ಸ್ಮಿತ್, ವಾರ್ನರ್ಗೆ ಕೌಂಟಿ ಕ್ರಿಕೆಟ್ ಕರೆ!
Team Udayavani, Apr 19, 2018, 1:35 PM IST
ಲಂಡನ್: ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್, ಮಾಜಿ ಉಪನಾಯಕ ಡೇವಿಡ್ ವಾರ್ನರ್ಗೆ ಕಡೆಗೂ ಆಶಾಕಿರಣವೊಂದು ಕಾಣಿಸಿಕೊಂಡಿದೆ. ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ತಂಡ ಸರ್ರೆ ಈ ಇಬ್ಬರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದೆ. ಆದರೆ ಇದಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಒಪ್ಪಬೇಕಾಗುತ್ತದೆ.
ದಕ್ಷಿಣ ಆμÅಕಾ ಟೆಸ್ಟ್ ಸರಣಿ ವೇಳೆ ನಡೆದ ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ
ಕ್ಯಾಮರೂನ್ ಬ್ಯಾನ್ಕ್ರಾಫ್ಟ್, ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಭಾಗಿ ಯಾಗಿದ್ದರು. ಇದು ಸಾಬೀತಾದ ಪರಿಣಾಮ ಈ ಮೂವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳ ನಿಷೇಧಿಸಿದೆ. ಸದ್ಯದ ನಿಯಮಗಳ ಪ್ರಕಾರ ಇವರು ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವಂತಿಲ್ಲ. ಅಲ್ಲಿನ ದೇಶೀಯ ಕ್ರಿಕೆಟ್ನಲ್ಲೂ ಪಾಲ್ಗೊಳ್ಳುವಂತಿಲ್ಲ. ಕ್ಲಬ್ ಹಂತದ ಪಂದ್ಯಗಳಲ್ಲಿ ಮಾತ್ರ ಆಡಬಹುದು.
ಈ ಕ್ರಿಕೆಟಿಗರು ಇಂಗ್ಲೆಂಡ್ನ ಕೌಂಟಿಯಲ್ಲಿ ಆಡಬಹುದೋ, ಇಲ್ಲವೋ? ನಿಯಮ ಏನು ಹೇಳುತ್ತದೆ? ಎನ್ನುವುದು ಇನ್ನೂ ಖಚಿತ ವಾಗಬೇಕಿದೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಾಜಿ ಬ್ಯಾಟಿಂಗ್ ಕೋಚ್ ಡಿ ವಿನುಟೊ ಸ್ಮಿತ್,
ವಾರ್ನರ್ ಆಯ್ಕೆಗೆ ಮುಂದಾಗಿದ್ದಾರೆ. ಇಬ್ಬರೂ ಕ್ರಿಕೆಟಿಗ ರೊಂದಿಗೆ ವಿನುಟೊಗೆ ಆತ್ಮೀಯ ಸಂಬಂಧವಿರುವುದು ಇದಕ್ಕೆ ಕಾರಣಗಳಲ್ಲೊಂದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.