ಸ್ಮತಿ ಮಂಧನಾಗೆ “ವರ್ಷದ ಆಟಗಾರ್ತಿ’ ಸಮ್ಮಾನ
Team Udayavani, Jan 1, 2019, 1:30 AM IST
ದುಬಾೖ: ಭಾರತದ ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಐಸಿಸಿಯ ಅವಳಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2018ನೇ ಸಾಲಿನ “ವರ್ಷದ ಶ್ರೇಷ್ಠ ಆಟಗಾರ್ತಿ’ ಗೌರವದ ಜತೆಗೆ “ವರ್ಷದ ಶ್ರೇಷ್ಠ ಏಕದಿನ ಆಟಗಾರ್ತಿ’ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಇದರೊಂದಿಗೆ ಐಸಿಸಿ ಪ್ರಕಟಿಸಿದ ವರ್ಷದ ಏಕದಿನ ಹಾಗೂ ಟಿ20 ತಂಡಗಳಲ್ಲೂ ಮಂಧನಾ ಸ್ಥಾನ ಸಂಪಾದಿಸಿದ್ದಾರೆ.
ಐಸಿಸಿ ಗೌರವ ಸಂಪಾದಿಸಿದ ಭಾರತದ ಮತ್ತಿಬ್ಬರು ಆಟಗಾರ್ತಿಯರೆಂದರೆ ಹರ್ಮನ್‌ಪ್ರೀತ್ ಕೌರ್ ಮತ್ತು ಪೂನಂ ಯಾದವ್. ಇವರಲ್ಲಿ ಕೌರ್ ವರ್ಷದ ಏಕದಿನ ತಂಡದ ನಾಯಕಿಯಾಗಿ ಕಾಣಿಸಿಕೊಂಡರೆ, ಪೂನಂ ಏಕದಿನ ಹಾಗೂ ಟಿ20 ತಂಡಗಳೆರಡರಲ್ಲೂ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯದ ಅಲಿಸ್ಸಾ ಹೀಲಿ ವರ್ಷದ ಟಿ20 ಆಟಗಾರ್ತಿ ಪ್ರಶಸ್ತಿ ಪಡೆದರೆ, ಇಂಗ್ಲೆಂಡಿನ ಸೋಫಿ ಎಕ್Éಸ್ಟೋನ್ ಅವರಿಗೆ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಒಲಿದಿದೆ.
ಮಂಧನಾ ಸಾಧನೆ
ಸ್ಮತಿ ಮಂಧನಾ ಅವರ 2018ರ ಸಾಧನೆ ಅಮೋಘ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆಲ್ಲುವಲ್ಲಿ, ಶ್ರೀಲಂಕಾ ವಿರುದ್ಧ ಟಿ20 ಹಾಗೂ ಏಕದಿನ ಸರಣಿ ಜಯಿಸುವಲ್ಲಿ ಮಂಧನಾ ಪ್ರಮುಖ ಪಾತ್ರ ವಹಿಸಿದ್ದರು. 2018ರ 12 ಏಕದಿನ ಪಂದ್ಯಗಳಲ್ಲಿ 66.90ರ ಸರಾಸರಿಯಲ್ಲಿ ಸರ್ವಾಧಿಕ 669 ರನ್ ಬಾರಿಸಿದ್ದು ಮಂಧನಾ ಸಾಧನೆ. ಇದರಲ್ಲಿ ಒಂದು ಶತಕ, 7 ಅರ್ಧ ಶತಕ ಒಳಗೊಂಡಿದೆ.
2018ರ ಟಿ20 ಪಂದ್ಯಗಳಲ್ಲಿ 600 ರನ್ ಪ್ಲಸ್ ರನ್ ಪೇರಿಸಿದ ಸಾಧಕಿಯರಲ್ಲಿ ಮಂಧನಾ ಕೂಡ ಒಬ್ಬರು (622 ರನ್). ಈ ಯಾದಿಯಲ್ಲಿ ಅವರಿಗೆ 3ನೇ ಸ್ಥಾನ. ಟಿ20 ವಿಶ್ವಕಪ್‌ನಲ್ಲೂ 178 ರನ್ನುಗಳೊಂದಿಗೆ 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.
ವರ್ಷದ ಏಕದಿನ ಆಟಗಾರ್ತಿಯರ ಯಾದಿಯ ರೇಸ್‌ನಲ್ಲಿದ್ದ ನ್ಯೂಜಿಲ್ಯಾಂಡಿನ ಸೋಫಿ ಡಿವೈನ್ 2ನೇ, ಪಾಕಿಸ್ಥಾನದ ಸನಾ ಮಿರ್ 3ನೇ ಸ್ಥಾನ ಸಂಪಾದಿಸಿದರು.
ಹರ್ಮನ್‌ಪ್ರೀತ್ ಟಿ20 ನಾಯಕಿ
ಇದೇ ವೇಳೆ ಐಸಿಸಿ ವರ್ಷದ ಏಕದಿನ ಹಾಗೂ ಟಿ20 ತಂಡಗಳನ್ನೂ ಪ್ರಕಟಿಸಿದೆ. ಭಾರತದ ಹರ್ಮನ್‌ಪ್ರೀತ್ ಅವರಿಗೆ ಟಿ20 ತಂಡದ ನಾಯಕಿಯ ಗೌರವ ಒಲಿದಿದೆ. ನ್ಯೂಜಿಲ್ಯಾಂಡಿನ ಸುಝೀ ಬೇಟ್ಸ್ ಏಕದಿನ ತಂಡದ ನಾಯಕಿಯಾಗಿದ್ದಾರೆ.
ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಕೌರ್ ನೇತೃತ್ವದ ಭಾರತ ಸೆಮಿಫೈನಲ್ ತನಕ ಸಾಗಿತ್ತು. ಈ ಕೂಟದಲ್ಲಿ ಕೌರ್ ಗಳಿಕೆ 183 ರನ್. ಸ್ಟ್ರೈಕ್‌ರೇಟ್ 160.5.
2018ರಲ್ಲಿ 25 ಟಿ20 ಪಂದ್ಯಗಳನ್ನಾಡಿದ ಹರ್ಮನ್‌ಪ್ರೀತ್ ಕೌರ್ 126.2ರ ಸ್ಟ್ರೈಕ್‌ರೇಟ್‌ನಲ್ಲಿ 663 ರನ್ ಹೊಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.