ್ಟ್ರೇಲಿಯನ್ ಓಪನ್-2025: ಫೆಡರರ್ ದಾಖಲೆ ಮುರಿದ ಜೊಕೋ
Vijay Hazare Trophy: ಚಾಂಪಿಯನ್ ಹರಿಯಾಣ ಪರಾಭವ… ಫೈನಲ್ ಪ್ರವೇಶಿಸಿದ ಕರ್ನಾಟಕ
MUST WATCH
ಹೊಸ ಸೇರ್ಪಡೆ
Indian Navy: ಭಾರತೀಯ ನೌಕಾಪಡೆಗೆ ದೇಶಿ ನಿರ್ಮಿತ ತ್ರಿವಳಿ ಬಲ
Saif Ali Khan: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು
Congress: ಪಕ್ಷಕ್ಕೆ ಪೂರ್ಣ ಪ್ರಮಾಣ ಅಧ್ಯಕ್ಷರು ಬೇಕು: ಸಚಿವ ಸತೀಶ್ ಜಾರಕಿಹೊಳಿ
Proposal: ಮಹಾನಗರ ಪಾಲಿಕೆ ಆಗಿ ಉಡುಪಿ ನಗರಸಭೆ: ಪ್ರಸ್ತಾವನೆಗೆ ಸೂಚನೆ
BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್ ಜಾರಕಿಹೊಳಿ; ಬಿವೈವಿ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.