Team India ಯಾಕೆ ಐಸಿಸಿ ಟ್ರೋಫಿ ಗೆಲ್ಲುತ್ತಿಲ್ಲ: ಕಾರಣ ಹೇಳಿದ ಗಂಗೂಲಿ
Team Udayavani, Jul 9, 2023, 1:16 PM IST
ಮುಂಬೈ: ಟೀಂ ಇಂಡಿಯಾವು 2013ರ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಸತತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೂಟದ ಫೈನಲ್ ತಲುಪಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಟೀಂ ಇಂಡಿಯಾದ ಟ್ರೋಫಿ ಬರದ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭಾರತದ ವೈಫಲ್ಯಗಳಿಗೆ ಮಾನಸಿಕ ಒತ್ತಡಕ್ಕಿಂತ ಹೆಚ್ಚಾಗಿ ಯೋಜನೆಯ ಕಾರ್ಯಗತಗೊಳಿಸುವಲ್ಲಿನ ಕೊರತೆಯೇ ಕಾರಣ ಎಂದು ಗಂಗೂಲಿ ಹೇಳಿದ್ದಾರೆ.
“ನಾವು ನಿರ್ಣಾಯಕ ಹಂತಗಳಲ್ಲಿ ಕೆಲವೊಮ್ಮೆ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಮಾನಸಿಕ ಒತ್ತಡ ಎಂದು ನಾನು ಭಾವಿಸುವುದಿಲ್ಲ, ಆದರೆ ಕಾರ್ಯಗತ ಮಾಡುವುದಕ್ಕೆ ಸಂಬಂಧಿಸಿದೆ. ಅವರು ಮಾನಸಿಕವಾಗಿ ಬಲವಾದ ಜನರು. ಆಶಾದಾಯಕವಾಗಿ, ಅವರು ಶೀಘ್ರದಲ್ಲೇ ಆ ಗೆರೆಯನ್ನು ದಾಟುತ್ತಾರೆ” ಎಂದು ಗಂಗೂಲಿ ಹೇಳಿದರು
ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಈ ಬಾರಿಯೂ ತಂಡವನ್ನು ಗಡಿ ದಾಟಿಸುವ ಭರವಸೆಯನ್ನು ಗಂಗೂಲಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Samantha Ruth Prabhu: ಮಾಧ್ಯಮಗಳಿಂದ ಮುಖ ಮುಚ್ಚಿಕೊಂಡು ನಡೆದ ನಟಿ ಸಮಂತಾ; ಯಾಕೆ?
“ಹೌದು, ಯಾವಾಗಲೂ ಭರವಸೆಯಿದೆ. ಡಬ್ಲ್ಯೂಟಿಸಿ ಯ ಫೈನಲ್‌ಗೆ ನಾವು ಅರ್ಹತೆ ಪಡೆದಿದ್ದೇವೆ, ಅದು ಸಹ ಸಾಧನೆಯಾಗಿದೆ. ನಮಗೆ ವಿಶ್ವಕಪ್ ನಲ್ಲಿ ಅವಕಾಶವಿದೆ. ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ, ಆಶಾದಾಯಕವಾಗಿ, ಈ ಬಾರಿ ವಿಶ್ವಕಪ್ ಗೆಲ್ಲುತ್ತೇವೆ” ಅವರು ಸೇರಿಸಿದರು.
2023ರ ಏಕದಿನ ವಿಶ್ವಕಪ್ ಕೂಟಕ್ಕೆ ಭಾರತ ಆತಿಥ್ಯ ವಹಿಸಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಕೂಟವು ಭಾರತದ ಹತ್ತು ನಗರಗಳಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.