SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Team Udayavani, Nov 16, 2024, 10:24 AM IST
ಬೆಂಗಳೂರು: ಮುಂದಿನ ವಾರದಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy) ಕೂಟಕ್ಕೆ ಕರ್ನಾಟಕ ತಂಡ ಪ್ರಕಟವಾಗಿದೆ. ಮಯಾಂಕ್ ಅಗರ್ವಾಲ್ (Mayank Agarwal) ನಾಯಕತ್ವದಲ್ಲಿ 15 ಜನರ ತಂಡವನ್ನು ಪ್ರಕಟಿಸಲಾಗಿದೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕೂಟವು ನವೆಂಬರ್ 23ರಿಂದ ಡಿಸೆಂಬರ್ 5ರವರೆಗೆ ನಡೆಯಲಿದೆ. ಕೂಟವು ಇಂದೋರ್ ನಲ್ಲಿ ನಡೆಯಲಿದೆ.
ಅನುಭವಿ ಆಟಗಾರ ಮನೀಶ್ ಪಾಂಡೆ ಅವರು ಉಪ ನಾಯಕನಾಗಿದ್ದು, ವಿಕೆಟ್ ಕೀಪರ್ ಗಳಾಗಿ ಶ್ರೀಜಿತ್ ಕೆಎಲ್ ಮತ್ತು ಚೇತನ್ ಎಲ್ ಆರ್ ಸ್ಥಾನ ಪಡೆದಿದ್ದಾರೆ.
ಕೆಎಲ್ ರಾಹುಲ್ ಮತ್ತು ಪ್ರಸಿಧ್ ಕೃಷ್ಣ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಕಾರಣ ಕರ್ನಾಟಕ ತಂಡದಲ್ಲಿಲ್ಲ. ಯೆರೆಗೌಡ ತಂಡದ ಕೋಚ್ ಆಗಿದ್ದಾರೆ.
ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್ (ನಾ), ಮನೀಶ್ ಪಾಂಡೆ (ಉ.ನಾ), ದೇವದತ್ತ ಪಡಿಕ್ಕಲ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಸ್ಮರಣ್ ಆರ್, ಶ್ರೀಜಿತ್ ಕೆಎಲ್, ವೈಶಾಖ್ ವಿಜಯ್ ಕುಮಾರ್, ಮೆಖೈಲ್ ಎಚ್ ನರೋನ್ಹಾ, ಕೌಶಿಕ್ ವಿ, ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ್, ಚೇತನ್ ಎಲ್ಾರ್, ಶುಭಾಂಗ್ ಹೆಗ್ಡೆ ಮತ್ತು ಮನ್ವಂತ್ ಕುಮಾರ್ ಎಲ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.