ಐಸಿಸಿ ಟೆಸ್ಟ್ ರ್‍ಯಾಂಕಿಂಗ್ ಮೂರನೇ ಸ್ಥಾನಕ್ಕೆ ಏರಿದ ಸ್ಮಿತ್
Team Udayavani, Aug 7, 2019, 6:28 AM IST
ದುಬಾೖ: ಆತಿಥೇಯ ಇಂಗ್ಲೆಂಡ್ ತಂಡದೆದುರಿನ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಅವರು ಮಂಗಳವಾರ ಪ್ರಕಟಗೊಂಡ ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
ಚೆಂಡಿನ ರೂಪ ಕೆಡಿಸಿದ ಕಾರಣಕ್ಕಾಗಿ ಒಂದು ವರ್ಷ ನಿಷೇಧಕ್ಕೆ ಒಳಗಾದ ಬಳಿಕ ಸ್ಮಿತ್ ಮೊದಲ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಅವರ ಸತತ ಶತಕ ಸಾಧನೆಯಿಂದ ಆಸ್ಟ್ರೇಲಿಯ ಭರ್ಜರಿ ಗೆಲುವು ದಾಖಲಿಸುವಂತಾಯಿತು.
ಬ್ಯಾಟಿಂಗಿಗೆ ಕಠಿನವಾದ ಪಿಚ್‌ನಲ್ಲಿ ಅಮೋಘವಾಗಿ ಆಡಿದ್ದ ಸ್ಮಿತ್ 144 ಮತ್ತು 142 ರನ್ ಬಾರಿಸಿ ಗಮನ ಸೆಳೆದಿದ್ದರು. ಇದರಿಂದ ಅವರು ನೂತನ ರ್‍ಯಾಂಕಿಂಗ್‌ನಲ್ಲಿ ಭಾರತದ ಚೇತೇಶ್ವರ ಪೂಜಾರ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆದರು.
ಆ್ಯಶಸ್ ಸರಣಿ ಆರಂಭಕ್ಕೆ ಮೊದಲು ಸ್ಮಿತ್ 857 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರು. ಇದೀಗ ಅವರ ಅಂಕ ಗಳಿಗೆ 900 ಪ್ಲಸ್‌ಗೆ ಏರಿದೆ. 922 ಅಂಕ ಹೊಂದಿರುವ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿ ಮುಂದುವರಿದರೆ ಕೇನ್ ವಿಲಯಮ್ಸನ್ (913) ದ್ವಿತೀಯ ಸ್ಥಾನದಲ್ಲಿದ್ದಾರೆ.
ಆ್ಯಶಸ್ ಸರಣಿಯ ಮೊದಲ ಪಂದ್ಯದ ವೇಳೆ ಆಸ್ಟ್ರೇಲಿಯ ವಿರುದ್ಧ 100 ವಿಕೆಟ್ ಪೂರ್ತಿಗೊಳಿಸಿದ ಸ್ಟುವರ್ಟ್ ಬ್ರಾಡ್ 2 ಸ್ಥಾನ ಮೇಲಕ್ಕೇರಿ 16ನೇ ಸ್ಥಾನದಲ್ಲಿ ನಿಂತಿದ್ದಾರೆ.
ಲಿಯೋನ್ 6 ಸ್ಥಾನ ಏರಿಕೆ
ಒಟ್ಟಾರೆ 9 ವಿಕೆಟ್ ಕಿತ್ತು ಆಸ್ಟ್ರೇಲಿಯ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಥನ್ ಲಿಯೋನ್ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಆರು ಸ್ಥಾನ ಏರಿ 13ನೇ ಸ್ಥಾನದಲ್ಲಿದ್ದಾರೆ. 7 ವಿಕೆಟ್ ಹಾರಿಸಿದ್ದ ವೇಗಿ ಪ್ಯಾಟ್ ಕಮಿನ್ಸ್ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. ಅವರು ತನ್ನ ಜೀವನಶ್ರೇಷ್ಠ 898 ರೇಟಿಂಗ್ ಅಂಕ ತಲುಪಿದ್ದಾರೆ. ಇದು ಆಸ್ಟ್ರೇಲಿಯದ ಬೌಲರೊಬ್ಬರ ಮೂರನೇ ಶ್ರೇಷ್ಠ ನಿರ್ವಹಣೆಯಾಗಿದೆ. ಗ್ಲೆನ್ ಮೆಕ್‌ಗ್ರಾಥ್ ಮತ್ತು ಶೇನ್ ವಾರ್ನ್ ಮೊದಲ ಇಬ್ಬರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.